Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
ಲಾಭದ ಆಸೆಗೆ ಆಹಾರದ ಕಲಬೆರಕೆ; ಆರೋಗ್ಯಕ್ಕೆ ಮಾರಕ, ಕಲಬೆರಕೆ ತಡೆಗೆ ಪ್ರಬಲವಾದ ಕಾನೂನುಗಳು ಜಾರಿಯಲ್ಲಿವೆ
Team Udayavani, Sep 28, 2024, 6:25 PM IST
ಅಂಗಡಿಯಿಂದ ಖರೀದಿಸಿದ ದಿನನಿತ್ಯ ಬಳಕೆಯ ಸಾಮಗ್ರಿಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವ ಜಿಜ್ಞಾಸೆ ಎಲ್ಲರದೂ. ಅದರಲ್ಲೂ ತಿರುಪತಿ ದೇಗುಲದ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬುಯುಕ್ತ ತುಪ್ಪ ಇತ್ತು ಎಂದು ವರದಿಯಾದ ಮೇಲಂತೂ ಕಲಬೆರಕೆ ಬಗ್ಗೆ ಎಲ್ಲರೂ ಚಿಂತಿತರಾಗಿದ್ದಾರೆ. ಯಾರಿಗೆ ಗೊತ್ತು, ಯಾವ್ಯಾವ ಆಹಾರ(Food)ದಲ್ಲಿ ಏನೇನು ಸೇರಿಸಿದ್ದಾರೆ ಎಂದು? ಅದನ್ನು ತಿಳಿಯಲಿಕ್ಕಾಗಿಯೇ ಕೆಲವು ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಹಚ್ಚುವ ಕೆಲವು ವಿಧಾನ ಇಲ್ಲಿ ನೀಡಲಾಗಿದೆ.
ಸರಳವಾಗಿ ಹೇಳುವುದಾದರೆ, ಶುದ್ಧ ಆಹಾರ ಪದಾರ್ಥಗಳಿಗೆ ಕೆಲವು ಕಳಪೆ ವಸ್ತುಗಳು ಅಥವಾ ಉತ್ಪನ್ನಗಳನ್ನು ಸೇರಿಸುವುದನ್ನು ಆಹಾರ ಕಲಬೆರಕೆ ಎಂದು ವ್ಯಾಖ್ಯಾನಿಸಬಹುದು. ಹೆಚ್ಚಿನ ಲಾಭದ ಆಸೆಗೋಸ್ಕರ ಶುದ್ಧ ಆಹಾರಗಳಿಗೆ ಕಳಪೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಆಹಾರ ಕಲಬೆರಕೆಯಿಂದ ಅವುಗಳ ಪೌಷ್ಟಿಕಾಂಶ ತಗ್ಗುತ್ತದೆ. ಇಂಥ ಕಲಬೆರಕೆಯುಕ್ತ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವೂ ಹೌದು. ಡೇರಿ ಉತ್ಪನ್ನಗಳು, ಕಾಳುಗಳು, ಧಾನ್ಯಗಳು, ಮಾಂಸ, ತರಕಾರಿಗಳು, ಹಣ್ಣುಗಳು, ಎಣ್ಣೆಗಳು, ಪಾನೀಯಗಳು ಇತ್ಯಾದಿಗಳನ್ನು ಒಳಗೊಂಡಂತೆ ನಾವು ಪ್ರತಿದಿನ ಸೇವಿಸುವ ಎಲ್ಲ ಆಹಾರ ಉತ್ಪನ್ನಗಳಲ್ಲಿ ಈ ಕಲಬೆರಕೆಗಳು ಇರುತ್ತವೆ.
ಕೆಲವು ಕಲಬೆರಕೆ ಪದಾರ್ಥಗಳ ಪತ್ತೆಗೆ ಹೀಗೆ ಮಾಡಿ..
ಇದನ್ನು ಪತ್ತೆ ಹಚ್ಚಲು 1 ಗ್ಲಾಸ್ ನೀರಿನಲ್ಲಿ ಸಕ್ಕರೆ ಹಾಕಿ. ಕೂಡಲೇ ಸಕ್ಕರೆ ಕರಗಿ, ಸೀಮೆ ಸುಣ್ಣ, ಬಿಳಿ ಮರಳು, ಕಲ್ಲಿನ ಪುಡಿ ಇತ್ಯಾದಿ ತಳದಲ್ಲಿ ಉಳಿಯುತ್ತಿದೆ. ಅಮೋನಿಯಾ ವಾಸನೆ ಬಂದರೆ ಯೂರಿಯಾ ಬಳಸಿದ್ದಾರೆ ಎಂದರ್ಥ.
