ಏಳು ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿರುವ  ಡಾ.ರಾವಳ

ಯೋಗ ಮತ್ತು ಆರ್ಯವೇದ ಒಂದೇ ನಾಣ್ಯದ ಎರಡು ಮುಖ

Team Udayavani, Jun 21, 2022, 9:00 AM IST

ಏಳು ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿರುವ  ಡಾ.ರಾವಳ

ರಬಕವಿ-ಬನಹಟ್ಟಿ: ಡಾ.ಪರಶುರಾಮ ರಾವಳ ವೃತ್ತಿಯಿಂದ ಆರ್ಯುವೇದ ವೈದ್ಯರು ಮತ್ತು ಪ್ರವೃತ್ತಿಯಿಂದ ಯೋಗ ತರಬೇತಿಗಾರರು. 2012 ರಿಂದ ಅವರು ಬನಹಟ್ಟಿ ಸಮೀಪದ ಜಗದಾಳ ಗ್ರಾಮದಲ್ಲಿ ಪತಂಜಲಿ ಯೋಗ ಪೀಠವನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಸಾವಿರಾರು ಜನರಿಗೆ ಉಚಿತ ಯೋಗದ ತರಬೇತಿಯನ್ನು ನೀಡುತ್ತಿದ್ದಾರೆ. ಅವರು ಆರ್ಯುವೇದದಲ್ಲಿ ಅವರು ಪ್ರಸೂತಿ ಮತ್ತು ಸ್ತ್ರೀ ರೋಗದಲ್ಲಿ ವಿಭಾಗದಲ್ಲಿ ಎಂ.ಎಸ್.ಪದವಿಯನ್ನು ಕೂಡಾ ಪಡೆದುಕೊಂಡಿದ್ದಾರೆ.

ಡಾ. ರಾವಳ ತಮ್ಮ ಎಂಟನೇಯ ವಯಸ್ಸಿನಲ್ಲಿ ಯೋಗಾಸನದಲ್ಲಿ ನಿರತರಾಗಿದ್ದಾರೆ. ತಂದೆ ಕಾಡಪ್ಪ ರಾವಳ ಅವರಿಗೆ ಯೋಗ ಗುರುಗಳಾಗಿದ್ದರು. ನಂತರ ಅವರು 7 ದಿನಗಳ ಕಾಲ ಬಾಬಾ ರಾಮದೇವರ ಹರಿದ್ವಾರ ಪತಂಜಲಿ ಯೋಗ ಪೀಠದಲ್ಲಿ ತರಬೇತಿಯನ್ನು ಪಡೆದುಕೊಂಡರು.

ತರಬೇತಿ ಪಡೆದುಕೊಮಡ ಮೇಲೆ ರಬಕವಿ ಬನಹಟ್ಟಿ ಸುತ್ತ ಮುತ್ತಲಿನ ಭಾಗದಲ್ಲಿ ನಿರಂತರ ಯೋಗ ತರಬೇತಿ ಕಾರ್ಯಕ್ರಮಗಳನ್ನು ಅರಂಭಿಸಿದರು. ಅವರು 365 ದಿನಗಳ ಕಾಲವೂ ಯೋಗಾಸನದಲ್ಲಿ ನಿರತರಾಗಿರುತ್ತಾರೆ.

2015 ರಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ತಮ್ಮ ಸ್ವಂತ ಖರ್ಚಿನಿಂದ ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಅದೇ ರೀತಿಯಾಗಿ ರಬಕವಿ ಬನಹಟ್ಟಿ, ಜಮಖಂಡಿ ಮತ್ತು ಮುಧೋಳ ತಾಲ್ಲೂಕಿನ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಮತ್ತು ಶಾಲಾ ಕಾಲೇಜುಗಳು ಹಮ್ಮಿಕೊಂಡ ಯೋಗ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಚಿತ ತರಬೇತಿಯನ್ನು ನೀಡಿದ್ದಾರೆ. ಜೊತೆಗೆ ತಮ್ಮ ಪತಂಜಲಿ ಯೋಗ ಪೀಠದಲ್ಲಿಯೂ ಕೂಡಾ ನಿರಂತರವಾಗಿ ಯೋಗಾಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಇದುವರೆಗೆ ನೂರಾರು ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರಿಗೆ ಯೋಗ ತರಬೇತಿಯನ್ನು ನೀಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ : ಪುತ್ತೂರು: ಕ್ಲಬ್‌ ಹೌಸ್‌ ಚರ್ಚೆಯಲ್ಲಿ ಹಿಂದೂ ದೇವರ ಅವಹೇಳನ; ನಾಲ್ವರು ವಿರುದ್ಧ ದೂರು

