ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ
ತಬಲಾ ವಾದಕ ಅನಿಂದ್ಯಾ ಚಟರ್ಜಿ ಅವರೂ, ಪದ್ಮಶ್ರೀ ಬಗ್ಗೆ ಆಕ್ಷೇಪ
Team Udayavani, Jan 27, 2022, 11:18 AM IST
ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕೇಂದ್ರ ಘೋಷಿಸಿದ್ದ ಪದ್ಮ ಪ್ರಶಸ್ತಿ ವಿಚಾರದಲ್ಲಿ ವಿವಾದವುಂಟಾಗಿದ್ದು, ಪ. ಬಂಗಾಳದ ಮೂವರು ಪ್ರಶಸ್ತಿ ತಿರಸ್ಕರಿಸಿದ್ದಾರೆ. ಮಂಗಳವಾರವೇ ಬಂಗಾಳದ ಮಾಜಿ ಸಿಎಂ ಬುದ್ಧ ದೇವ್ ಭಟ್ಟಾಚಾರ್ಯ ಪದ್ಮ ಭೂಷಣ ಪ್ರಶಸ್ತಿ ತಿರಸ್ಕಾರ ಮಾಡುವುದಾಗಿ ಹೇಳಿದ್ದರು. ಪ್ರಶಸ್ತಿ ಸಂಬಂಧ ಯಾರೊಬ್ಬರು ತಮ್ಮೊಂದಿಗೆ ಮಾತನಾಡಿಲ್ಲ. ಹೀಗಾಗಿ, ಪ್ರಶಸ್ತಿ ತಿರಸ್ಕರಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಸಿದ್ದುಗೆ ಹೈಕಮಾಂಡ್ ಟಕ್ಕರ್ : ಮೇಲ್ಮನೆ ವಿಪಕ್ಷ ನಾಯಕತ್ವದ ಹಿಂದೆ ಲೆಕ್ಕಾಚಾರ
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಟ್ಟಾಚಾರ್ಯ ಅವರ ಕುಟುಂಬ ಸದಸ್ಯರ ಜತೆ ಮಾತನಾಡಿಯೇ ಪ್ರಶಸ್ತಿ ಅಂತಿಮಗೊಳಿಸಿದ್ದೇವೆ ಎಂದಿದೆ.
ಇನ್ನು ಪ್ರಸಿದ್ಧ ತಬಲಾ ವಾದಕ ಪಂಡಿತ ಅನಿಂದ್ಯ ಚಟರ್ಜಿ ಮತ್ತು ಹಿರಿಯ ಹಿನ್ನೆಲೆ ಗಾಯಕಿ ಸಂಧ್ಯಾ ಮುಖೋಪಾಧ್ಯಾಯ ಅವರೂ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಇವರಿಬ್ಬರಿಗೂ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. 90 ವರ್ಷದ ಸಂಧ್ಯಾ ಮುಖೋಪಾಧ್ಯಾಯ ಅವರು, ಈ ವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಕಿರಿಯರಿಗೆ ನೀಡುವ ಪ್ರಶಸ್ತಿ ಎಂಬುದು ಇವರ ವಾದ. ಇನ್ನು ತಬಲಾ ವಾದಕ ಅನಿಂದ್ಯಾ ಚಟರ್ಜಿ ಅವರೂ, ಪದ್ಮಶ್ರೀ ಬಗ್ಗೆ ಆಕ್ಷೇಪವೆತ್ತಿದ್ದು, ನಾನು ಈ ಪ್ರಶಸ್ತಿಯ ಹಂತ ದಾಟಿದ್ದೇನೆ ಎಂದು ಹೇಳಿದ್ದಾರೆ.
ವಿಚಿತ್ರವೆಂದರೆ, ಒಮ್ಮೆ ಪದ್ಮ ಪ್ರಶಸ್ತಿ ಘೋಷಣೆಯಾದ ಬಳಿಕ ಇದನ್ನು ನಿರಾಕರಿಸುವುದು ಕಡಿಮೆ. ಘೋಷಣೆಗೂ ಮುನ್ನವೇ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು, ಪ್ರಶಸ್ತಿ ಪುರಸ್ಕೃತರನ್ನು ಸಂಪರ್ಕಿಸಿ, ಪ್ರಶಸ್ತಿ ನೀಡುತ್ತಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲೇ ಬೇಡವೆಂದು ಹೇಳಿದರೆ, ಪಟ್ಟಿಯಲ್ಲಿ ಸೇರಿಸುವುದೇ ಇಲ್ಲ.
ಆಜಾದ್‌ಗೆ ಪದ್ಮ ಗೌರವ: “ಕೈ’ನಲ್ಲಿ ಒಡಕು
ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿರುವುದು ಕಾಂಗ್ರೆಸ್‌ನಲ್ಲಿ ಭಿನ್ನಮತ ಸೃಷ್ಟಿಸಿದೆ. ಕಾಂಗ್ರೆಸ್‌ನ ಜಿ-23 ನಾಯಕರಾದ ಆನಂದ್ ಶರ್ಮಾ, ಕಪಿಲ್ ಸಿಬಲ್, ರಾಜ್ ಬಬ್ಬರ್ ಮುಂತಾದವರು ಪ್ರಶಸ್ತಿ ಬಂದಿದ್ದಕ್ಕೆ ಆಜಾದ್ ಅವರನ್ನು ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡಿ, ರಾಷ್ಟ್ರಕ್ಕಾಗಿ ನೀಡಿದ ಅಮೋಘ ಸೇವೆಗಾಗಿ ಪದ್ಮಭೂಷಣ ಗೌರವ ನೀಡಿದೆ.
ಆದರೆ, ಕಾಂಗ್ರೆಸ್‌ನಲ್ಲಿ ಅವರ ಸೇವೆಗೆ ಮನ್ನಣೆ ಸಿಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೂಬ್ಬ ನಾಯಕ ಜೈರಾಂ ರಮೇಶ್ ತಮ್ಮ ಟ್ವೀಟ್‌ನಲ್ಲಿ, “ಪದ್ಮಭೂಷಣಕ್ಕೆ ಪಾತ್ರರಾಗಿರುವ ಬಂಗಾಳದ ಬುದ್ಧದೇವ್ ಅವರು ಅದನ್ನು ತಿರಸ್ಕರಿದ್ದಾರೆ. ಅವರು “ಗುಲಾಂ’ (ಸೇವಕ) ಆಗಿರಲು ಬಯಸದೇ, “ಆಜಾದ್’ (ಸ್ವತಂತ್ರ) ಆಗಿರಲು ಬಯಸಿದ್ದಾರೆ” ಎನ್ನುವ ಮೂಲಕ ಆಜಾದ್ ಪ್ರಶಸ್ತಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.