![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 6, 2020, 8:46 PM IST
ಬೆಂಗಳೂರು: ರಾಜ್ಯದ “ಎ’ ದರ್ಜೆಯ ನೂರು ದೇವಸ್ಥಾನಗಳಲ್ಲಿ ಮಾತ್ರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುವುದು. ಇದರಿಂದ ಸಿಬಂದಿ ವೇತನಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುವ ಸಂದರ್ಭದಲ್ಲಿ ಭಕ್ತರು ಹುಂಡಿಗೆ ಹಾಕುವ ಹಣವನ್ನು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕೇ ವಿನಾ ಸಾಮೂಹಿಕ ವಿವಾಹಕ್ಕೆ ಉಪಯೋಗಿಸುವುದು ಸರಿಯಲ್ಲ. ಸರಕಾರ ಸ್ವಂತ ಖರ್ಚಿನಿಂದ ಇದನ್ನು ಮಾಡಬೇಕು ಎಂದರು.
ಇದಕ್ಕೆ ಸಭಾನಾಯಕರೂ ಆದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಶೇ.35ಕ್ಕಿಂತ ಕಡಿಮೆ ಆದಾಯ ಮಿತಿ ಇರುವ ದೇವಸ್ಥಾನದ ಹಣವನ್ನು ಬಳಕೆ ಮಾಡಿಕೊಳ್ಳದೆ ಮುಜರಾಯಿ ಇಲಾಖೆಯಿಂದಲೇ ಆರ್ಥಿಕ ನೆರವು ನೀಡಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುವುದು. ಆರ್ಥಿಕವಾಗಿ ಬಲವಾಗಿರುವ ನೂರು “ಎ’ ದರ್ಜೆಯ ದೇವಸ್ಥಾನಗಳ ಪೈಕಿ ಮೂರು ದೇವಸ್ಥಾನಗಳನ್ನು ಹೊರತುಪಡಿಸಿ 97 ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಮಾಡಲಾಗುತ್ತದೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 100 ಕೋಟಿ , ಕೊಲ್ಲೂರು ಮೂಕಾಂಬಿಕೆಯಿಂದ 60 80 ಕೋಟಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಿಂದ 35ರಿಂದ 40 ಕೋಟಿ, ಚಾಮುಂಡೇಶ್ವರಿ ದೇವಸ್ಥಾನದಿಂದ 40 50 ಕೋ. ರೂ. ಆದಾಯ ಬರುತ್ತದೆ. 190 ದೇವಸ್ಥಾನಗಳ ಪೈಕಿ 100 “ಎ’ ದರ್ಜೆಯ ದೇವಸ್ಥಾನಗಳಲ್ಲಿರುವ ಹಣವನ್ನು ಮಾತ್ರ ಬಳಕೆ ಮಾಡುತ್ತಿದ್ದೇವೆ. ಆರ್ಥಿಕವಾಗಿ ಶಕ್ತಿ ಕಡಿಮೆ ಇರುವ ದೇವಸ್ಥಾನಗಳ ಹುಂಡಿಯ ಹಣವನ್ನು ಅಲ್ಲಿನ ಸಿಬಂದಿ ವೇತನಕ್ಕೆ ಉಪಯೋಗಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಉಚಿತ ಸಾಮೂಹಿಕ ವಿವಾಹಕ್ಕೆ ಹಣಕಾಸಿನ ಕೊರತೆ ಇಲ್ಲ. ನಮ್ಮ ಇಲಾಖೆ ಇದೆಲ್ಲವನ್ನು ಭರಿಸಲು ಶಕ್ತವಾಗಿದೆ. ಈವರೆಗೂ ಸಾಮೂಹಿಕ ಮದುವೆಯಾಗಲು 2,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ವಿವಾಹವಾಗುವವರು ಸ್ಥಳದಲ್ಲಿಯೇ ನೋಂದಣಿ ಮಾಡಿಸಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೊಂದು ಪಾರದರ್ಶಕ ಕಾರ್ಯಕ್ರಮವಾಗಿದ್ದು, ಪಕ್ಷಬೇಧ ಮರೆತು ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.