ರೈಲ್ವೇ ನಿಲ್ದಾಣದಲ್ಲಿ ಮೀನುಗಳ ಮಸಾಜ್‌ : ಪ್ರಯಾಣಿಕರ ಪಾದಗಳಿಗೆ ಕಚಗುಳಿ!

Team Udayavani, Sep 10, 2021, 12:44 PM IST

ರೈಲ್ವೇ ನಿಲ್ದಾಣದಲ್ಲಿ ಮೀನುಗಳ ಮಸಾಜ್‌ : ಪ್ರಯಾಣಿಕರ ಪಾದಗಳಿಗೆ ಕಚಗುಳಿ!

ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶೀಘ್ರದಲ್ಲೇ ಮೀನುಗಳು ಮಸಾಜ್‌ ಮಾಡಲಿವೆ. ಪಾದಗಳಿಗೆ ಕಚಗುಳಿ ಇಟ್ಟು, ಒತ್ತಡದಲ್ಲಿರುವ ಪ್ರಯಾಣಿಕರನ್ನು “ರಿಲ್ಯಾಕ್ಸ್‌ ಮೂಡ್‌ ‘ಗೆ ಕರೆದೊಯ್ಯಲಿವೆ!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತೂಂದು ಪ್ರಥಮಕ್ಕೆ ಸಾಕ್ಷಿಯಾಗುತ್ತಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದ್ದು, ಹೆಚ್ಚು-ಕಡಿಮೆ ತಿಂಗಳಾಂತ್ಯದಲ್ಲಿ ಸೇವೆಗೂ ಅಣಿಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಮೀನುಗಳು ಮಸಾಜ್‌ ಮಾಡಿ, ಪಾದಗಳ ಅಂದ ಹೆಚ್ಚುಸುವುದರ ಜತೆಗೆ ಆಹ್ಲಾದಕರ ಅನುಭವದೊಂದಿಗೆ “ಕೂಲ್‌’ ಮಾಡಿ ಕಳುಹಿಸಲಿವೆ.

ನಿಲ್ದಾಣದ ಕಾಯ್ದಿರಿಸುವ ಕೌಂಟರ್‌ಗೆ ತೆರಳುವ ಮಾರ್ಗದಲ್ಲಿ (ಡಾಮಿನೊ ಪಿಜ್ಜಾ ಮಳಿಗೆ ಬಳಿ) ಈಗಾಗಲೇ 30/30 ಅಡಿ ಜಾಗದಲ್ಲಿ ಚಿತ್ತಾಕರ್ಷಕ ಕಾರಂಜಿಯನ್ನು ನಿರ್ಮಿಸಲಾಗಿದೆ. ಅದರ ಮೇಲೆ “ಐ ಲವ್‌ ಕೆಎಸ್‌ಆರ್‌ ಬೆಂಗಳೂರು’ ಎಂದು ಕೆತ್ತಲಾಗಿದೆ. ಇದೇ ಜಾಗದಲ್ಲಿ ಭಾರತೀಯ ರೈಲ್ವೆ ನಿಲ್ದಾಣಅಭಿವೃದ್ಧಿ ನಿಗಮವು “ಫಿಶ್‌ ಸ್ಪಾ’ಗೆ ವ್ಯವಸ್ಥೆ ಮಾಡುತ್ತಿದೆ.

ಏಕಕಾಲದಲ್ಲಿ ಆರರಿಂದ ಎಂಟು ಜನ ಇದರ ಉಪಯೋಗ ಪಡೆಯಬಹುದು. ಕನಿಷ್ಠ 15ರಿಂದ ಗರಿಷ್ಠ30 ನಿಮಿಷಗಳಕಾಲ ಈ ಮಸಾಜ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಸುರಂಗ ಅಕ್ವೇರಿಯಂಗೆ ಪ್ರವೇಶ ಶುಲ್ಕ ಇರುವಂತೆಯೇ ಮಸಾಜ್‌ಗೂ
ಕೈಗೆಟಕುವ ದರ ನಿಗದಿಪಡಿಸಲು ಬೆಂಗಳೂರು ವಿಭಾಗೀಯ ರೈಲ್ವೆ ಉದ್ದೇಶಿಸಿದೆ.

