ಆಟೋ ಚಾಲಕ ಕುಂಭಕೋಣಂನ ಮೊದಲ ಮೇಯರ್
Team Udayavani, Mar 8, 2022, 8:00 AM IST
ಚೆನ್ನೈ: ಸುಮ್ಮನೆ ಆಟೋ ಓಡಿಸಿಕೊಂಡಿದ್ದ ವ್ಯಕ್ತಿಯೊಬ್ಬರು, ನಗರಪಾಲಿಕೆಯೊಂದರ ಸದಸ್ಯರಾಗಿ, ಊಹೆಯೂ ಮಾಡದ ರೀತಿಯಲ್ಲಿ ಮೇಯರ್ ಆಗಿ ಆಯ್ಕೆಯಾದರೆ ಹೇಗಿರುತ್ತದೆ? ತಮಿಳುನಾಡಿನ ಕುಂಭಕೋಣಂನಲ್ಲಿ ಹೀಗೊಂದು ಘಟನೆ ನಡೆದಿದೆ!
ಕೆ.ಸರವಣನ್‌ಗೆ ಈಗ 42 ವರ್ಷ, ಬದುಕಿಗಾಗಿ ಆಟೋ ಓಡಿಸಿಕೊಂಡಿದ್ದರು. ಇದುವರೆಗೆ ಪಟ್ಟಣಪಂಚಾಯ್ತಿಯಾಗಿದ್ದ ಕುಂಭಕೋಣಂ, ಈ ಬಾರಿ ನಗರಪಾಲಿಕೆಯಾಗಿ ಬಡ್ತಿ ಪಡೆದಿದೆ. ಇಂತಹ ಹೊತ್ತಿನಲ್ಲಿ ಕುಂಭಕೋಣಂ ನಗರಪಾಲಿಕೆಯ ಮೊದಲ ಮೇಯರ್ ಎಂಬ ಹೆಗ್ಗಳಿಕೆಯನ್ನು ಸರವಣನ್ ಪಡೆದಿದ್ದಾರೆ.
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರನ್ನು ಪಕ್ಷದ ಉನ್ನತ ನಾಯಕತ್ವ ಈ ಸ್ಥಾನಕ್ಕೆ ನೇಮಿಸಿದೆ. ವಸ್ತುಸ್ಥಿತಿಯಲ್ಲಿ ಅವರು ಪ್ರಮಾಣವಚನಕ್ಕೂ ತಮ್ಮ ಆಟೋದಲ್ಲೇ ಬಂದಿದ್ದರು! ಕೊರೊನಾ ಹೊತ್ತಿನಲ್ಲಿ ಎಲ್ಲರಂತೆ ಅವರೂ ಆಟೋ ಓಡಿಸಿಕೊಂಡಿದ್ದರು, ಆಗ ದುಡಿಮೆಯಿಲ್ಲದೇ ಪರದಾಡಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.