ಒಂದೇ ವಾರದಲ್ಲಿ 2 ಬಾರಿ ಹೃದಯಸ್ತಂಭನ…33 ವರ್ಷದ ಫಿಟ್ನೆಸ್ ಇನ್ ಫ್ಲುಯೆನ್ಸರ್ ಮೃತ್ಯು
ನಮ್ಮ ಕುಟುಂಬಕ್ಕೆ ತುಂಬಲಾರದ ಹಾಗೂ ಭರಿಸಲಾಗದ ನಷ್ಟವಾಗಿದೆ.
Team Udayavani, Aug 31, 2023, 2:44 PM IST
ಬ್ರೆಸಿಲಿಯಾ(ಬ್ರೆಜಿಲ್): ಒಂದೇ ವಾರದಲ್ಲಿ ಎರಡು ಬಾರಿ ಹೃದಯಸ್ತಂಭನಕ್ಕೊಳಗಾಗಿ ಬ್ರೆಜಿಲ್ ನ ಪ್ರಸಿದ್ಧ ಫಿಟ್ನೆಸ್ ಇನ್ ಫ್ಲುಯೆನ್ಸರ್ ಲಾರಿಸ್ಸಾ ಬೋರ್ಗೇಸ್ (33ವರ್ಷ) ಕೊನೆಯುಸಿರೆಳೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:Pragyan Rover; ಚಂದಮಾಮನ ಅಂಗಳದಲ್ಲಿ ಮಗುವಿನ ಆಟ..: ಹೊಸ ವಿಡಿಯೋ ರಿಲೀಸ್ ಮಾಡಿದ ಇಸ್ರೋ
ಲಾರಿಸ್ಸಾ ಬೋರ್ಗೇಸ್ ವಿಧಿವಶರಾಗಿರುವುದನ್ನು ಕುಟುಂಬ ಸದಸ್ಯರು ಆಕೆಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ. “ಇದೊಂದು ತುಂಬಾ ದುಃಖಕರವಾದ ಸಂಗತಿಯಾಗಿದ್ದು, ನಮ್ಮ ಪ್ರೀತಿಯ ಲಾರಿಸ್ಸಾ ಸಾವನ್ನಪ್ಪಿರುವುದಾಗಿ” ತಿಳಿಸಿದ್ದರು.
ಆಗಸ್ಟ್ 20ರಂದು ಮೊದಲ ಬಾರಿ ಲಾರಿಸ್ಸಾ ಹೃದಯಸ್ತಂಭನಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸುಮಾರು ಒಂದು ವಾರಗಳ ಕಾಲ ಕೋಮಾಸ್ಥಿತಿಯಲ್ಲಿದ್ದಳು. ಏತನ್ಮಧ್ಯೆ ಲಾರಿಸ್ಸಾ ಆಗಸ್ಟ್ 28ರಂದು ಎರಡನೇ ಬಾರಿ ಸ್ತಂಭನಕ್ಕೊಳಗಾಗಿದ್ದು, ದುರದೃಷ್ಟವೆಂಬಂತೆ ಆಕೆ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
33ನೇ ವಯಸ್ಸಿನಲ್ಲಿ ಲಾರಿಸ್ಸಾ ಕೊನೆಯುಸಿರೆಳೆದಿದ್ದು, ನಮ್ಮ ಕುಟುಂಬಕ್ಕೆ ತುಂಬಲಾರದ ಹಾಗೂ ಭರಿಸಲಾಗದ ನಷ್ಟವಾಗಿದೆ. ನಮ್ಮ ಹೃದಯ ಭಾರವಾಗಿದ್ದು, ಹೇಗೆ ಪ್ರತಿಕ್ರಿಯಿಸಬೇಕೆಂಬುದು ತಿಳಿಯುತ್ತಿಲ್ಲ ಎಂದು ಕುಟುಂಬ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಲಾರಿಸ್ಸಾ ಬೋರ್ಗೇಸ್ ಬ್ರೆಜಿಲ್ ನಲ್ಲಿ ಫಿಟ್ನೆಸ್ ಟಿಪ್ಸ್ ಕೊಡುವ ಮೂಲಕ ಜನಪ್ರಿಯರಾಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ 30,000ಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು. ಪ್ರವಾಸದ ಬಗ್ಗೆಯೂ ಆಕೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.