Gandhi Jayanti: ಉಡುಪಿಯವರನ್ನು ತಾಜಾ ಬನಿಯಾ ಎಂದಿದ್ದ ಗಾಂಧೀಜಿ!

ಇದು ಉಡುಪಿಯ ಮರ್ಯಾದೆ ಪ್ರಶ್ನೆ. ಎಲ್ಲರೂ ಬಿಡ್‌ ನಲ್ಲಿ ಭಾಗವಹಿಸಬೇಕು...

Team Udayavani, Oct 2, 2024, 12:59 PM IST

Gandhi Jayanti: ಉಡುಪಿಯವರನ್ನು ತಾಜಾ ಬನಿಯಾ ಎಂದಿದ್ದ ಗಾಂಧೀಜಿ!

ಉಡುಪಿ: ಗಾಂಧೀಜಿಯವರು 1920, 1927, 1934ರಲ್ಲಿ ದ.ಕ. ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿದ್ದರೂ ಉಡುಪಿ, ಬ್ರಹ್ಮಾವರ, ಕುಂದಾಪುರಕ್ಕೆ ಭೇಟಿ ಕೊಟ್ಟದ್ದು ಒಂದೇ ಬಾರಿ. ಅದು 1934ರ ಫೆಬ್ರವರಿ 25ರಂದು. ಫೆ. 24ರಂದು ಮಡಿಕೇರಿ ಮೂಲಕ ಸಂಪಾಜೆಗೆ ಬಂದು ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರಿನಲ್ಲಿ ತಂಗಿದರು. ಫೆ. 25ರಂದು ಮೂಲ್ಕಿ, ಉಡುಪಿ, ಬ್ರಹ್ಮಾವರ,
ಕುಂದಾಪುರದಲ್ಲಿ ಪ್ರವಾಸ ನಡೆಸಿದರು.

ಉದ್ಯಾವರದ ಹೊಳೆಯನ್ನು ದೋಣಿ ಮೂಲಕ ದಾಟಿ ಉಡುಪಿಗೆ ಬಂದ ಗಾಂಧೀಜಿಯವರು ಅಜ್ಜರಕಾಡಿನ ಮೈದಾನದಲ್ಲಿ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬ್‌. ಅಸ್ಪೃಶ್ಯತಾ ನಿವಾರಣೆಗಾಗಿಯೇ ಈ ಪ್ರವಾಸವನ್ನು ಗಾಂಧೀಜಿ ಕೈಗೊಂಡಿದ್ದರಿಂದ ವಿವಿಧೆಡೆಗಳಲ್ಲಿ ದಲಿತೋದ್ಧಾರಕ್ಕಾಗಿ ಹಣ ಸಂಗ್ರಹಿಸಿದ್ದರು. ಇದರಲ್ಲಿ ಚಿನ್ನ ಸಂಗ್ರಹವೂ ಇತ್ತು. ಉಡುಪಿಯಲ್ಲಿ ನಡೆದ ಸಭೆಯಲ್ಲಿ ಪಾಂಗಾಳ ನಾಯಕ್‌ ಕುಟುಂಬದ ನಿರುಪಮಾ ನಾಯಕ್‌ ಅವರೂ ಚಿನ್ನದ ಆಭರಣವನ್ನು ಸಮರ್ಪಿಸಿದ್ದರು.

ದೇಣಿಗೆ ಮೊತ್ತವನ್ನು ಏರಿಸುವುದಕ್ಕಾಗಿ ಏಲಂ ಹಾಕಿದಾಗ ಗಾಂಧೀಜಿಯವರು ಉಡುಪಿಯವರನ್ನು “ತಾಜಾ ಬನಿಯರು’
ಎಂದು ಹಾಸ್ಯ ಚಟಾಕಿ ಹಾರಿಸಿದರು. ಆ ಸನ್ನಿವೇಶ ಹೀಗಿತ್ತು: ಗಾಂಧೀಜಿಯವರು ಬಂದ ಚಿನ್ನಾಭರಣ ಉಡುಗೊರೆ ಗಳನ್ನು ಏಲಂ ಹಾಕಿದರು. ಗಾಂಧೀಜಿಯವರೇ ಸ್ವತಃ ಕರೆದರೂ ಏಲಂಗೆ ನಿರೀಕ್ಷಿತ ಲಾಭ ಆಗಲಿಲ್ಲ.

“ನಾನೇ ಕರೆದರೂ ಇಷ್ಟೇನಾ ಪ್ರತಿಕ್ರಿಯೆ’ ಎಂದು ಗಾಂಧೀಜಿ ಹೇಳಿದಾಗ ದಿ|ಡಾ| ಎಂ.ವಿ. ಕಾಮತ್‌ ಅವರ ತಂದೆ ವಿಟಲ ಕಾಮತ್‌ ಅವರು ಮುಂದೆ ನಿಂತು “ಇದು ಉಡುಪಿಯ ಮರ್ಯಾದೆ ಪ್ರಶ್ನೆ. ಎಲ್ಲರೂ ಬಿಡ್‌ ನಲ್ಲಿ ಭಾಗವಹಿಸಬೇಕು’ ಎಂದು ಹೇಳಿ ವಾರ್‌ ಕರೆದರು. ಆಗ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಬೆಲೆಗೆ ಏಲಂ ಆಯಿತು. ಆಗ ಗಾಂಧೀಜಿಯವರು “”I thought I am a good baniya. But you are a better baniya than I am'(“ನಾನೇ ಉತ್ತಮ ಬನಿಯಾ ಎಂದು ತಿಳಿದುಕೊಂಡಿದ್ದೆ. ನನಗಿಂತಲೂ ನೀವು ತಾಜಾ ಬನಿಯಾ’) ಎಂದು ವಿಟಲ ಕಾಮತ್‌ರನ್ನುದ್ದೇಶಿಸಿ ಹೇಳಿದರು.

