ಮಾರ್ಚ್‌ನಲ್ಲಿ ತೈಲ ಬಳಕೆ ಭಾರೀ ಹೆಚ್ಚಳ : ಬಳಕೆ ಹೆಚ್ಚಿದ್ದರಿಂದ ಮಾರಾಟದಲ್ಲಿ ಏರುಗತಿ
ದೇಶದ ಆರ್ಥಿಕತೆ ಏರುವಿಕೆಯ ಪ್ರತಿಫಲನವಿದು ಎಂದ ಆರ್ಥಿಕ ತಜ್ಞರು
Team Udayavani, Apr 10, 2021, 8:09 PM IST
ನವ ದೆಹಲಿ: ಬರೋಬ್ಬರಿ 1 ವರ್ಷದ, ಇದೇ ಮೊದಲ ಬಾರಿಗೆ 2021ರ ಮಾರ್ಚ್‌ನಲ್ಲಿ ಪೆಟ್ರೋಲ್, ಡೀಸೆಲ್ ಬಳಕೆ ಭಾರೀ ಹೆಚ್ಚಳ ಕಂಡಿದೆ. ಪೆಟ್ರೋಲ್ ಬಳಕೆ ಶೇ. 27.4ರಷ್ಟು ಹೆಚ್ಚಿದ್ದು, ಡೀಸೆಲ್ ಬಳಕೆ ಶೇ. 27.6 ಅಧಿಕಗೊಂಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಪ್ರಕಟಿಸಿರುವ ದತ್ತಾಂಶಗಳ ಪ್ರಕಾರ, ಈ ವರ್ಷ ಮಾರ್ಚ್‌ನಲ್ಲಿ 18.8 ದಶ ಲಕ್ಷ ಟನ್‌ನಷ್ಟು ಏರಿಕೆ ಕಂಡಿದೆ. ಇದರಲ್ಲಿ ಪೆಟ್ರೋಲ್‌ನ ಬಳಕೆ ಶೇ. 11.4ರಷ್ಟು (2.74 ಮಿಲಿಯನ್ ಟನ್) ಹೆಚ್ಚಿದೆ. ಇನ್ನು, ದೇಶದ ಆರ್ಥಿಕತೆಯ ಕೈಗನ್ನಡಿ ಎಂದೇ ಪರಿಗಣಿಸಲ್ಪಡುವ ಡೀಸೆಲ್ ಬಳಕೆಯ ಪ್ರಮಾಣ ಶೇ. 10ರಷ್ಟು ವೃದ್ಧಿಯಾಗಿದೆ.
ಅಡುಗೆ ಅನಿಲದ ಪ್ರಮಾಣ
ಇದೇ ವೇಳೆ, ಅಡುಗೆ ಅನಿಲದ ಮಾರಾಟದ ಪ್ರಮಾಣ ಶೇ.1.3ರಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಮಾರಾಟವಾದ ಅಡುಗೆ ಅನಿಲದ ಪ್ರಮಾಣಕ್ಕಿಂತ ಈ ಬಾರಿಯ ಮಾರ್ಚ್‌ನಲ್ಲಿ ಶೇ. 1.3ರಷ್ಟು ಇಳಿಮುಖವಾಗಿದೆ ಎಂದು ಅಂಕಿ-ಅಂಶಗಳು ಹೇಳಿವೆ.
ಇದನ್ನೂ ಓದಿ:ಮುಷ್ಕರ ವಿಚಾರದಲ್ಲಿ ರಾಜಕೀಯ ಬೇಡ : ವಿರೋಧ ಪಕ್ಷಗಳಿಗೆ ಡಿಸಿಎಂ ಕಿವಿಮಾತು
ತಜ್ಞರು ಏನಂತಾರೆ?
ತೈಲ ಬೇಡಿಕೆ ಹೆಚ್ಚುತ್ತಿರುವುದು ದೇಶದ ಆರ್ಥಿಕತೆ ಸರಿ ದಾರಿಗೆ ಮರಳುತ್ತಿರುವುದಕ್ಕೆ ಸಾಕ್ಷಿ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. 2019ರ ಡಿಸೆಂಬರ್ ಬಳಿಕ ಭಾರತದ ಇಂಧನ ರಂಗದಲ್ಲಿ ಇಂಥದ್ದೊಂದು ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದಾಗಿ ಕುಸಿದಿದ್ದ ಆರ್ಥಿಕತೆ ಈಗ ಏರುಗತಿಯಲ್ಲಿ ಸಾಗುತ್ತಿರುವುದಕ್ಕೆ ಇದು ಸಾಕ್ಷಿ ಒದಗಿಸಿದೆ ಎಂದು ತಜ್ಞರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.