ಸ್ವಾತಂತ್ರ್ಯ ಸೇನಾನಿ: ಅದಮ್ಯ ಸಾಹಸ, ತ್ಯಾಗದ ಪ್ರತೀಕ ಸುಭಾಶ್ಚಂದ್ರ ಬೋಸ್‌

ಇಡೀ ಜಗತ್ತಿನ ಮೇಲೆ ದ್ವಿತೀಯ "ವಿಶ್ವ ಸಮರ'ದ ಕಾರ್ಮೋಡ ಪಸರಿಸುತ್ತಿತ್ತು.

Team Udayavani, Aug 8, 2022, 1:35 PM IST

thumb 6 india

“ಸೂರ್ಯ ಮುಳುಗದ ಸಾಮ್ರಾಜ್ಯದ ನಕ್ಷತ್ರ ವೊಂದು ಇಂದು ಕಳಚಿತು’ ಎಂದು ಉದ್ಗರಿಸಿದವರು ಆಗಿನ ಬ್ರಿಟಿಷ್‌ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌. ಅಂದು 1943 ಎಪ್ರಿಲ್‌ 4, ಸಿಂಗಾಪುರ ದಲ್ಲಿ ಸುಭಾಶ್ಚಂದ್ರ ಬೋಸರು “ಸ್ವತಂತ್ರ ಭಾರತ’ದ ಚತುಃವರ್ಣ ಧ್ವಜ ಹಾರಿಸಿದ ದಿನ!  ಅದರಲ್ಲಿ ಪರಾಕ್ರಮದ ಸಂಕೇತವಾಗಿ  ಪಶ್ಚಿಮಕ್ಕೆ ಮುಖ ಮಾಡಿ ಗರ್ಜಿಸುವ ಹುಲಿಯಿತ್ತು! “ದಿಲ್ಲಿ ಚಲೋ’, “ಜೈ ಹಿಂದ್‌’ ಎಂಬ ಘೋಷಣೆಯೊಂದಿಗೆ “ಆಜಾದ್‌ ಹಿಂದ್‌ ಫೌಜ್‌’ (Indian National Army or INA) ಬರ್ಮಾದ  ಗಡಿದಾಟಿ ಬಂದಿತು. 9 ರಾಷ್ಟ್ರಗಳು  ಈ ಘೋಷಿತ ಸ್ವತಂತ್ರ ಭಾರತ ಸರಕಾರಕ್ಕೆ ಮನ್ನಣೆಯನ್ನು ನೀಡಿತು.

1897, ಜನವರಿ 23, ಜಾನಕೀನಾಥ್‌ ಬೋಸ್‌ ಹಾಗೂ ಪ್ರಭಾದೇವಿಯವರ 12 ಮಕ್ಕಳ ಪೈಕಿ ಓರ್ವರಾಗಿ ಕಟಕ್‌ನಲ್ಲಿ ಜನಿಸಿದವರು ಸುಭಾಶ್ಚಂದ್ರ ಬೋಸ್‌. ವಿದ್ಯಾವಂತ ಕುಲೀನ ಮನೆತನದ ಭೋಸರು ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜು, ಸ್ಕಾಟಿಷ್‌ ಚರ್ಚ್‌ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಪಡೆದವರು. ತಂದೆಯ ಒತ್ತಾಯದ ಮೇರೆಗೆ ಐ.ಸಿ.ಎಸ್‌. ಉತ್ತೀರ್ಣರಾದರೂ ಆ ಕಾಲದಲ್ಲಿ ಕೈತುಂಬಾ ಸಂಬಳ, ಅಧಿಕಾರ ಎಲ್ಲವನ್ನೂ ಹೊಂದುವ ಅವಕಾಶವಿದ್ದರೂ ಅವೆಲ್ಲವನ್ನು “ಪಾರತಂತ್ರ್ಯದ ಸಂಕೇತ” ಎಂಬುದಾಗಿ ತ್ಯಾಗ ಮಾಡಿದ ಧೀಮಂತ ಎನಿಸಿದರು; ಸ್ವಾತಂತ್ರ್ಯಹೋರಾಟದ ವೀರ ಭೂಮಿಗೆ ಧುಮುಕಿದರು. ರಾಷ್ಟ್ರದ ಬಿಡುಗಡೆಯ ಹೋರಾಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ತೊಡಗಿಕೊಂಡಿದ್ದ ದಿನಗ ಳವು. ಇನ್ನೊಂದೆಡೆ ಇಡೀ ಜಗತ್ತಿನ ಮೇಲೆ ದ್ವಿತೀಯ “ವಿಶ್ವ ಸಮರ’ದ ಕಾರ್ಮೋಡ ಪಸರಿಸುತ್ತಿತ್ತು. ಆ ಸಂಧಿ ಕಾಲದಲ್ಲಿ 1938 ಹಾಗೂ 1939 ಈ ಎರಡು ಅವಧಿಗೆ ಕಾಂಗ್ರೆಸಿನ ಅಧ್ಯಕ್ಷರಾಗಿ ಬೋಸ್‌ ಆಯ್ಕೆಯಾದರು. ಗಾಂಧೀಜಿಯ ಪೂರ್ಣ ಬೆಂಬಲ ಹೊಂದಿದ್ದ ಪಟ್ಟಾಭಿ ಸೀತಾರಾಮಯ್ಯ ರವರನ್ನೂ ಸೋಲಿಸಿ ಆ ಸಂಘ ಟನೆಯ ನೇತಾರರಾದರು. ಆದರೆ ನಾಯಕರ ಮೃದು ಧೋರಣೆಯಿಂದ ರೋಸಿಹೊಗಿ ಹುದ್ದೆಗೆ ರಾಜೀನಾಮೆ ಇತ್ತು, ಬ್ರಿಟಿಷರು ವಿಧಿಸಿದ “ಗೃಹ ಬಂಧನ’ ದಿಂದ ರೋಮಾಂಚಕ ರೀತಿ ಯಲ್ಲಿ ಪಾರಾಗಿ, ಸ್ವತಂತ್ರ ಪಡೆಯ ಸೇನಾನಿಯಾಗಿ ಇತಿಹಾಸದ ಪುಟದಲ್ಲಿ ಸುಭಾಶ್ಚಂದ್ರ ಬೋಸ್‌ ಮಿಂಚಿದ್ದರು.

