ತೈಲ ಬೆಲೆ ಏರಿಕೆ ಎಫೆಕ್ಟ್: ಅಕ್ಕಿ ದರದಲ್ಲಿ ಕ್ವಿಂಟಲ್‌ಗೆ ದಿಢೀರ್ 200 ರೂ. ಹೆಚ್ಚಳ
Team Udayavani, Jun 17, 2021, 7:38 PM IST
ಬೆಂಗಳೂರು: ತೈಲಬೆಲೆಯ ಏರಿಕೆ ಎಫೆಕ್ಟ್ ಈಗ ಅಕ್ಕಿ ವ್ಯಾಪಾರದ ಮೇಲೆ ಬೀರಿದೆ.ಕಳೆದ ಕೆಲವು ದಿನಗಳಿಂದ ಪೆಟ್ರೋಲ್, ಡಿಸೇಲ್ ಸೇರಿದಂತೆ ತೈಲ ಬೆಲೆ ಗಗನ ಮುಖವಾಗಿದ್ದು ಆ ಹಿನ್ನೆಲೆಯಲ್ಲಿ ಭಿನ್ನ ತಳಿಯ ಅಕ್ಕಿಯ ಬೆಲೆ ಪ್ರತಿ ಕ್ವಿಂಟಾಲ್‌ನ ನಿಗದಿತ ಬೆಲೆಗಿಂತ ದಿಢೀರ್ ಆಗಿ 200ರೂ. ಏರಿಕೆಯಾಗಿದೆ. ಜನತಾ ಕರ್ಫ್ಯೂ ಮಾರ್ಗಸೂಚಿ ತೆರವಾಗುತ್ತಿದಂತೆ ಇದರ ಬಿಸಿ ಶ್ರೀಸಾಮಾನ್ಯರಿಗೆ ತಟ್ಟಿದೆ.
ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ಹಿಂದೆ ಕೋಲಂ (ಬುಲೆಟ್ ರೈಸ್ )ಅಕ್ಕಿ ಬೆಲೆ ಕೆ.ಜಿ.ಗೆ 68 ರೂ.ಆಗಿತ್ತು.ಆದರೆ ಗುರುವಾರ ಅದು 70ರೂ.ಗೆ ಮಾರಾಟವಾಯಿತು.
ಹಾಗೆಯೇ ಸೋನಂ ಮಸೂರಿ 48ರೂ.ಆಗಿತ್ತು ಅದು ಈಗ ಕೆ.ಜಿಗೆ 50 ರೂ.ಆಗಿದೆ. ಜತೆಗೆ ಸ್ಟೀಮ್ ರೈಸ್ ಕೆ.ಜಿ.ಗೆ 44 ರೂ.ಇತ್ತು ಅದು ಈಗ 46 ರೂ.ಗೆ ಏರಿಕೆಯಾಗಿದೆ ಎಂದು ಯಶವಂತಪುರ ಗೆùನ್ ಮಾರ್ಚೆಂಟ್ ಅಸೋಸಿಯೇಷನ್ ತಿಳಿಸಿದೆ.
ಬಾಸುಮತಿ ಅಕ್ಕಿ ಸೇರಿದಂತೆ ಇನ್ನಿತರ ಅಕ್ಕಿಗಳ ಬೆಲೆಯಲ್ಲಿ ಯಾವುದೇ ರೀತಿಯ ವ್ಯಾತ್ಯಾಸ ಆಗಿಲ್ಲ.ಆದರೆ ರಾಯಚೂರು ಮೂಲದ ಸೋನ ಮಸೂರಿ ಸೇರಿದಂತೆ ಇನ್ನಿತರ ಅಕ್ಕಿಯ ಬೆಲೆಯಲ್ಲಿ ಕ್ವಿಂಟಲ್‌ಗೆ 200ರೂ.ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಡಿಸೇಲ್ ದರ ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಏರಿಕೆಯಾಗಿದೆ.ಹೀಗಾಗಿ ಸಾಗಾಣಿಕೆ ವೆಚ್ಚ ಕೂಡ ಹೆಚ್ಚಳವಾಗಿದೆ. ರೈಸ್ ಮಿಲ್ ಬಾಡಿಗೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಹೀಗಾಗಿ ಕೆಲವು ಅಕ್ಕಿಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಎಂದು ಬೆಂಗಳೂರು ಗ್ರೇನ್ ಮಾರ್ಚೆಂಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಾಯಿರಾಮ್ ಪ್ರಸಾದ್ ತಿಳಿಸಿದ್ದಾರೆ.
