ಅಂಗೈಯಲ್ಲಿ 2.56 ಲಕ್ಷ ಗ್ರಾ.ಪಂ. ಮಾಹಿತಿ!

ಒಂದೇ ಕಡೆ ಸಂಪೂರ್ಣ ಮಾಹಿತಿ "ಭುವನ್‌ ಪಂಚಾಯತ್‌ 3.0' ಹೆಸರಿನ ಯೋಜನೆ

Team Udayavani, Jan 29, 2020, 6:39 AM IST

SHU-31

ಇಸ್ರೋ ಕೇಂದ್ರ ಕಚೇರಿಯಲ್ಲಿ ಸಚಿವ ಡಾ| ಜಿತೇಂದ್ರ ಸಿಂಗ್‌ ಮಂಗಳವಾರ ಪೋರ್ಟಲ್‌ ಉದ್ಘಾಟಿಸಿದರು.

ಬೆಂಗಳೂರು: ದೇಶದ ಎಲ್ಲ 2.56 ಲಕ್ಷ ಗ್ರಾಮ ಪಂಚಾಯತ್‌ಗಳ ಸಮಗ್ರ ಮಾಹಿತಿ ಈಗ ಅಂಗೈಯಲ್ಲಿ ಲಭ್ಯ! ಗ್ರಾ. ಪಂ.ಗಳ ಜನಸಂಖ್ಯೆ, ಭೂಪ್ರದೇಶ, ಅದರ ಬಳಕೆ, ಆರೋಗ್ಯ, ಶಿಕ್ಷಣ, ಸಾಮಾಜಿಕ-ಆರ್ಥಿಕ ಸ್ಥಿತಿ, ಹವಾಮಾನ ಸೇರಿದಂತೆ ವಿವಿಧ ರೂಪದ ದತ್ತಾಂಶಗಳನ್ನು ಸಂಗ್ರಹಿಸಿ ಒಂದೇ ಜಿಯೊ ಪೋರ್ಟಲ್‌ನಲ್ಲಿ ಅಳವಡಿಸಲಾಗಿದೆ. ಹೀಗೆ ದೇಶದ ವಿಷಯಾಧಾರಿತ ದತ್ತಾಂಶಗಳನ್ನು ಕ್ರೋಡೀಕರಿಸಿದ್ದು ಇದೇ ಮೊದಲು. ಮುಂದಿನ ದಿನಗಳಲ್ಲಿ ಸರಕಾರ ರೂಪಿಸುವ ಯೋಜನೆಗಳಿಗೆ ಇದು ನೆರವಾಗಲಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೋ ಮತ್ತು ರಾಷ್ಟ್ರೀಯ ದೂರಸಂವೇದಿ ಕೇಂದ್ರ ಎನ್‌ಆರ್‌ಎಸ್‌ಸಿ ಸಂಯುಕ್ತವಾಗಿ ಬಾಹ್ಯಾಕಾಶ ಆಧಾರಿತ ಮಾಹಿತಿ ವಿಕೇಂದ್ರೀಕೃತ ಯೋಜನೆ (ಎಸ್‌ಐಎಸ್‌ಡಿಪಿ) ಅಡಿ ವೆಬ್‌ ಜಿಯೊ ಪೋರ್ಟಲ್‌ ಅಭಿವೃದ್ಧಿಪಡಿಸಿದ್ದು, ಇದಕ್ಕೆ “ಭುವನ್‌ ಪಂಚಾಯತ್‌ 3.0′ ಎಂದು ನಾಮಕರಣ ಮಾಡಲಾಗಿದೆ. ಇದರಲ್ಲಿ 2.56 ಲಕ್ಷ ಗ್ರಾ.ಪಂ.ಗಳ ಮಾಹಿತಿ ಸಂಗ್ರಹಿಸಲಾಗಿದೆ. 2016-17ರಲ್ಲಿ ಎಸ್‌ಐಎಸ್‌ಡಿಪಿ ಮೊದಲ ಹಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದರ ಮುಂದುವರಿದ ಭಾಗವಾಗಿ ಅದನ್ನು ಹೊಸ ರೂಪದಲ್ಲಿ ಪರಿಚಯಿಸಲಾಗಿದೆ.

ಭುವನ್‌ ಉಪಗ್ರಹದ ನೆರವಿನಿಂದ ಭೂಮಿಯ ಮೇಲ್ಮೆ„ಯಿಂದ ಕೇವಲ 2.5 ಮೀ. ದೂರದಿಂದ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿದ್ದು, ಅತ್ಯಧಿಕ ರೆಸಲ್ಯೂಷನ್‌ ಹೊಂದಿವೆ. ಚಿತ್ರಗಳಲ್ಲಿ ಭೂಬಳಕೆ ಮತ್ತು ವ್ಯಾಪ್ತಿ, ರಸ್ತೆ ಮತ್ತು ರೈಲು ಜಾಲ, ಒಳಚರಂಡಿ ಜಾಲ, ಸಾಮುದಾಯಿಕ ಆಸ್ತಿಗಳೆಲ್ಲವೂ ಇವೆ. 2011ರ ಜನಗಣತಿಗೆ ಹೋಲಿಕೆ ಮಾಡಿ ದತ್ತಾಂಶಗಳನ್ನು ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ.

ನವ ಭಾರತಕ್ಕೆ ನೂತನ ಸಾಧನ
ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಪೋರ್ಟಲ್‌ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ಪ್ರಧಾನಿ ಮೋದಿ ಅವರ ಕನಸಿನ ಭಾರತ ನಿರ್ಮಾಣಕ್ಕೆ ದೇಶದ ಬಾಹ್ಯಾಕಾಶ ತಂತ್ರಜ್ಞಾನವು ಪೂರಕ ಮತ್ತು ಅತ್ಯಗತ್ಯ ಸಾಧನ ಎಂದು ವಿಶ್ಲೇಷಿಸಿದರು.

ವಿಜ್ಞಾನಿಗಳು ದಶಕಗಳಿಂದ ಇದಕ್ಕೆ ಸಮಯ ವ್ಯಯಿಸಿದ್ದಾರೆ. ವಿಕ್ರಂ ಸಾರಾಭಾಯ್‌ ಹೇಳಿದಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಇಂದು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ಖಗೋಳ ವಿಜ್ಞಾನ “ಭಾರತೀಯ’ವಾಗಿದೆ ಎಂದು ಬಣ್ಣಿಸಿದರು.

ಇಸ್ರೋ ಅಧ್ಯಕ್ಷ ಕೆ. ಶಿವನ್‌ ಮಾತನಾಡಿ, ಸಂಸ್ಥೆಯು ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದೆ. ಈಗ ಲಭ್ಯವಿರುವ ಮಾಹಿತಿಗಳು ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ ಎಂದರು.

ಟಾಪ್ ನ್ಯೂಸ್

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.