“ಇದು ಗಾಂಧೀಜಿ ಕೊಟ್ಟ ದೊಡ್ಡ ಬಿರುದು ಎಂದು ನನ್ನ ತಂದೆ ಹೇಳುತ್ತಿದ್ದರು’ ಎಂದು ಡಾ|ಎಂ.ವಿ.ಕಾಮತ್‌ ನೆನಪಿಸಿಕೊಳ್ಳುತ್ತಿದ್ದರು. ಈ ಮಾತನ್ನು ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್‌ ರಾವ್‌ ಅವರಲ್ಲಿ ಡಾ|ಎಂ.ವಿ.ಕಾಮತ್‌ ನೆನಪಿಸಿಕೊಂಡಿದ್ದರು. ಉಡುಪಿಯಲ್ಲಿ ಸಂಗ್ರಹವಾದ ಮೊತ್ತ 1,240 ರೂ. ಇದರಲ್ಲಿ ಪಡುಬಿದ್ರಿ, ಕಾಪು, ಕಟಪಾಡಿ, ಉದ್ಯಾವರದಿಂದ ಸಂಗ್ರಹವಾದ ಮೊತ್ತವೂ ಸೇರಿದೆ.

ಉಡುಪಿಯ ಬಳಿಕ ಕಲ್ಯಾಣಪುರ, ಬ್ರಹ್ಮಾವರಕ್ಕೆ ಸಂಜೆ 5 ಗಂಟೆಗೆ ಗಾಂಧೀಜಿಯವರು ತೆರಳಿ ಭಾಷಣ ಮಾಡಿದರು. ಇಲ್ಲಿ 239 ರೂ. ಸಂಗ್ರಹವಾಯಿತು. ರಾತ್ರಿ 8 ಗಂಟೆಗೆ ಕುಂದಾಪುರಕ್ಕೆ ತೆರಳಿ ಅಲ್ಲಿ ಭಾಷಣ ಮಾಡಿದರು. ಕುಂದಾಪುರದಲ್ಲಿ 1,143 ರೂ.
ಸಂಗ್ರಹವಾಯಿತು. ರಾತ್ರಿ ಅಲ್ಲಿ ವಾಸ್ತವ್ಯವಿದ್ದು ಫೆ. 26ರಂದು ಸೋಮವಾರ ಮೌನವ್ರತ ಆಚರಿಸಿ ಫೆ. 27ರಂದು ದಯಾವತಿ ಹಡಗಿನ ಮೂಲಕ ಕಾರವಾರಕ್ಕೆ ತೆರಳಿ ತಮ್ಮ ಪ್ರವಾಸವನ್ನು ಮುಂದುವರಿಸಿದರು.

ಗಾಂಧೀಜಿ ಪ್ರತಿಮೆ ಅನಾವರಣ


2000ನೇ ಅ. 2 ಗಾಂಧೀ ಜಯಂತಿಯಂದು ಅಜ್ಜರಕಾಡಿನಲ್ಲಿ ಗಾಂಧೀಜಿಯವರ ಶಿಲಾ ಪ್ರತಿಮೆಯನ್ನು ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಆನಾವರಣಗೊಳಿಸಿದ್ದರು. ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಡಿ.ಟಿ.ಪೈ, ಸಂಸದರಾಗಿದ್ದ ವಿನಯಕುಮಾರ ಸೊರಕೆ, ಶಾಸಕರಾಗಿದ್ದ ಯು.ಆರ್‌. ಸಭಾಪತಿ, ವಿಧಾನ ಪರಿಷತ್‌ ಸದಸ್ಯರಾಗಿದ್ದ ಡಾ|ವಿ.
ಎಸ್‌.ಆಚಾರ್ಯ, ಜಿಲ್ಲಾಧಿಕಾರಿ ಗೌರವ ಗುಪ್ತ, ಉದ್ಯಮಿ ಕೆ.ಸತೀಶ್ಚಂದ್ರ ಹೆಗ್ಡೆ, ಡಾ|ಮುರಾರಿ ಬಲ್ಲಾಳ್‌, ನಗರಸಭಾಧ್ಯಕ್ಷೆಯಾಗಿದ್ದ ಆನಂದಿ, ಉಪಾಧ್ಯಕ್ಷರಾಗಿದ್ದ ರೆನೋಲ್ಡ್‌ ಪ್ರವೀಣ್‌ಕುಮಾರ್‌, ಪೌರಾಯುಕ್ತ ಡಿ.ಬಸಪ್ಪ
ಮೊದಲಾದವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.