ಮೀನುಗಾರರ ಡೀಸೆಲ್ ತೆರಿಗೆ ಮರುಪಾವತಿ ಸೌಲಭ್ಯ: ಅಂಗಾರ
Team Udayavani, Mar 24, 2022, 6:15 AM IST
ಬೆಂಗಳೂರು: ಮೀನುಗಾರಿಕಾ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟ ತೆರಿಗೆ ಮರುಪಾವತಿ ಸೌಲಭ್ಯವನ್ನು ಒಳನಾಡು ಹಾಗೂ ನದಿಪಾತ್ರದ ಮೀನುಗಾರರಿಗೆ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್. ಅಂಗಾರ ಅವರು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಸೌಲಭ್ಯವನ್ನು ಒಳನಾಡು ಮತ್ತು ನದಿಪಾತ್ರದ ಮೀನುಗಾರರಿಗೆ ಒದಗಿಸಬೇಕು ಎನ್ನುವ ವಿಚಾರ ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
84.86 ಕೋಟಿ ರೂ. ಪಾವತಿ
2015-16ರಿಂದ 2021ರ ಮೇ ವರೆಗೆ ಮೀನುಗಾರಿಕಾ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟ ತೆರಿಗೆ ಮರುಪಾವತಿ ಯೋಜನೆಯಡಿ ಯಾಂತ್ರೀಕೃತ ದೋಣಿ ಮಾಲಕರು ವಾರ್ಷಿಕ 1.50 ಲಕ್ಷ ಕಿಲೋ ಲೀಟರ್ ಡೀಸೆಲ್ ಮೇಲಿನ ಮಾರಾಟ ಕರವನ್ನು ಮರುಪಾವತಿ ಮಾಡಲು ಅವಕಾಶವಿತ್ತು. ಅದರಂತೆ 2021-22ನೇ ಸಾಲಿನಲ್ಲಿ 84.86 ಕೋಟಿ ರೂ.ಗಳನ್ನು ಮೀನುಗಾರರಿಗೆ ಪಾವತಿಸಲಾಗಿದೆ. ಆಗಸ್ಟ್ನಿಂದ ತೆರಿಗೆ ರಹಿತ ಡೀಸೆಲ್ ವಿತರಿಸಲು ಆದೇಶಿಸಲಾಗಿದೆ ಎಂದರು.
ಕೇಂದ್ರದಿಂದಲೂ ಬಿಡುಗಡೆ
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ 2020-21ನೇ ಸಾಲಿನಲ್ಲಿ ಕೇಂದ್ರ ಸರಕಾರ 50.33 ಕೋಟಿ ರೂ. ನಿಗದಿಪಡಿಸಿದ್ದು, 46.18 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೊತ್ತಕ್ಕೆ ಅನುಗುಣವಾಗಿ ರಾಜ್ಯ ಸರಕಾರ 33.02 ಕೋಟಿ ರೂ. ಬಿಡುಗಡೆ ಮಾಡಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರಕಾರ 70 ಕೋಟಿ ರೂ. ನಿಗದಿಪಡಿಸಿ 35.25 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರಕಾರ 13.63 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವ ಅಂಗಾರ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.