ಮೇಲ್ಸೇತುವೆಗಾಗಿ ಮತ್ತೆ ಹೋರಾಟ? ಬಗೆಹರಿಯದ ಚತುಷ್ಪಥ ಅಗಲೀಕರಣ ಕಾಮಗಾರಿ ಗೊಂದಲ

Team Udayavani, Jan 18, 2021, 3:56 PM IST

ಮೇಲ್ಸೇತುವೆಗಾಗಿ ಮತ್ತೆ ಹೋರಾಟ? ಬಗೆಹರಿಯದ ಚತುಷ್ಪಥ ಅಗಲೀಕರಣ ಕಾಮಗಾರಿ ಗೊಂದಲ

ಹೊನ್ನಾವರ: ಚತುಷ್ಪಥ ಕಾಮಗಾರಿ ನಡೆಯುವ ಮೊದಲೇ ಹೊನ್ನಾವರ ನಗರದ ಶರಾವತಿ ಸರ್ಕಲ್‌ನಿಂದ ಕಾಲೇಜು
ಸರ್ಕಲ್‌ವರೆಗೆ 920 ಮೀಟರ್‌ ಹೆದ್ದಾರಿಯಲ್ಲಿ ಸದಾ ಸಂಚಾರ ಗಿಜಿಗುಡುತ್ತಿತ್ತು. ಚತುಷ್ಪಥ ಕಾಮಗಾರಿಯಲ್ಲಿ ಇಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂಬುದು ಅಧಿಕೃತವಾಗಿ ಪ್ರಕಟವಾಗಿ ಸರ್ವೇ ಕಾರ್ಯ ನಡೆದಾಗ ಈಗಲಾದರೂ ಜನದಟ್ಟಣೆ ತಪ್ಪಲಿದೆ ಎಂದು ಜನ ಖುಷಿಪಟ್ಟಿದ್ದರು.

ಕೆಲವರಿಗಾಗಿ ಕೆಲವರು ಹಲವರ ಜೀವವನ್ನು ಅಪಾಯಕೊಡ್ಡಿ 45 ಮೀ. ರಸ್ತೆಯನ್ನು 30ಮೀ.ಗೆ ಇಳಿಸಿದ್ದು ಗೊತ್ತಾಗುವಾಗ ಶಾಕ್‌ ಆಗಿತ್ತು. ಸಾರ್ವಜನಿಕರು ಮನವಿ ಸಲ್ಲಿಸಿದರು, ಕೇಳುವವರೇ ಇರಲಿಲ್ಲ, ಹೋರಾಟಕ್ಕಿಳಿದರು. ಸಮಿತಿ ರಚಿಸಿಕೊಂಡರು, ಅರ್ಧದಿನ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಮತದಾರ ಪ್ರಭುಗಳ ಸಿಟ್ಟು ಕಂಡು ರಾಜಕಾರಣಿಗಳು ಪುನಃ ಪರಿಶೀಲನೆಯ ಭರವಸೆ ನೀಡಿದರು.

ಆದರೆ ಈವರೆಗೆ ಯಾವುದೇ ಕೆಲಸ ಆಗಲಿಲ್ಲ. ಮೇಲ್ಸೇತುವೆಗಾಗಿ ಮತ್ತೆ ಹೋರಾಟ ಆರಂಭಿಸಬೇಕೇ ಎಂದು ಸಮಿತಿ ಸಂಚಾಲಕ ಲೋಕೇಶ ಮೇಸ್ತ, ಕಾರ್ಯದರ್ಶಿ ರಘು ಪೈ, ಪಪಂ ಸದಸ್ಯ ಮಹೇಶ ಮೇಸ್ತ ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊನ್ನಾವರ, ಭಟ್ಕಳ ಮತ್ತು ಅವರ್ಸಾದಲ್ಲಿ ಮೇಲ್ಸೇತುವೆ ತೀರ್ಮಾನ ಕೈಗೊಂಡಿತ್ತು. ಜನಗಳ ಒತ್ತಡದಿಂದ ಭಟ್ಕಳದಲ್ಲಿ ಮತ್ತೆ 45 ಮೀ. ಅಗಲೀಕರಣ ಮಾಡಿ ಮೇಲ್ಸೇತುವೆ ಮಾಡಲು ಒಪ್ಪಿಕೊಂಡ ಭೂ ಸಾರಿಗೆ ಮಂತ್ರಾಲಯ ಹೊನ್ನಾವರಕ್ಕೆ ಮಾತ್ರ ಯಾಕೆ
ಅನ್ಯಾಯ ಮಾಡುತ್ತಿದೆ, ನಕ್ಷೆ ಬದಲಿಸಿದೆ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಜನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನಂತರ ಭಾರೀ ಪ್ರತಿಭಟನೆ ನಡೆದಿತ್ತು. ಇಷ್ಟಾದರೂ ಗಮನಿಸದ ಇಲಾಖೆ ರಾಜಕಾರಣಿಗಳು ಹೊಸ ನಕ್ಷೆ ಸಿದ್ಧಪಡಿಸಿ ಕೇವಲ 30ಮೀ. ಭೂಮಿ ವಶಮಾಡಿಕೊಂಡು ಪರಿಹಾರ ನೀಡಿ ಕೆಲಸ ಆರಂಭಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ!