ಇದನ್ನು ಪತ್ತೆ ಹಚ್ಚಲು ನೀವು ಎರಡ್ಮೂರು ಚಿಕ್ಕ ತುಣುಕುಗಳನ್ನು ಸಣ್ಣ ಪಾತ್ರೆಗೆ ಹಾಕಿ. ನೀರು ಸೇರಿಸಿ ಕುದಿಸಿ. ಕೋಣೆಯ ಉಷ್ಣಾಂಶದಲ್ಲಿ ಅದನ್ನು ಆರಿಸಿ. ಬಳಿಕ, ಪಾತ್ರೆಗೆ ಒಂದೆರಡು ಹನಿ ಅಯೋಡಿನ್ ಸೇರಿಸಿ. ನೀರು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.
ಈ ಕಲಬೆರಕೆ ಪತ್ತೆ ಹಚ್ಚಲು ಐಸ್‌ಕ್ರೀಮ್ ಮೇಲೆ ನಿಂಬೆ ಹಣ್ಣಿನ ರಸ ಸುರಿಯಿರಿ. ಆಗ ಗುಳ್ಳೆಗಳು ಕಾಣಿಸಿಕೊಂಡರೆ ಕಲಬೆರಕೆಯಾಗಿರುವುದು ಪಕ್ಕಾ.
ಇದನ್ನು ಪತ್ತೆ ಹಚ್ಚಲು ಸ್ಯಾಂಪಲ್‌ಗಳನ್ನು ತೇವಾಂಶಯುಕ್ತ ಬ್ಲಾಟಿಂಗ್ ಪೇಪರ್ ಮೇಲೆ ಇಡಿ. ಕೃತಕ ಬಣ್ಣವು ಅಂಟಿಕೊಂಡರೆ ಕಲಬೆರಕೆಯಾಗಿದೆ ಎಂದರ್ಥ.
ಇದನ್ನು ಪತ್ತೆ ಹಚ್ಚಲು, ಒಂದು ಗ್ಲಾಸ್ ನೀರಿನ ಮೇಲೆ ನಿಧಾನವಾಗಿ ಕಾಫಿ ಪುಡಿಯನ್ನು ಎರಚಿ. ಆಗ ಕಾಫಿ ತೇಲಲಾರಂಭಿಸುತ್ತದೆ ಮತ್ತು ಚಿಕೋರಿ ಕೆಲವೇ ಸೆಕೆಂಡ್‌ಗಳಲ್ಲಿ ಮುಳುಗಲಾರಂಭಿಸುತ್ತದೆ.
ಪತ್ತೆ ಹಚ್ಚಲು ಬಿಳಿ ಕಾಗದದ ಮೇಲೆ ಟೀ ಪುಡಿಯನ್ನು ತಿಕ್ಕಬೇಕು. ಕೃತಕ ಬಣ್ಣವು ಬಿಳಿ ಕಾಗದಕ್ಕೆ ಅಂಟಿಕೊಳ್ಳುತ್ತದೆ. ಇನ್ನು ಬಳಸಿದ ಟೀ ಪುಡಿ ಪತ್ತೆ ಹಚ್ಚಲು ಹಸಿ ಫಿಲ್ಟರ್ ಕಾಗದದ ಮೇಲೆ ಟೀ ಪುಡಿಯನ್ನು ಚಿಮುಕಿಸಿ. ಕಲಬೆರಕೆಯಾಗಿದ್ದರೆ ಕಾಗದದ ಮೇಲೆ ಕೆಂಪು ಅಥವಾ ಗುಲಾಬಿ ಕಲೆಗಳು ಕಾಣುತ್ತವೆ. ಕಬ್ಬಿಣದ ಅಂಶಗಳನ್ನು ಪತ್ತೆ ಹಚ್ಚಲು ಟೀ ಪುಡಿಯನ್ನು ಹರಡಿ ಅದರ ಮೇಲೆ ಮ್ಯಾಗ್ನೇಟ್ ತೆಗೆದುಕೊಂಡು ಹೋದರೆ ಕಬ್ಬಿಣ ಅದಕ್ಕೆ ಅಂಟಿಕೊಳ್ಳುತ್ತದೆ.
ನೀರಿನಲ್ಲಿ ಅದ್ದಿದ ಹತ್ತಿಯನ್ನು ತೆಗೆದುಕೊಂಡು ರಾಗಿ ಮೇಲೆ ಉಜ್ಜಿ. ಕಲಬೆರಕೆಯಾಗಿದ್ದರೆ ಹತ್ತಿಯು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅದೇ ರೀತಿ ಕೃತಕ ಬಣ್ಣ ಬಳಸಿದ್ದರೆ, ಹತ್ತಿಯ ಉಂಡೆಯನ್ನು ವೆಜಿಟೆಬಲ್ ಎಣ್ಣೆಯಲ್ಲಿ ಅದ್ದಿದಾಗ ಅದು ಅದರ ಬಣ್ಣದಲ್ಲಿ ಬದಲಾವಣೆಯಾದರೆ ರಾಗಿ ಕಲಬೆರಕೆಯಾಗಿದೆ ಎಂದರ್ಥ.