ಜತೆಗೆ ಈಗಾಗಲೇ ಕೆಲವು ಅಕ್ಕಿ ವ್ಯಾಪಾರಿಗಳು ರೈಸ್‌ಅನ್ನು ದಾಸ್ತಾನು ಇಟ್ಟಿದ್ದರು.ಆ ದಾಸ್ತಾನು ಕೂಡ ಮುಗಿದಿದೆ.ಆ ಹಿನ್ನೆಲೆಯಲ್ಲಿ ಅಕ್ಕಿ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಇದು ಕೂಡ ರೈಸ್ ಬೆಲೆ ಏರಿಕೆ ಮೇಲೆ ಪ್ರಭಾವ ಬೀರಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಉಕ್ಕಿ ಹರಿಯುತ್ತಿರುವ ಘಟಪ್ರಭೆ : ಮೂರು ಸೇತುವೆಗಳು ಜಲಾವೃತ :ಪ್ರವಾಹ ಭೀತಿಯಲ್ಲಿ ಗ್ರಾಮಸ್ಥರು
ಅಕ್ಕಿ ಯಾವ ಭಾಗದಿಂದ ರಫ್ತಾಗುತ್ತೆ?
ಯಶವಂತಪುರ ಮಾರುಕಟ್ಟೆಗೆ ಪ್ರತಿ ನಿತ್ಯ ಸುಮಾರು 100ಲಾರಿಗಳಲ್ಲಿ ಅಕ್ಕಿ ಪೂರೈಕೆಯಾಗುತ್ತಿದೆ. ರಾಯಚೂರು, ಸಿರುಗಪ್ಪಿ, ಕೊಪ್ಪಳ,ಗಂಗಾವತಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಭಾಗದಿಂದಲೂ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ವಿವಿಧ ತಳಿಯ ರೈಸ್ ರಫ್ತಾಗುತ್ತಿದೆ ಎಂದು ಬೆಂಗಳೂರು ಗ್ರೇನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಹಾಗೆಯೇ ತುಮಕೂರು ವಿಭಾಗದ ಕೆಲವು ಅಕ್ಕಿ ವ್ಯಾಪಾರಿಗಳು ಬತ್ತ ಖರೀದಿ ಮಾಡಿ ಅದನ್ನು ರೈಸ್ ಮಿಲ್ ಮೂಲಕ ಅಕ್ಕಿಯನ್ನಾಗಿ ತಯಾರಿಸಿ ಯಶವಂತಪುರ ಮಾರುಕಟ್ಟೆಗೆ ತಲುಪಿಸುವ ಪದ್ಧತಿ ಕೂಡ ಇದೆ. ಜತೆಗೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರದ ನಾಗಪುರದಿಂದಲೂ ಕೋಲಂ ರೈಸ್ ಯಶವಂತಪುರ ಮಾರುಕಟ್ಟೆಗೆ ರಫ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಲೆ ನಿಯಂತ್ರಣಕ್ಕೆ ಮನವಿ
ಡಿಸೇಲ್ ಬೆಲೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಸರಕು ಸಾಗಾಣಿಕಾ ವೆಚ್ಚ ಕೂಡ ದಿನೇ ದಿನೆ ಅಧಿಕವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ತೈಲಬೆಲೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಇಲ್ಲದಿದ್ದರೆ ಶ್ರೀಸಾಮಾನ್ಯರು ಮತ್ತಷ್ಟು ಬೆಲೆ ಏರಿಕೆ ಹೊರೆ ಅನುಭವಿಸಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಬೆಂಗಳೂರು ಗ್ರೇನ್ ಮಾರ್ಚೆಂಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಾಯಿರಾಮ್ ಪ್ರಸಾದ್ ತಿಳಿಸಿದ್ದಾರೆ.ಸರ್ಕಾರ ತೈಲಬೆಲೆಯನ್ನು ನಿಯಂತ್ರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಬೇಳೆಕಾಳು ಬೆಲೆಯಲ್ಲಿ ಇಳಿಕೆ:
ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ಬೇಳೆಕಾಳು ರಫ್ತಾಗುತ್ತಿರುವುದರಿಂದ ಕೆಲವು ಆಹಾರ ಧಾನ್ಯಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಉದ್ದಿನಬೆಳೆೆ ಈ ಹಿಂದೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ 105ರೂ.ಇತ್ತು ಅದು ಈಗ 90 ರೂ.ಗೆ ಇಳಿದಿದೆ. ತೊಗರಿ ಬೆಳೆ ಕೆ.ಜಿ.ಗೆ 100 ರೂ.ಇತ್ತು. ಅದೀಗ 92 ರೂ ಆಗಿದೆ. ಹೆಸರು ಬೇಳೆ98 ರೂ.ದಿಂದ 90 ರೂ.ಗೆ ಇಳಿದಿದೆ. ಹಾಗೆಯೇ ಹೆಸರು ಕಾಳು, 85 ರೂದಿಂದ 75 ರೂ.ಗೆ ಇಳಿಕೆಯಾಗಿದೆ ಎಂದು ಯಶವಂತಪುರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೀಲಾದ್ರಿ ಎಂಟರ್ ಪ್ರೈಸಸ್‌ನ ಮಾಲೀಕ ಸಂದೇಶ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.