ಸರ್ಜಿಕಲ್ ದಾಳಿಗೆ ಐದು ವರ್ಷ
Team Udayavani, Sep 30, 2021, 6:10 AM IST
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ 2016 ಸೆ.18ರಂದು ಪಾಕ್‌ನ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ಆಗ, 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರವಾಗಿ 2016ರ ಸೆ.29ರಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು. ಆ ವೀರೋಚಿತ ಕಾರ್ಯಾಚರಣೆಗೆ ಬುಧವಾರ 5 ವರ್ಷಗಳು ಪೂರ್ತಿಯಾಗಿವೆ.
ಹೇಗಾಗಿತ್ತು ಕಾರ್ಯಾಚರಣೆ?
-ಭದ್ರತೆ ಮತ್ತು ಗೌಪ್ಯ ಕಾರಣಗಳಿಗಾಗಿ ಕಾರ್ಯಾಚರಣೆಯ ದಿನಾಂಕ ಬದಲಾವಣೆ ಮಾಡಲಾಗಿತ್ತು. ಈ ಬಗ್ಗೆ ಪ್ರಧಾನಿ ಮೋದಿಯವರೇ ಮಾಹಿತಿ ನೀಡಿದ್ದರು. ದಾಳಿಯಿಂದ ಫಲ ಸಿಗುತ್ತದೋ, ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಸೂರ್ಯೋದಯದ ಮೊದಲು ಸುರಕ್ಷಿತರಾಗಿ ಎಂದು ಯೋಧರಿಗೆ ಸೂಚಿಸಿದ್ದರು.
-ಕೇಂದ್ರ ಸರಕಾರ ಮತ್ತು ಸೇನೆ ಕಾರ್ಯಾಚರಣೆ ನಡೆಸಿದ್ದ ಯೋಧರ ತಂಡಕ್ಕೆ ಉಗ್ರರನ್ನು ಶಿಕ್ಷಿಸುವ ಕ್ರಮ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿತ್ತು.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ
ಕಾರ್ಯಾಚರಣೆಯಿಂದ
ಏನಾಯಿತು?
ಪಿಒಕೆಯಲ್ಲಿ ನಮ್ಮ ದೇಶದ ಯೋಧರು 35-40 ಉಗ್ರರನ್ನು ಕೊಂದು ಹಾಕಿದ್ದರು.
ಯೋಜನೆ, ಸಿದ್ಧತೆ ಹೇಗಿತ್ತು?
-2016ರ ಸೆ.27ರಂದು ಎಲ್‌ಒಸಿ ಸಮೀಪ ಇರುವ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿತ್ತು.
-ಸೆ.24ರಂದೇ ಸರ್ಜಿಕಲ್ ದಾಳಿ ನಡೆಸಲು ಯೋಧರ ಆಯ್ಕೆ ನಡೆಸಿ, ತಂಡ ಸಿದ್ಧಗೊಳಿಸಲಾರಂಭಿಸಿತ್ತು. ನೈಟ್ ವಿಷನ್ ಡಿವೈಸ್, ಎ.ಕೆ.47 ರೈಫಲ್, ಟವೋರ್ 21 ಗನ್‌ಗಳಿಂದ ಪ್ರತೀಕಾರಕ್ಕೆ ಸಿದ್ಧವಾಗಿತ್ತು.
-ಇದರ ಜತೆಗೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್‌ಗಳು, ಭಾರೀ ಪ್ರಮಾಣದ ಸ್ಫೋಟಕಗಳಿದ್ದವು.
-ಅದರಲ್ಲಿ ಭಾರೀ ಯಶಸ್ಸು ಉಂಟಾಗಿತ್ತು. ಹೀಗಾಗಿ, ಪ್ರತೀ ವರ್ಷದ ಸೆ.29ನ್ನು “ಸರ್ಜಿಕಲ್ ದಾಳಿಯ ದಿನ’ ಎಂದು ಆಚರಿಸಲಾಗುತ್ತದೆ.
-2018ರಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸಮ್ಮಾನ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.