ಇದನ್ನು ಪತ್ತೆ ಹಚ್ಚಲು, ಖಾರದ ಪುಡಿಯನ್ನು ಒಂದು ಗ್ಲಾಸ್ ನೀರಿನೊಳಗೆ ಹಾಕಿದಾಗ, ಕಲಬೆರಕೆಯಾಗಿದ್ದರೆ ಇಟ್ಟಿಗೆ ಪುಡಿ ವೇಗವಾಗಿ ತಳವನ್ನು ಸೇರುತ್ತದೆ ಮತ್ತು ಖಾರ ನಿಧಾನವಾಗಿ ತಳ ಸೇರುತ್ತದೆ. ಗಾಜಿನ ಲೋಟದ ನೀರಿನ ಮೇಲೆ ಸ್ವಲ್ವ ಮೆಣಸಿನ ಪುಡಿಯನ್ನು ಎರಚಿ. ಕೃತಕ ಬಣ್ಣವನ್ನು ಬಳಸಿದ್ದರೆ, ಅದು ಗೆರೆಗಳು ಎಳೆದಂತೆ ಕಾಣುತ್ತದೆ.
ಇದನ್ನು ಪತ್ತೆ ಹಚ್ಚಲು ಅಲ್ಕೋಹಾಲ್‌ನಲ್ಲಿ ಕಾಳುಮೆಣಸುಗಳನ್ನು ಹಾಕಿ. ಕೂಡಲೇ ಅಸಲಿ ಕಾಳುಮೆಣಸು ಮುಳುಗುತ್ತದೆ ಮತ್ತು ಪಪಾಯ ಬೀಜಗಳು ತೇಲಲು ಆರಂಭಿಸುತ್ತವೆ. ಬಲಿಯದ ಕಾಳುಮೆಣಸು ಕೂಡ ಮುಳುಗುವುದಿಲ್ಲ.
ಇದರ ಪತ್ತೆಗಾಗಿ ನೀವು ಒಂದು ಗ್ಲಾಸ್ ತಣ್ಣೀರು ತೆಗೆದುಕೊಳ್ಳಿ ಮತ್ತು ಒಂದು ಸ್ಪೂನ್ ತುಪ್ಪನ್ನು ಸುರಿಯಿರಿ. ಶುದ್ಧ ತುಪ್ಪವಾದರೆ ತೇಲುತ್ತದೆ. ಇಲ್ಲದಿದ್ದರೆ ಅದು ನೀರಿನೊಂದಿಗೆ ಬೆರೆಯುತ್ತದೆ.
ಕಡು ಬಣ್ಣದ, ಜಂಕ್ ಮತ್ತು ಇತರ ಸಂಸ್ಕರಿತ ಆಹಾರ ಪದಾರ್ಥ ಸೇವಿಸಬೇಡಿ
ಎಲ್ಲ ಕಾಳು, ಧಾನ್ಯ ಸೇರಿ ಇತರ ಆಹಾರ ಪದಾರ್ಥಗಳನ್ನು ಸ್ವತ್ಛವಾಗಿಯೇ ಎಂದು ಖಾತ್ರಿಪಡಿಸಿಕೊಳ್ಳಿ
ಹಾಲು, ಎಣ್ಣೆ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುವಾಗ ಸೀಲ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಯಾವಾಗಲೂ ಎಫ್ಎಸ್‌ಎಐ(ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)ನ ಅಧಿಕೃತ ಲೇಬಲ್ ಜತೆಗೆ ಲೈಸನ್ಸ್ ನಂಬರ್, ಬಳಕೆಯಾಗಿರುವ ವಸ್ತುಗಳ ಮಾಹಿತಿ, ಉತ್ಪಾದನ ದಿನಾಂಕ ಸೇರಿ ಇತರ ಮಾಹಿತಿ ಇರುವ ವಸ್ತುಗಳನ್ನು ಖರೀದಿಸಿ.
ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಗುಣಮಟ್ಟ ಪರೀಕ್ಷಿಸುವುದನ್ನು ಮರೆಯಬಾರದು.
ಬಹುತೇಕ ಸಂಸ್ಕರಿತ ಆಹಾರ ಪದಾರ್ಥಗಳನ್ನು ದೂರ ಮಾಡುವುದೇ ಒಳ್ಳೆಯದು.
