7 ವಿಕೆಟ್: ವನಿತಾ ಟಿ20ಯಲ್ಲಿ ಫ್ರೆಡೆರಿಕ್ ದಾಖಲೆ
Team Udayavani, Aug 27, 2021, 11:50 PM IST
ಕಾರ್ಟಾಕ್ಸೆನಾ (ಸ್ಪೇನ್) : ಅಂತಾರಾಷ್ಟ್ರೀಯ ವನಿತಾ ಟಿ20 ಕ್ರಿಕೆಟ್‌ನಲ್ಲಿ ನೆದರ್ಲೆಂಡ್ಸ್‌ನ ಪೇಸ್ ಬೌಲರ್ ಫ್ರೆಡೆರಿಕ್ ಓವರ್ಡಿಕ್ 7 ವಿಕೆಟ್ ಉರುಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಐಸಿಸಿ ಆಯೋಜಿಸಿದ ಯುರೋಪಿಯನ್ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಫ್ರಾನ್ಸ್ ಎದುರಿನ ಪಂದ್ಯದಲ್ಲಿ ಓವರ್ಡಿಕ್ ಈ ಸಾಧನೆಗೈದರು. 4 ಓವರ್‌ಗಳಲ್ಲಿ ಕೇವಲ 3 ರನ್ ನೀಡಿ 7 ವಿಕೆಟ್ ಉಡಾಯಿಸಿದರು. ಇದರಲ್ಲಿ 2 ಓವರ್ ಮೇಡನ್ ಆಗಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಫ್ರಾನ್ಸ್, ಫ್ರೆಡೆರಿಕ್ ಓವರ್ಡಿಕ್ ದಾಳಿಗೆ ತತ್ತರಿಸಿ 17.3 ಓವರ್‌ನಲ್ಲಿ ಕೇವಲ 33 ರನ್ ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಕೇವಲ 3.3 ಓವರ್‌ನಲ್ಲಿ ಗುರಿ ತಲುಪಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಪುರುಷರ ಹಾಗೂ ವನಿತೆಯರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ವಿಕೆಟ್ ಉರುಳಿಸಿದ್ದೇ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಓವರ್ಡಿಕ್ ತಮ್ಮ 8ನೇ ಪಂದ್ಯದಲ್ಲಿ ಎಲ್ಲರನ್ನೂ ಮೀರಿ ನಿಂತರು. ಹಿಂದಿನ 7 ಪಂದ್ಯಗಳಲ್ಲಿ ಅವರು ಕೇವಲ 4 ವಿಕೆಟ್ ಉರುಳಿಸಿದ್ದರು.
ಇದಕ್ಕೂ ಮೊದಲು ನೇಪಾಲದ ಅಂಜಲಿ ಚಂದ್ ಟಿ20ಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದರು. 2019ರಲ್ಲಿ ಮಾಲ್ಡೀವ್ಸ್ ವಿರುದ್ಧ 2.1 ಓವರ್‌ಗಳಲ್ಲಿ ಒಂದೂ ರನ್ ನೀಡದೆ 6 ವಿಕೆಟ್ ಕೆಡವಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.