ನೇತಾಜಿ ಅವರು 1945 ಆಗಸ್ಟ್‌ 18 ರಂದು ತೈವಾನ್‌ನ ತೈಪೆಯಲ್ಲಿ ವಿಮಾನ ದುರಂತದಲ್ಲಿ ಅಸು ನೀಗಿದರು ಎಂಬುದನ್ನು ಅವರ ಸಂಬಂಧಿ ಗಳು, ಸಹಚರರು ಇಂದಿಗೂ ಒಪ್ಪುತ್ತಿಲ್ಲ.

ನೇತಾಜಿ ಸುಭಾಶ್ಚಂದ್ರ ಬೋಸರ ಜನ್ಮದಿನವನ್ನು  “ಪರಾಕ್ರಮ ದಿನ’ವಾಗಿ ಆಚರಿಸುತ್ತಿರುವ  ಈ ಶುಭ ಅವಸರದಲ್ಲಿ  ಅವರೊಂದಿಗೆ  ನೇರ ಸಂಪರ್ಕ ಹೊಂದಿದ ನಮ್ಮದೇ ಪರಿಸರದ ಸ್ವಾತಂತ್ರ್ಯ ಯೋಧರನ್ನೂ ನೆನಪಿಸುವುದೂ ಸಮಯೋಚಿತ. ತುಳುನಾಡಿನ ಮಂಗಳೂರಿನಲ್ಲಿ ಜನಿಸಿ, ಬಾರ್‌.ಎಟ್‌.ಲಾ. ವರೆಗೆ ಉನ್ನತ ವ್ಯಾಸಂಗ ಪಡೆದು ವಿದೇಶಿ ರಾಯಭಾರಿಯಾಗಿಯೂ ಎತ್ತರದ ಸ್ತರ ಏರಿದವರು ಅತ್ತಾ ವರ ಎಲ್ಲಪ್ಪ ಅವರು. ಆದರೆ ನೇತಾಜಿಯವರ “ಜೈ ಹಿಂದ್‌’ ಕರೆಗೆ ಓಗೊಟ್ಟು  ಧರ್ಮಪತ್ನಿ ಸೀತಮ್ಮರೊಂದಿಗಿನ ದಾಂಪತ್ಯ ಜೀವನವನ್ನು ತ್ಯಾಗ ಮಾಡಿ “ಆಜಾದ್‌ ಹಿಂದ್‌ ಸರಕಾರ’ ದ  ಸಚಿವರಾಗಿ, ಮಲಯಾದಲ್ಲಿ ದೇಶಪ್ರೇಮಿ ಶ್ರೀಮಂತರ ಸಹಕಾರದಿಂದ “ಆಜಾದ್‌ ಹಿಂದ್‌ ಬ್ಯಾಂಕ್‌’  ಸ್ಥಾಪಿಸಿ 5 ಮಿಲಿ ಯನ್‌ ಬಂಡವಾಳವನ್ನು ಪಡೆದರು. ಅದೇ ರೀತಿ ಐಎನ್‌ಎ ಯೋಧರ ಖರ್ಚು ಭರಿಸುವಲ್ಲಿ ಪೂರ್ತಿ ಸಹಕರಿಸಿದರು. ತನ್ಮೂಲಕ ನೇತಾಜಿಯವರ ನೆಚ್ಚಿನ ಸಂಗಾತಿಯಾದವರು ಇವರು. “ಝಾನ್ಸಿ ರೆಜಿಮೆಂಟಿನ ಕ್ಯಾಪ್ಟನ್‌ ಲಕ್ಷ್ಮೀ ಸೆಹಗಲ್‌ 1997 ಫೆಬ್ರವರಿ 13ರಂದು ಬರೆದ ಪತ್ರದಲ್ಲಿ ‘Yellappa Saheb was a great man, he gave his unflinching loyalty and dedication ‘  ಎಂಬುದಾಗಿ ಎಲ್ಲಪ್ಪರ ಅಳಿಯ ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಯ ಪ್ರಭಾಕರ ದಾಸ್‌ ಅವರಿಗೆ ತಿಳಿಸಿದ್ದರು. ಅದೇ ರೀತಿ ಬೆಳ್ತಂಗಡಿಯ ಕ| ಸುಂದರ ರಾಯರನ್ನು ನೇತಾಜಿ ಜನ್ಮ ಶತಾಬ್ಧಿ ಸಂದರ್ಭದಲ್ಲಿ 1997 ಜನವರಿ 23ರಂದು ಮಂಗಳೂರಿನಲ್ಲಿ ಸಮ್ಮಾನಿಸಲಾಯಿತು. ಆ ಸಂದರ್ಭ ಗದ್ಗದಿತರಾಗಿ ಸುಂದರ ರಾಯರು ನೇತಾಜಿ ಅವರೊಂದಿಗಿನ ತಮ್ಮ ಒಡನಾಟದ ದಿನ ಗಳನ್ನು ಮೆಲುಕು ಹಾಕಿದ್ದರು.