ಡಾ.ರಾವಳ ತಮ್ಮಲ್ಲಿ ಬರುವ ರೋಗಿಗಳಿಗೆ ಯೋಗ, ಧ್ಯಾನದ ಮಹತ್ವಗಳನ್ನು ಹೇಳುತ್ತಾರೆ. ಯೋಗದಿಂದ ಶಾಶ್ವತ ರೋಗ ಮುಕ್ತಿಯ ಬಗ್ಗೆ ಮಾಹಿತಿಯನ್ನು ನೀಡುತ್ತ ಬಂದಿದ್ದಾರೆ.
ಡಾ.ರಾವಳ ಅವರ ಪ್ರಕಾರ ಯೋಗ ಮತ್ತು ಆರ್ಯುವೇದ ಎರಡು ಕೂಡಾ ಆರೋಗ್ಯದ ಮಾಹಿತಿಯನ್ನು ನೀಡುತ್ತವೆ. ಆದ್ದರಿಂದ ಯೋಗ ಮತ್ತು ಆರ್ಯುವೇದ ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ.

ಸದ್ಯ ಡಾ, ರಾವಳ ಆರೋಗ್ಯವೇ ಜೀವನ ಮತ್ತು ರೋಗವೇ ಮರಣ ಎಂಬ ಉದ್ದೇಶವನ್ನಿಟ್ಟುಕೊಂಡು ಆರೋಗ್ಯ ಯೋಗ ಪೀಠ ಪೌಂಡೇಶನ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಂಸ್ಥೆಯ ಅಡಿಯಲ್ಲಿ ನಿರಂತರ ಯೋಗವನ್ನು ಪ್ರತಿದಿನ 5.30 ರಿಂದ 7 ಗಂಟೆವರೆಗೆ ಉಚಿತವಾಗಿ ಹಮ್ಮಿಕೊಂಡಿದ್ದಾರೆ. ಅಲ್ಲದೇ ಸಂಸ್ಥೆಯ ಆಡಿಯಲ್ಲಿ ಇನ್ನೂ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆ.

ಒಟ್ಟಿನಲ್ಲಿ ಪ್ರಾಣಾಯಾಮ ಮತ್ತು ಯೋಗಾಸನವನ್ನು ತಮ್ಮ ಜೀವನದ ಅವಿಭಾಜ್ಯ ದಿನಚರಿಯನ್ನಾಗಿ ಮಾಡಿಕೊಂಡಿರುವ ಡಾ, ರಾವಳ ತರಬೇತಿ ನೀಡುತ್ತಿರುವ ಸಂದರ್ಭದಲ್ಲಿ ಧ್ವನಿ ವರ್ಧಕಗಳನ್ನು ತೆಗೆದುಕೊಂಡು ಬಂದು ಸೇವೆಯನ್ನು ನೀಡುವುದರ ಜೊತೆಗೆ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ತಾವು ಹೇಳಿದ ಸರಿಯಾದ ಸಮಯಕ್ಕೆ ಮುಂಚಿತವಾಗಿ ಬಂದು ತರಬೇತಿಯನ್ನು ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕೊಡುವ ನಿಟ್ಟಿನಲ್ಲಿ ಉಚಿತ ಪ್ರಾಣಾಯಾಮ ಮತ್ತು ಯೋಗಾಸನ ನೀಡುತ್ತಿರುವ ಡಾ. ಪರಶುರಾಮ ರಾವಳ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದು.

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.