Watch: ರಸ್ತೆ ಬದಿ ಹಣ್ಣಿನ ವ್ಯಾಪಾರದ ಜತೆಗೆ ಮಕ್ಕಳಿಗೆ ಪಾಠ ಕಲಿಸುವ ತಾಯಿಯ ವಿಡಿಯೋ ವೈರಲ್
ಮಕ್ಕಳಿಗೆ ಪಾಠ ಕಲಿಸುತ್ತಿರುವ ವಿಡಿಯೋಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Team Udayavani, Aug 31, 2023, 3:39 PM IST
ಬೆಂಗಳೂರು: ಜೀವನ ಸಾಗಿಸುವ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರು ಗ್ರಾಹಕರು ಯಾರೂ ಇಲ್ಲದ ಸಮಯದಲ್ಲಿ ಮಕ್ಕಳಿಗೆ ಪಾಠ ಕಲಿಸುತ್ತಿರುವ ವಿಡಿಯೋಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:G20 ಶೃಂಗಸಭೆಗೆ ಭರದ ಸಿದ್ಧತೆ: ಕೋತಿಗಳ ಕಾಟ ತಪ್ಪಿಸಲು ಮಹಾನಗರ ಪಾಲಿಕೆ ಹೊಸ ತಂತ್ರ
ಗ್ರಾಹಕರು ಯಾರು ಇರದ ಸಂದರ್ಭದಲ್ಲಿ ತನ್ನ ಹಣ್ಣಿನ ತಳ್ಳುವ ಗಾಡಿಯ ಹಿಂಬದಿಯಲ್ಲಿ ಮಹಿಳೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೀವನೋಪಾಯಕ್ಕೆ ಹಣ್ಣಿನ ವ್ಯಾಪಾರ ಮಾಡುವ ಮತ್ತು ಮಕ್ಕಳ ಭವಿಷ್ಯದ ಕುರಿತು ಗಮನಹರಿಸುವ ಮಹಿಳೆಯ ಬಹುಪ್ರತಿಭೆಯ ಸಾಮರ್ಥ್ಯ ನೆಟ್ಟಿಗರ ಮನಗೆದ್ದಿರುವುದಾಗಿ ವರದಿ ತಿಳಿಸಿದೆ.
ಈ ವಿಡಿಯೋ ಬೆಂಗಳೂರಿನದ್ದು…
ಈ ವಿಡಿಯೋದ ಮೂಲ ಬೆಂಗಳೂರು ಆಗಿದೆ. ಹಣ್ಣಿನ ಅಂಗಡಿ ಸಮೀಪ ಕರ್ನಾಟಕ ರಿಜಿಸ್ಟ್ರೇಶನ್ ನಂಬರ್ ನ ವಾಹನಗಳು ನಿಂತಿದ್ದು, ವಿಡಿಯೋದಲ್ಲಿಯೂ ಸುರಾನಾ ವಿದ್ಯಾಲಯದ ಸ್ಕೂಲ್ ಬಸ್ ಸಂಚರಿಸಿರುವುದು ಸೆರೆಯಾಗಿದ್ದು, ಇದು ಬೆಂಗಳೂರಿನ ಕೆಆರ್ ಪುರಂ ಸುತ್ತಮುತ್ತ ಪ್ರದೇಶದ ವಿಡಿಯೋ ಎಂದು ಗ್ರಹಿಸಲಾಗಿದೆ. ವೈರಲ್ ವಿಡಿಯೋವನ್ನು ಜಾರ್ಖಂಡ್ ನ ಡೆಪ್ಯುಟಿ ಕಲೆಕ್ಟರ್ ಸಂಜಯ್ ಕುಮಾರ್ ತಮ್ಮ ಅಧಿಕೃತ x ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
आज कैप्शन के लिये मेरे पास शब्द ही नहीं हैं..!!
💕#मां #Respectfully 🙏 pic.twitter.com/8A3WEFmAMg— Sanjay Kumar, Dy. Collector (@dc_sanjay_jas) August 29, 2023
ಆಗಸ್ಟ್ 29ರಂದು ಶೇರ್ ಆದ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 28 ಸೆಕೆಂಡ್ಸ್ ನ ಈ ವಿಡಿಯೋ ವೀಕ್ಷಕರ ಮನಗೆದ್ದಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.