ಬಾರ್ಬೊರಾ ಕ್ರೆಜಿಕೋವಾಗೆ ಫ್ರೆಂಚ್ ಓಪನ್ ಕಿರೀಟ
Team Udayavani, Jun 13, 2021, 12:18 AM IST
ಪ್ಯಾರಿಸ್ : ಶ್ರೇಯಾಂಕ ರಹಿತ ಜೆಕ್ ಆಟಗಾರ್ತಿ ಬಾರ್ಬೊರಾ ಕ್ರೆಜಿಕೋವಾ ಫ್ರೆಂಚ್ ಓಪನ್ ಟೂರ್ನಿಯ ನೂತನ ರಾಣಿಯಾಗಿದ್ದಾರೆ. ಶನಿವಾರದ 3 ಸೆಟ್‌ಗಳ ಫೈನಲ್ ಹೋರಾಟದಲ್ಲಿ ಅವರು ರಶ್ಯದ 31ನೇ ಶ್ರೇಯಾಂಕಿತೆ ಅನಾಸ್ತಾಸಿಯಾ ಪಾವ್ಲುಚೆಂಕೋವಾ ವಿರುದ್ಧ 6-1, 2-6, 6-4 ಅಂತರದ ಗೆಲುವು ಸಾಧಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಟ್ರೋಫಿಯನ್ನು ಹಿಡಿದು ಸಂಭ್ರಮಿಸಿದರು.
ಇಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಆದುದರಿಂದ ಟೆನಿಸ್ ಅಭಿಮಾನಿಗಳು ವಿಶೇಷ ಕುತೂಹಲ ಇರಿಸಿಕೊಂಡಿದ್ದರು. ಮೊದಲ ಸೆಟ್ ಅನ್ನು ಸುಲಭದಲ್ಲಿ ವಶಪಡಿಸಿಕೊಂಡ ಕ್ರೆಜಿಕೋವಾ, ದ್ವಿತೀಯ ಸೆಟ್‌ನಲ್ಲಿ ಇದೇ ರಭಸ ತೋರುವಲ್ಲಿ ವಿಫಲರಾದರು. ಪಾವ್ಲುಚೆಂಕೋವಾ ತಿರುಗಿ ಬಿದ್ದರು. ತೃತೀಯ ಸೆಟ್ ಹೆಚ್ಚು ಫೈಟ್ ಕಂಡೀತೆಂಬ ನಿರೀಕ್ಷೆ ಇತ್ತು. ಆದರೆ ಇಲ್ಲಿ ಕ್ರೆಜಿಕೋವಾ ಮುಂದೆ ರಶ್ಯನ್ನಳ ಆಟ ಸಾಗಲಿಲ್ಲ. ಬರೋಬ್ಬರಿ 40 ವರ್ಷಗಳ ಬಳಿಕ ಜೆಕ್ ಆಟಗಾರ್ತಿಯೊಬ್ಬರು ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಆಗಿ ಮೂಡಿಬಂದ ಕ್ಷಣಕ್ಕೆ ಕ್ರೆಜಿಕೋವಾ ಸಾಕ್ಷಿಯಾದರು.
ಡಬಲ್ಸ್ ನಲ್ಲೂ ಫೈನಲ್
ಕ್ರೆಜಿಕೋವಾ ರವಿವಾರ ವನಿತಾ ಡಬಲ್ಸ್ ಫೈನಲ್‌ನಲ್ಲೂ ಸೆಣಸಲಿದ್ದಾರೆ. ಇಲ್ಲಿ ಅವರ ಜತೆಗಾರ್ತಿ ಕ್ಯಾಥರಿನಾ ಸಿನಿಯಕೋವಾ. ಈ ಜೋಡಿಯ ಎದುರಾಳಿ ಪೋಲೆಂಡ್‌ನ ಐಗಾ ಸ್ವಿಯಾಟೆಕ್-ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್.
ಕ್ರೆಜಿಕೋವಾ ಇದಕ್ಕೂ ಮೊದಲು 2018ರಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ವನಿತಾ ಡಬಲ್ಸ್ ಪ್ರಶಸ್ತಿ ಎತ್ತಿದ್ದರು. ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧನೆಗೈದ ಹಿರಿಮೆಯೂ ಇವರ ಪಾಲಿಗಿದೆ (2019, 2020, 2021).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.