Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ


Team Udayavani, Nov 11, 2024, 6:00 AM IST

Forest

ರಾಜ್ಯದ ಖಜಾನೆಯನ್ನು ಭರಿಸಲು ಮುಂದಾಗಿರುವ ರಾಜ್ಯ ಸರಕಾರ ಈಗ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಮೂಲಗಳ ಹುಡುಕಾಟದಲ್ಲಿ ನಿರತವಾಗಿದೆ. ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳ ವೆಚ್ಚಕ್ಕೆ ಪೂರಕವಾಗಿ ಆದಾಯ ಸಂಗ್ರಹವಾಗದಿರುವ ಹಿನ್ನೆಲೆಯಲ್ಲಿ ಸಾಲದ ಮೊರೆ ಹೋಗುವುದು ಸರಕಾರದ ಪಾಲಿಗೆ ಅನಿವಾರ್ಯವಾಗಿದೆ.

ಇದೇ ವೇಳೆ ಸಾಲದ ಪ್ರಮಾಣ ಅತಿಯಾಗಿರುವುದರಿಂದ ತನ್ನ ವರಮಾನವನ್ನು ಹೆಚ್ಚಿಸಿಕೊಳ್ಳಲು ಸರಕಾರ ಪರ್ಯಾಯ ಮಾರ್ಗೋಪಾಯಗಳತ್ತ ದೃಷ್ಟಿ ಹೊರಳಿಸಿದೆ. ಇದರಲ್ಲಿ ಮುಖ್ಯವಾಗಿ ಸರಕಾರ ಅರಣ್ಯ ಪ್ರದೇಶಗಳಲ್ಲಿ ಗಣಿ ಚಟುವಟಿಕೆಗೆ ದಿನವಿಡೀ ಮುಕ್ತ ಅವಕಾಶ ನೀಡಲು ಚಿಂತನೆ ನಡೆಸಿದ್ದು, ತನ್ಮೂಲಕ ಭೂಗರ್ಭದಿಂದ ಅದಿರನ್ನು ಅಗೆದು ತನ್ನ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಸರಕಾರದ ಈ ಚಿಂತನೆ ಒಂದಿಷ್ಟು ಆತಂಕಕಾರಿ ಬೆಳವಣಿಗೆಯಾಗಿದ್ದು, ಸರಕಾರ ಈ ನಿರ್ಧಾರ ಕೈಗೊಂಡದ್ದೇ ಆದಲ್ಲಿ ಜೀವವೈವಿಧ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿರುವುದಂತೂ ನಿಶ್ಚಿತ.

ರಾಜ್ಯದ ಆದಾಯ ಮೂಲಗಳಲ್ಲಿ ಗಣಿಗಾರಿಕೆ ಉದ್ಯಮವೂ ಒಂದಾಗಿದ್ದು, ಇದರಿಂದ ಗಮನಾರ್ಹ ಪ್ರಮಾಣದಲ್ಲಿ ಆದಾಯ ಸರಕಾರದ ಬೊಕ್ಕಸಕ್ಕೆ ಹರಿದುಬರುತ್ತಿದೆ. ಹೀಗಾಗಿ ಹಲವಾರು ದಶಕಗಳಿಂದ ಪರಿಸರ, ಅರಣ್ಯ, ಜೀವ ವೈವಿಧ್ಯ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆಯ ದೃಷ್ಟಿಯಿಂದ ಒಂದಿಷ್ಟು ನಿರ್ಬಂಧ, ನಿಯಂತ್ರಣ, ಕಟ್ಟುಪಾಡುಗಳೊಂದಿಗೆ ಗಣಿಗಾರಿಕೆಯನ್ನು ನಡೆಸುತ್ತ ಬರಲಾಗಿದೆ.

ಅಭಯಾರಣ್ಯ ಮತ್ತು ಜೀವ ವೈವಿಧ್ಯ ತಾಣಗಳನ್ನು ಹೊರತುಪಡಿಸಿದಂತೆ ಅರಣ್ಯ ಪ್ರದೇಶಗಳಲ್ಲಿರುವ ಗಣಿಗಳಲ್ಲಿ ದಿನದ ನಿರ್ದಿಷ್ಟ ಅವಧಿಯಲ್ಲಿ ಗಣಿಗಾರಿಕೆ ನಡೆಸಲು ಕಂಪನಿಗಳು ಮತ್ತು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ. ಈಗ ಸರಕಾರ ತನ್ನ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಬಂಧವನ್ನು ಸಡಿಲಿಸಿ, ದಿನದ 24 ತಾಸುಗಳ ಕಾಲವೂ ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ಗಂಭೀರ ಚಿಂತನೆ ನಡೆಸಿದೆ.