ಸುಮಾರು ಹತ್ತು ವರ್ಷಗಳ ಕಾಲ ನೇತಾಜಿ ಅವರ ಅಂಗರಕ್ಷಕರಾಗಿದ್ದವರು  ಕೆ.ಎನ್‌. ರಾವ್‌ ದಾಂಡೇಲಿ (ನಿಜನಾಮ ನರಸಿಂಹ ಬಾಬಣ್ಣ ಕಾಮತ್‌) ನೇತಾಜಿ ವಿಮಾನ ಅಪಘಾತದಲ್ಲಿ ಮಡಿದಿಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಲೇ ಬಂದಿದ್ದರು. ಮಂಗಳೂರಿನ ವೀರ ನಗರದಲ್ಲಿ ವಾಸಿಸುತ್ತಿದ್ದ ಗೋಪಾಲ ಶೆಟ್ಟಿ 1941ರಲ್ಲಿ ಬ್ರಿಟಿಷ್‌ ಸೈನ್ಯ ಸೇರಿ, ಆ ಬಳಿಕ ಪ್ರಖರ ರಾಷ್ಟ್ರೀಯತೆಯಿಂದ ಐ.ಎನ್‌.ಎ. ಸೇರಿದ ಇನ್ನೋರ್ವ ಗೌರವಾನ್ವಿತ ಸ್ವಾತಂತ್ರ್ಯ ಯೋಧ. ಅದೇ ರೀತಿ ತುಮಕೂರಿನ ಹಳ್ಳಿ ರೈತ ಲಿಂಗಯ್ಯ ಬ್ರಿಟಿಷ್‌ ಸೇನೆ ತ್ಯಜಿಸಿ “ಆಜಾದ್‌ ಹಿಂದ್‌ ಫೌಜ್‌’ ಸೇರಿ 1948ರಲ್ಲಿ ಯುದ್ಧ  ಕೈದಿಯಾಗಿಯೇ ಜಪಾನಿನಲ್ಲಿ ಅಮರ ರಾದವರು. ಹೀಗೆ “ಪರಾಕ್ರಮ  ದಿವಸ’ ಆಚರಣೆ ಮುಂದಿನ ಪೀಳಿಗೆಗೂ ನೇತಾಜಿ ಮತ್ತವರ ಸಂಗಾತಿಗಳ ಸಾಹಸಮಯ ಬದುಕು, ಅದಮ್ಯ ಸಾಹಸ ಹಾಗೂ ತ್ಯಾಗದ ಮೇಲೆ ಬೆಳಕು ಚೆಲ್ಲುವಂತಹದು.

ಡಾ| ಪಿ.ಅನಂತಕೃಷ್ಣ ಭಟ್‌ ಮಂಗಳೂರು

ಟಾಪ್ ನ್ಯೂಸ್

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.