ಇದನ್ನೂ ಓದಿ :ಸರಳ ಆಚರಣೆಗೆ ದುಬಾರಿ ಪಯಣ! ಸುಲಿಗೆ ಮಾಡಿದ ಖಾಸಗಿ ಸಾರಿಗೆಗಳು ; ಮೌನಕ್ಕೆ ಶರಣಾದ ಇಲಾಖೆ

ಆದಾಯದಮೂಲವೂ…ಆರೋಗ್ಯದೃಷ್ಟಿಯೂ…:
ಹೊರಗುತ್ತಿಗೆ ಮೂಲಕ ಇದರ ನಿರ್ವಹಣೆ ಮಾಡಲಿದ್ದು, ಬರುವ ಆದಾಯದಲ್ಲಿ ಪಾಲುದಾರಿಕೆ ಹೊಂದುವ ಚಿಂತನೆ ಇದೆ. ಮೀನು ಮಸಾಜ್‌ ಉದ್ದೇಶ ಒಂದೆಡೆ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿ, ಮತ್ತೂಂದೆಡೆ ಆದಾಯದ ಮೂಲವೂ ಆಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಅಕ್ವೇರಿಯಂ, ಕಾರಂಜಿ, ಫಿಶ್‌ ಸ್ಪಾ, ರೈಲು ಆರ್ಕೆಡ್‌ನ‌ಂತಹ ಹಲವು ವಿನೂತನ ಪ್ರಯೋಗಗಳೊಂದಿಗೆ ಹೃದಯಭಾಗದಲ್ಲಿರುವ ರೈಲು ನಿಲ್ದಾಣವು ನಗರದ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಲಿದೆ. ಎಲ್ಲ ಮೀನುಗಳಿಂದ ಮಸಾಜ್‌ ಆಗುವುದಿಲ್ಲ.
ಇದಕ್ಕಾಗಿ ಹಲವು ಪ್ರಕಾರದ ಮೀನುಗಳಿವೆ. ಉದಾಹರಣೆಗೆ ಹರ್ಬಲ್, ವೈನ್‌, ಚಾಕೊಲೇಟ್‌ ಅಂಶಗಳ ಪೆಡಿಕ್ಯೂರ್‌ ಜನಪ್ರಿಯ. ಅಲ್ಲದೆ, ಓರಿಫ್ಲೇಮ್, ಮ್ಯಾಕ್‌, ವಿಎಲ್‌ಸಿಸಿ, ಓರ್ಲಿ ಇಂತಹ ಉತ್ತಮ ಗುಣಮಟ್ಟದ ಬ್ರ್ಯಾಂಡ್ ನ‌ ಪೆಡಿಕ್ಯೂರ್‌
ಮಾಡಿಸಿಕೊಳ್ಳಬೇಕಾದರೆ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದರ ಜತೆಗೆ ದೇಶೀಯವಾಗಿಯೂ ಕಡಿಮೆ ವೆಚ್ಚದಲ್ಲಿ ಪೆಡಿಕ್ಯೂರ್‌ ಮೀನಿನ ಪ್ರಕಾರಗಳೂ ಇವೆ. ಅವುಗಳನ್ನು ಪರಿಚಯಿಸುವ ಯೋಚನೆ ಇದೆ ಎಂದು ಹೆಸರು ಹೇಳಲಿಚ್ಛಿಸದ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು”ಫಿಶ್‌ ಸ್ಪಾ’?
ನೀವು ಪಾದಗಳನ್ನು ನೀರಿನಲ್ಲಿ ಇಳಿಬಿಟ್ಟು ಕೂರುತ್ತಿದ್ದಂತೆ ಬುಳುಬುಳು ಬಾಯಿ ಬಿಡುತ್ತಾಬರುವಮೀನುಗಳು, ಒಡೆದ ಪಾದದ ಚರ್ಮವನ್ನು ತಿಂದು ಹಾಕುತ್ತವೆ. ಮೊಣಕಾಲಿನವರೆಗೆ ಕಾಲುಗಳನ್ನು ತೊಳೆದುಕೊಂಡ ನಂತರ 50ರಿಂದ 60 ಪುಟ್ಟಪುಟ್ಟ ಮೀನುಗಳು ತುಂಬಿದ ನೀರಿನ ತೊಟ್ಟಿಯಲ್ಲಿ ಇಳಿಬಿಟ್ಟರೆ ಸಾಕು. 15 ನಿಮಿಷದಲ್ಲಿಬಿರುಕು ಪಾದವನ್ನು ನಯಗೊಳಿಸಿರುತ್ತದೆ. ನೀರಿನಲ್ಲಿ ನೆನೆಯುತ್ತಾ ಪಾದ ಮೃದುವಾಗುತ್ತಾ ಹೋದಂತೆ ಮೀನು ಮೇಲ್ಭಾಗದ ಚರ್ಮವನ್ನು ತಿಂದು ಹಾಕುತ್ತವೆ.