ಅರಣ್ಯ ಪ್ರದೇಶಗಳಲ್ಲಿ ನಡೆಸಲಾಗುತ್ತಿರುವ ಗಣಿಗಾರಿಕೆಯಿಂದ ಈಗಾಗಲೇ ಬರೋಬ್ಬರಿ ನಾಲ್ಕು ಸಾವಿರ ಎಕ್ರೆಗಳಿಗೂ ಅಧಿಕ ಪ್ರಮಾಣದ ಅರಣ್ಯ ನಾಶವಾಗಿದೆ ಎಂದು ವರದಿಯಾಗಿರುವಂತೆಯೇ ಸರಕಾರದ ಈ ಹೊಸ ಚಿಂತನೆ ಇನ್ನಷ್ಟು ಭಾರೀ ಪ್ರಮಾಣದ ಅರಣ್ಯ ನಾಶಕ್ಕೆ ಅನುವು ಮಾಡಿಕೊಡಲಿದೆ. ಅಷ್ಟು ಮಾತ್ರವಲ್ಲದೆ ನೈಸರ್ಗಿಕ ಸಂಪನ್ಮೂಲವಾಗಿರುವ ಅದಿರನ್ನು ಈ ತೆರನಾಗಿ ಬೇಕಾಬಿಟ್ಟಿಯಾಗಿ ಭೂಗರ್ಭದಿಂದ ಮೇಲೆತ್ತಿದಲ್ಲಿ ಬರಡಾಗುವುದರ ಜತೆಯಲ್ಲಿ ಪರಿಸರ ಮತ್ತು ಜೀವವೈವಿಧ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಈಗಾಗಲೇ ಅಭಿವೃದ್ಧಿ, ಮೂಲಸೌಕರ್ಯ ಒದಗಣೆಯ ಹೆಸರಿನಲ್ಲಿ ನಡೆಸಲಾಗುತ್ತಿರುವ ವಿವೇಚನಾಶೂನ್ಯ ಕಾಮಗಾರಿಗಳಿಂದಾಗಿ ನಿಸರ್ಗ ಮುನಿಸಿಕೊಂಡು ಪ್ರತೀ ಮಳೆಗಾಲದಲ್ಲಿಯೂ ಒಂದಲ್ಲ ಒಂದು ಅನಾಹುತ ಸಂಭವಿಸುತ್ತಿದ್ದರೆ, ಮತ್ತೂಂದೆಡೆಯಿಂದ ಅರಣ್ಯ ಪ್ರದೇಶಗಳಲ್ಲಿ ಮಿತಿಮೀರುತ್ತಿರುವ ಮಾನವ ಚಟುವಟಿಕೆಗಳ ಕಾರಣಗಳಿಂದಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡಲಾರಂಭಿಸಿ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಅರಣ್ಯಗಳಲ್ಲಿ ದಿನವಿಡೀ ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಮತಿ ನೀಡುವ ತನ್ನ ಚಿಂತನೆಯನ್ನು ಕಾರ್ಯಾನುಷ್ಠಾನಕ್ಕೆ ತಂದದ್ದೇ ಆದಲ್ಲಿ ಬಲುದೊಡ್ಡ ಅನಾಹುತಕ್ಕೆ ಸ್ವತಃ ಮುನ್ನುಡಿ ಬರೆದಂತಾಗಲಿದೆ.

ವೆಚ್ಚ ಕಡಿತ, ಆದಾಯ ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣದಂತಹ ಕ್ರಮ ಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದೇ ಆದಲ್ಲಿ ಆದಾಯ ಸಂಗ್ರಹ ತನ್ನಿಂತಾನೇ ಏರುಗತಿ ಕಾಣುವುದರಲ್ಲಿ ಸಂದೇಹವಿಲ್ಲ. ಇಂತಹ ಸಕಾರಾತ್ಮಕ ಕ್ರಮಗಳ ಬದಲಾಗಿ ದೂರದೃಷ್ಟಿರಹಿತ ನಿರ್ಣಯಗಳನ್ನು ಕೈಗೊಳ್ಳುವುದು “ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಂಡಂತೆ’ ಎಂಬುದನ್ನು ರಾಜ್ಯ ಸರಕಾರ ಮರೆಯಬಾರದು.

ಟಾಪ್ ನ್ಯೂಸ್

doctor 2

Chennai; ಆಸ್ಪತ್ರೆಯಲ್ಲಿ ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ!!

15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

1-qrewrew

Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ

Actress: ಸಲ್ಮಾನ್‌,ಶಾರುಖ್‌ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50‌ ಲಕ್ಷ ರೂ. ಡಿಮ್ಯಾಂಡ್

Actress: ಸಲ್ಮಾನ್‌,ಶಾರುಖ್‌ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50‌ ಲಕ್ಷ ರೂ. ಡಿಮ್ಯಾಂಡ್

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

army-1

Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

School-Chikki

PM Poshan: ಶಾಲಾ ಮಕ್ಕಳ ಮೊಟ್ಟೆಗೂ ಕನ್ನ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

doctor 2

Chennai; ಆಸ್ಪತ್ರೆಯಲ್ಲಿ ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ!!

5

Mangaluru: ಬಸ್‌ಗಳ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಣ್ಮರೆ!

15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

4(1

Karkala: ಈದುವಿಗೆ ಬೇಕು ಸರಕಾರಿ ಕಾಲೇಜು

1-qrewrew

Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.