ಜನ ಹೇಳುವುದರಲ್ಲಿ ನ್ಯಾಯವಿದೆ. ನೆರೆಯ ಮಂಗಳೂರು, ಹುಬ್ಬಳ್ಳಿ, ಪಣಜಿ, ಶಿವಮೊಗ್ಗಾ ಜಿಲ್ಲೆಗಳಿಗೆ ಹೊನ್ನಾವರದಿಂದ 180 ಕಿಲೋ ಮೀಟರ್‌ ಅಂತರವಿದೆ. ಕೇರಳದಿಂದ ಉತ್ತರಭಾರತವನ್ನು ಸಂಪರ್ಕ ಸಾಧಿಸುವ ಚತುಷ್ಪಥದಲ್ಲಿ ಈಗಾಗಲೇ ಜನ, ವಾಹನ ದಟ್ಟಣೆ ಇದೆ.

ಹೊನ್ನಾವರ ನಗರದ ಅರ್ಧ ಜನ ಹೆದ್ದಾರಿಯಿಂದ ಪೂರ್ವದಲ್ಲೂ, ಅರ್ಧ ಜನ ಪಶ್ಚಿಮದಲ್ಲೂ ನೆಲೆಸಿದ್ದಾರೆ. ಎರಡೂ ಕಡೆ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ, ಹಳ್ಳಿಗಳ ಸಂಪರ್ಕವೂ ಇಲ್ಲಿಂದಲೇ ಹಾದು ಹೋಗುತ್ತದೆ. ನಗರದೊಳಗಿನ ಭಾಗಗಳಿಗೂ ಇದೇ ಹೆದ್ದಾರಿಯನ್ನು ದಾಟಬೇಕು. ಹೀಗಿರುವಾಗ ಮೇಲ್ಸೇತುವೆ ಮತ್ತು ಸರ್ವಿಸ್‌ ರಸ್ತೆ ಇಲ್ಲದಿದ್ದರೆ ಪ್ರತಿಕ್ಷಣವೂ ಗಂಡಾಂತರವಿದೆ ಎಂಬುದು ಜನರ ಅಭಿಪ್ರಾಯ.

ಈ ವಿಷಯ ಶಾಸಕರಿಗೆ, ಸಂಸದರಿಗೆ, ಆಡಳಿತದವರಿಗೆ, ಜಿಲ್ಲಾ ಮಂತ್ರಿಗಳಿಗೆ ಎಲ್ಲರಿಗೂ ಗೊತ್ತಿದೆ. ಆದರೂ ಸೂಕ್ತ ನಿರ್ಣಯ ಬರುತ್ತಿಲ್ಲ. ಮತ್ತೆ ಹೋರಾಟ ಮಾಡಬೇಕೇ? ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದೆ, ಅದೇ ಪಕ್ಷದವರನ್ನು ಗೆಲ್ಲಿಸಿದ್ದೇವೆ. ತಾಲೂಕಿನ ಒಂದುಕಾಲು ಲಕ್ಷ ಜನರ ಹಿತ ಮುಖ್ಯವೇ ವಿನಃ ಕೆಲವರ ಹಿತ ಮುಖ್ಯವಲ್ಲ ಎಂಬುದನ್ನು ನಾಯಕರು ಮನಗಾಣಲಿ. ಮೇಲ್ಸೇತುವೆ ಮಾಡಿಕೊಡಲಿ ಎಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಹೋರಾಟ ಸಮಿತಿ ಮತ್ತೆ ವಿನಂತಿಸಿದೆ, ಇಲ್ಲವಾದರೆ
ಹೋರಾಟದ ಎಚ್ಚರಿಕೆ ನೀಡಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.