ಇದನ್ನೂ ಓದಿ :ಟ್ರಕ್ ನಿಂದ ಆಯತಪ್ಪಿ ಬಿದ್ದ ಚಾಲಕ : ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ

ಈ ಮೊದಲು ಸುರಂಗ ಮತ್ಸ್ಯಾಗಾರ ಆರಂಭ
ಜುಲೈನಲ್ಲಷ್ಟೇ ದೇಶದ ಮೊದಲ ಸುರಂಗ ಮತ್ಸ್ಯಾಗಾರವನ್ನು ಅನಾವರಣಗೊಂಡಿದೆ. ಅಮೆಜಾನ್‌ ನದಿ ಕಲ್ಪನೆಯಡಿ 12 ಅಡಿ ಉದ್ದದ ಈ ಸುರಂಗ ಮತ್ಸ್ಯಾಗಾರ ‌ (ಅಕ್ವೇರಿಯಂ) ರೂಪಿಸಲಾಗಿದೆ.

ಸುರಂಗದೊಳಗೆ ಸಾಗುತ್ತಿದ್ದರೆ, ಅಮೆಜಾನ್‌ ನದಿಯೊಳಗೆ ಸಾಗುತ್ತಿರುವ ಮೀನುಗಳನ್ನು ಪ್ರತ್ಯಕ್ಷ ‌ನೋಡುತ್ತಿರುವಂತೆ ಭಾಸವಾಗುತ್ತದೆ. ಸಾಗರದಲ್ಲಿ ಕಾಣಸಿಗುವ ಮತ್ಸ್ಯ ಪ್ರಭೇದಗಳು, ಸಮುದ್ರ ಜೀವಿಗಳ ಮಾದರಿಗಳು ಇಲ್ಲಿ ಇವೆ. ಈ ಸುರಂಗ ಪ್ರವೇಶಕ್ಕೆ 25 ರೂ ಶುಲ್ಕ ನಿಗದಿ ಮಾಡಲಾಗಿದೆ.

ಏನು ಉಪಯೋಗ?
– ಮೀನುಗಳು ಉಗುರಿನ ಮಧ್ಯ ಇರುವ ಕಸ, ಒಣಗಿ ಸಿಬಿರು ಎದ್ದ ಚರ್ಮವನ್ನು ತಿಂದು ಹಾಕುವುದರಿಂದ ಸ್ಕ್ರಬ್ಬಿಂಗ್ ಆಗುತ್ತದೆ.
– ಒರಟು ಚರ್ಮ ತಿನ್ನುವಾಗ ಚರ್ಮಕ್ಕೆ ಉತ್ತಮ ಮಸಾಜ್‌ ಸಿಗುತ್ತದೆ. ಚರ್ಮಕ್ಕೆ ಹೊಳಪು ಬರುತ್ತದೆ.
– ಕೆಲ ಪ್ರಷರ್‌ ಪಾಯಿಂಟ್‌ ಮೇಲೆ ನಯವಾಗಿ ಒತ್ತುವುದರಿಂದ ಒತ್ತಡ ನೋವು ಶಮನಗೊಳ್ಳುತ್ತದೆ.
– ಮೀನು ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಅಂಗಾಲು ಹುಣ್ಣು, ಗಾಯಕ್ಕೂ ಇದು ಶಮನಕಾರಿ.
– ಮೀನಿನ ಎಂಜಲಿನಲ್ಲಿ ಉತ್ತಮ ಆಂಟಿಸೆಪ್ಟಿಕ್‌ ಗುಣವಿದ್ದು ಇದರಿಂದ ಹುಣ್ಣು ಬೇಗ ಮಾಯುತ್ತದೆ.

– ವಿಜಯ ಕುಮಾರ್ ಚಂದರಗಿ

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.