French Open Men’s Singles: ಜೊಕೋವಿಕ್-ರೂಡ್ ಫೈನಲ್ ರೋಡ್
| ಜೊಕೋಗೆ 23ನೇ ಗ್ರ್ಯಾನ್‌ಸ್ಲಾಮ್ ನಿರೀಕ್ಷೆ | ರೂಡ್‌ಗೆ ಸತತ 2ನೇ ಫೈನಲ್
Team Udayavani, Jun 11, 2023, 6:10 AM IST
ಪ್ಯಾರಿಸ್: ಸರ್ಬಿಯಾದ ಸೂಪರ್‌ಸ್ಟಾರ್ ನೊವಾಕ್ ಜೊಕೋವಿಕ್ ಮತ್ತು ನಾರ್ವೆಯ ಕ್ಯಾಸ್ಪರ್ ರೂಡ್ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ
ಗಾಗಿ ರವಿವಾರ ಸಂಜೆ ಸೆಣಸಲಿದ್ದಾರೆ.
ಮೊದಲ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ 6-3, 7-5, 6-1, 6-1 ರಿಂದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದರು. ದ್ವಿತೀಯ ಸೆಟ್ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದ ಬಳಿಕ ಅಲ್ಕರಾಜ್ “ಕ್ರ್ಯಾಂಪ್ಸ್’ ಸಮಸ್ಯೆಗೆ ಸಿಲುಕಿದರು. ಹೀಗಾಗಿ ಅವರಿಗೆ ಪೂರ್ಣ ಸಾಮರ್ಥ್ಯವನ್ನು ತೋರಲಾಗಲಿಲ್ಲ. ಆದರೂ 3 ಗಂಟೆ, 23 ನಿಮಿಷಗಳ ಕಾಲ ಹೋರಾಟ ನಡೆಸಿದರು.
ದ್ವಿತೀಯ ಸೆಮಿಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ 6-3, 6-4, 6-0 ಅಂತರದಿಂದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರಿಗೆ ಸೋಲುಣಿಸಿದರು. ಇದು ರೂಡ್ ಕಾಣುತ್ತಿರುವ ಸತತ 2ನೇ ಫ್ರೆಂಚ್ ಓಪನ್ ಫೈನಲ್ ಆಗಿದೆ. ಕಳೆದ ವರ್ಷದ ಪ್ರಶಸ್ತಿ ಸಮರದಲ್ಲಿ “ಕ್ಲೇ ಕೋರ್ಟ್ ಕಿಂಗ್’ ರಫೆಲ್ ನಡಾಲ್ ವಿರುದ್ಧ 6-3, 6-3, 6-0 ಅಂತರದ ಸೋಲಿಗೆ ತುತ್ತಾಗಿದ್ದರು. ಈ ಬಾರಿ ಮತ್ತೋರ್ವ ದೈತ್ಯ ಆಟಗಾರ ಜೊಕೋವಿಕ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ.
ಇದು ಕ್ಯಾಸ್ಪರ್ ರೂಡ್ ಅವರ 3ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ. ಕಳೆದ ವರ್ಷದ ಯುಎಸ್ ಓಪನ್ ಪಂದ್ಯಾವಳಿಯಲ್ಲೂ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಅಲ್ಲಿ ಕಾರ್ಲೋಸ್ ಅಲ್ಕರಾಜ್ ಮುಂದೆ ಇವರ ಆಟ ನಡೆದಿರಲಿಲ್ಲ. ರವಿವಾರ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎತ್ತಿ ಇತಿಹಾಸ ನಿರ್ಮಿಸಲು ರೂಡ್‌ಗೆ ಸಾಧ್ಯವೇ ಎಂಬುದೊಂದು ದೊಡ್ಡ ಪ್ರಶ್ನೆ.
ದಾಖಲೆಯ ಹಾದಿಯಲ್ಲಿ
ಇದು 36 ವರ್ಷದ ನೊವಾಕ್ ಜೊಕೋವಿಕ್ ಅವರ 34ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಹಾಗೂ 7ನೇ ಫ್ರೆಂಚ್ ಓಪನ್ ಫೈನಲ್ ಆಗಿದೆ. ರವಿವಾರ ರೂಡ್ ಅವರನ್ನು ಮಣಿಸಿದರೆ ಪುರುಷರ ಸಿಂಗಲ್ಸ್‌ನಲ್ಲಿ ಸರ್ವಾಧಿಕ 23 ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆ ಜೊಕೋ ಅವರದ್ದಾಗಲಿದೆ. ಸದ್ಯ ಜೊಕೋ ಮತ್ತು ರಫೆಲ್ ನಡಾಲ್ ತಲಾ 22 ಗ್ರ್ಯಾನ್‌ಸ್ಲಾಮ್ ಗೆದ್ದು ಜಂಟಿ ಅಗ್ರಸ್ಥಾನಿಯಾಗಿದ್ದಾರೆ.
ರವಿವಾರ ಫ್ರೆಂಚ್ ಓಪನ್ ಚಾಂಪಿ ಯನ್ ಆಗಿ ಮೂಡಿಬಂದರೆ ಜೊಕೋ ವಿಕ್ ಮರಳಿ ವಿಶ್ವದ ನಂ.1 ಟೆನಿಸಿಗನೆಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ಈ ಪಟ್ಟದಲ್ಲಿರುವವರು ಕಾರ್ಲೋಸ್ ಅಲ್ಕರಾಜ್.
ಜೊಕೋವಿಕ್ 7 ಸಲ “ರೊಲ್ಯಾಂಡ್ ಗ್ಯಾರೋಸ್’ ಫೈನಲ್ ತಲುಪಿದರೂ ಗೆದ್ದದ್ದು ಕೇವಲ ಎರಡು ಸಲ. 2016ರಲ್ಲಿ ಆ್ಯಂಡಿ ಮರ್ರೆ ಅವರನ್ನು ಮಣಿಸಿದರೆ, 2021ರಲ್ಲಿ ಸ್ಟೆಫನಸ್ ಸಿಸಿಪಸ್ ಅವರನ್ನು ಕೆಡವಿ ಪ್ರಶಸ್ತಿ ಎತ್ತಿದ್ದರು.
ಈಗಿನ ಲೆಕ್ಕಾಚಾರದ ಪ್ರಕಾರ ಜೊಕೋವಿಕ್ ಅವರೇ ನೆಚ್ಚಿನ ಆಟಗಾರ. ಕ್ಯಾಸ್ಪರ್ ರೂಡ್ ವಿರುದ್ಧ ಆಡಿದ ನಾಲ್ಕೂ ಪಂದ್ಯಗಳಲ್ಲಿ ಅವರು ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.