ಆರೋಗ್ಯದ ಮೇಲೆ ತೊಂದರೆ
ಕಲಬೆರಕೆ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಾನವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪೌಷ್ಟಿಕಾಂಶ ಕೊರತೆ, ಕಿಡ್ನಿ ಸಮಸ್ಯೆ, ಲಿವರ್, ಹೃದಯ ಸೇರಿದಂತೆ ದೇಹದ ಹಲವು ಅಂಗಾಂಗ ವೈಫಲ್ಯಗಳಿಗೂ ಕಾರಣವಾಗುತ್ತದೆ.
ಕಲಬೆರಕೆ ತಡೆಗೆ ಎಫ್ಎಸ್‌ಎಸ್‌ಎಐ ಕ್ರಮ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ)ವು ಆಹಾರ ಕಲಬೆರಕೆ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಆನ್‌ಲೈನಲ್ಲಿ ಚೆಕ್ ಮಾಡಬಹುದು.
ರ್ಯಾಪಿಡ್ ಟೆಸ್ಟ್ ಬುಕ್ ಮೂಲಕ ಕಲಬೆರಕೆ ಪತ್ತೆ(ಡಾರ್ಟ್): ಗೃಹ ಬಳಕೆ ವಸ್ತುಗಳ ಕಲಬೆರಕೆ ಪತ್ತೆಗೆ ರೂಪಿಸಲಾದ ಕೈಪಿಡಿ. ಹಾಲು, ಎಣ್ಣೆ, ಸಕ್ಕರೆ ಸೇರಿದಂತೆ ಮನೆ ಬಳಕೆಯ ವಸ್ತುಗಳ ಕಲಬೆರಕೆ ಪತ್ತೆ ಹಚ್ಚುವ ಕ್ರಮಗಳನ್ನು ಈ ಪುಸ್ತಕ ಒಳಗೊಂಡಿದೆ.
ಆಹಾರ ಸುರಕ್ಷತೆಯ ಜಾದೂ ಪೆಟ್ಟಿಗೆ: ಇದು ಶಾಲಾ ಮಕ್ಕಳಿಗೆ ರೂಪಿಸಲಾದ ಕಿಟ್. ಪೋರ್ಟೆಬಲ್ ಬಾಕ್ಸ್‌ನಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚುವ ಮಾಹಿತಿ ಇರುತ್ತದೆ.
ಭಾರತದಲ್ಲಿ ಆಹಾರ ಕಲಬೆರಕೆ ತಡೆಗೆ ಪ್ರಬಲವಾದ ಕಾನೂನುಗಳು ಜಾರಿಯಲ್ಲಿವೆ. 1954ರ ಆಹಾರ ಕಲಬೆರಕೆ ತಡೆ ಕಾಯ್ದೆಯು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಈ ಕಾಯ್ದೆ 1954 ಜೂನ್ 15ರಿಂದ ಜಾರಿಗೆ ಬಂದಿದೆ. ಸ್ವಾತಂತ್ರ್ಯ ಪೂರ್ವ 1923ರ ಕಲ್ಕತ್ತಾ ಮುನ್ಸಿಪಲ್ ಕಾಯ್ದೆ, ಯುಪಿ ಪರಿಶುದ್ಧ ಆಹಾರ ಕಾಯ್ದೆ, 1929ರ ಪಂಜಾಬ್ ಪರಿಶುದ್ಧ ಆಹಾರ ಕಾಯ್ದೆ, 1948ರ ಬಿಹಾರ ಆಹಾರ ಕಲಬೆರಕೆ ತಡೆ ಕಾಯ್ದೆಗಳು ಜಾರಿಯಲ್ಲಿದ್ದವು.
ಈಗ ಸದ್ಯ 1954ರ ಕಲಬೆರಕೆ ಆಹಾರ ತಡೆ ಕಾಯ್ದೆಯು ಜಾರಿಯಲ್ಲಿದೆ. ಆಹಾರ ಕಲಬೆರಕೆಯನ್ನು ವ್ಯಾಖ್ಯಾನಿಸುವ ಈ ಕಾಯ್ದೆಯು, ನಿಯಮಗಳನ್ನು ಉಲ್ಲಂ ಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುತ್ತದೆ. ಆಗಾಗ ಫುಡ್ ಇನ್ಸ್‌ಪೆಕ್ಟರ್‌ಗಳು ಹೊಟೇಲ್, ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿ ಆಹಾರ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಒಂದು ವೇಳೆ ಕಳಪೆ ಎಂದು ಕಂಡು ಬಂದರೆ ದಂಡವನ್ನು ವಿಧಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.