![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 21, 2022, 11:02 AM IST
ಮಣಿಪುರದ ಸಿಎಂ ಗದ್ದುಗೆಯಲ್ಲಿ ಎರಡನೇ ಬಾರಿಗೆ ಆಸೀನರಾಗ ಲಿರುವ ಬಿರೇನ್ ಸಿಂಗ್‌ರ ಜೀವನಗಾಥೆ ಬಲು ರೋಚಕ. ಒಂದು ಕಾಲದಲ್ಲಿ ಫುಟ್ಬಾಲ್ ಅನ್ನು ಗೋಲ್‌ಗೆ ಅಟ್ಟುತ್ತಿದ್ದ, ಬಂದೂಕು ಹಿಡಿದು ಇದೇ ಮಣಿಪುರದ ಗಡಿ ಕಾಯುತ್ತಿದ್ದ, ಬಳಿಕ ಪೆನ್ ಹಿಡಿದು ಪತ್ರಿಕೆಯ ಮೂಲಕ ಸಮಾಜವನ್ನು ಎಚ್ಚರಿಸುತ್ತಿದ್ದ ಪತ್ರಕರ್ತ ಈಗ ಆ ಪುಟ್ಟ ರಾಜ್ಯದ ದೊರೆ!.
ಹೌದು. ಬಹುಮುಖಿ ವ್ಯಕ್ತಿತ್ವದಿಂದಲೇ ಹೆಸರಾದ ಬಿರೇನ್ ಸಿಂಗ್ 1961, ಜ.1ರಂದು ಇಂಫಾಲ್‌ನಲ್ಲಿ ಜನಿಸಿದರು. ಕಾಲೇಜಿನ ಪದವಿ ಓದಿನ ದಿನಗಳಲ್ಲೇ ಅವರು ರಾಜ್ಯ ಮಟ್ಟದ ಫುಟ್ಬಾಲ್ ತಂಡದಲ್ಲಿ ಸ್ಟಾರ್ ಆಟಗಾರ. ಪದವಿ ಬಳಿಕ ಬಿಎಸ್‌ಎಫ್ ಸೇರಿಕೊಂಡು, ಸೇನಾ ತಂಡದ ಸದಸ್ಯನಾಗಿ ಅಲ್ಲಿಯೂ ಪ್ರಾದೇಶಿಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಡ್ಯುರಾಂಡ್ ಕಪ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು.
1992ರ ವೇಳೆಗೆ ಬಿರೇನ್, ಪತ್ರಿಕೋದ್ಯಮ ಪ್ರವೇಶಿಸಿದರು. 2001ರ ವರೆಗೆ “ನಹರ್‌ಲೋಗಿ ಥೌಡಾಂಗ್’ ಎಂಬ ಪತ್ರಿಕೆಗೆ ಸಂಪಾದಕರಾದರು. 2002ರಲ್ಲಿ ಡೆಮಾಕ್ರಟಿಕ್ ರೆವಲ್ಯುಷನರಿ ಪೀಪಲ್ಸ್ ಪಾರ್ಟಿ ಮೂಲಕ ರಾಜಕೀಯ ಪ್ರವೇಶಿಸಿದರು. 2003ರಲ್ಲಿ ಹೀಂಗ್ಯಾಂಗ್ ಕ್ಷೇತ್ರದ ಮೂಲಕ ಗೆದ್ದು ವಿಧಾನಸಭೆಗೆ ಕಾಲಿಟ್ಟರು. ಕಾಂಗ್ರೆಸ್‌ಗೆ ಸೇರಿ 2007, 2012ರಲ್ಲಿ ವಿವಿಧ ಸಚಿವ ಹುದ್ದೆ ಅಲಂಕರಿಸಿದರು. 2017ರಲ್ಲಿ ಬಿರೇನ್ ಬಿಜೆಪಿಗೆ ಸೇರಿಕೊಂಡು, ಮುಖ್ಯಮಂತ್ರಿಯಾದರು. ಪ್ರಸ್ತುತ 18 ಸಾವಿರ ಮತಗಳಿಂದ ಗೆದ್ದು ಪುನಃ ವಿಧಾನಸಭೆ ಪ್ರವೇಶಿಸಿ, 2ನೇ ಬಾರಿಗೆ ಸಿಎಂ ಆಗಿ ಪುನರಾಯ್ಕೆಗೊಂಡಿದ್ದಾರೆ.
Karnataka BJP: ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನುಂಗಲಾರದ ತುತ್ತು?
By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್ ಬಿಜೆಪಿ ತೆಕ್ಕೆಗೆ
Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್ ಶೂನ್ಯ ಸಂಪಾದನೆ!?
Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?
Delhi Election: ದಿಲ್ಲಿಯಲ್ಲಿಂದು ಮತದಾನ: ಕುರ್ಚಿಗಾಗಿ ತ್ರಿಕೋನ ಕದನ
You seem to have an Ad Blocker on.
To continue reading, please turn it off or whitelist Udayavani.