ಅಪಾಯಮಟ್ಟ ಮೀರುತ್ತಿದೆ ಕೃಷ್ಣೆಯ ಹರಿವು: ಬರದ ಜಿಲ್ಲೆಗೆ ನುಗ್ಗಿದ ನೀರು

Team Udayavani, Aug 4, 2019, 9:00 AM IST

3

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬಾಗಲಕೋಟೆ ಜಿಲ್ಲೆಯ ಮೂರು ನದಿಗಳು ತುಂಬಿ ಹರಿಯುತ್ತಿದೆ. ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ ಸುತ್ತ ಭಾರಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ 2,28,121 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯಕ್ಕೆ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹ ಉಂಟಾಗದಂತೆ ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 2,58,710 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

8 ಸೇತುವೆ ಜಲಾವೃತ
ಕಳೆದ ಐದು ವರ್ಷಗಳಿಂದ ಬರ ಎದುರಿಸಿದ್ದ ಜಿಲ್ಲೆಯ ಜನರು, ಈ ಭಾರಿ ನದಿ ಪಾತ್ರದಲ್ಲಿ ಭರ್ತಿ ನೀರು ಕಾಣುತ್ತಿದ್ದಾರೆ. ಘಟಪ್ರಭಾ ನದಿಯ 5 ಸೇತುವೆ ಸಹಿತ ಬ್ಯಾರೇಜ್ ಹಾಗೂ ಕೃಷ್ಣಾ ನದಿಯ ಜಮಖಂಡಿ ತಾಲೂಕು ವ್ಯಾಪ್ತಿಯ ಮೂರು ಸೇತುವೆಗಳು ಜಲಾವೃತಗೊಂಡಿವೆ. ಹೀಗಾಗಿ ಜನರು ಸುಮಾರು 25ರಿಂದ 40 ಕಿ.ಮೀ ವರೆಗೆ ಸುತ್ತಿ- ತಮ್ಮೂರು ಸೇರುತ್ತಿದ್ದಾರೆ.

10 ಕುಟುಂಬ ಸುರಕ್ಷಿತ ಸ್ಥಳಕ್ಕೆ
ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮ, ಕೃಷ್ಣಾ ನದಿಗೆ ಹೊಂದಿಕೊಂಡಿದ್ದು, ನದಿ ಪಕ್ಕದಲ್ಲಿದ್ದ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಗ್ರಾಮದಲ್ಲಿ (ಭಾಗಶಃ ಮುಳುಗಡೆ ಗ್ರಾಮ) 38 ಕುಟುಂಬಗಳು ನದಿ ಪಕ್ಕದಲ್ಲಿದ್ದು, ಅವರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಎಸಿ ಅಕ್ರಮ್ ಷರಿಫ್, ತಹಶೀಲ್ದಾರರು ಪ್ರವಾಹ ಭೀತಿ ಎದುರಿಸುತ್ತಿರುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಇತ್ತ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಸಂಜೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಯಲ್ಲಿರುವ ಅಧಿಕಾರಿಗಳಿಗೆ ಸೂಚಿಸಿದರು.

ಇಂತಹ ಪರಿಸ್ಥಿತಿ 2007 ಮತ್ತು 2009ರಲ್ಲಿ ಉಂಟಾಗಿತ್ತು. ನಂತರದ ಹಲವು ವರ್ಷಗಳಲ್ಲಿ ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಟಾಪ್ ನ್ಯೂಸ್

Sonia gandhi

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ

13

Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ

Priyank-Gandhi

Parliament: ʼಪ್ಯಾಲೆಸ್ತೀನ್‌ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

1-dinnu

Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ

1-dinnu

Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ

1-viji

Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ

Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Sonia gandhi

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ

13

Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ

Priyank-Gandhi

Parliament: ʼಪ್ಯಾಲೆಸ್ತೀನ್‌ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!

11

KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.