Arms License Case: ಗ್ಯಾಂಗ್ ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ
ಐವರ ವಿರುದ್ಧ ಗಾಜಿಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
Team Udayavani, Mar 13, 2024, 5:47 PM IST
ನವದೆಹಲಿ: 1990ರಲ್ಲಿ ನಕಲಿ ದಾಖಲೆ ಬಳಸಿಕೊಂಡು ಶಸ್ತ್ರಾಸ್ತ್ರ ಪರವಾನಗಿ ಪಡೆದ ಆರೋಪದಲ್ಲಿ ಗ್ಯಾಂಗ್ ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ವಾರಣಾಸಿಯ ಎಂಪಿ/ಎಂಎಲ್ ಎ ಕೋರ್ಟ್ ಬುಧವಾರ (ಮಾರ್ಚ್ 13) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ:Politics: ಪ್ರಧಾನಿ ಅಧಿಕಾರಕ್ಕಾಗಿ ಏನಾದರೂ ಮಾಡುತ್ತಾರೆ; ಸಚಿವ ಭೋಸರಾಜು ವಾಗ್ದಾಳಿ
ಜೈಲಿನಲ್ಲಿರುವ ಮಾಫಿಯಾ ಡಾನ್ ಅನ್ಸಾರಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 30 ಹಾಗೂ ಐಪಿಸಿ 428, 467, 468 ಮತ್ತು 120 ಬಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಬಂಡಾ ಜೈಲಿನಲ್ಲಿದ್ದ ಅನ್ಸಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಯನ್ನು ವೀಕ್ಷಿಸಿರುವುದಾಗಿ ವರದಿ ತಿಳಿಸಿದೆ.
ಜೂನ್ 1987ರಲ್ಲಿ ಅನ್ಸಾರಿ ಡಬಲ್ ಬ್ಯಾರೆಲ್ ಗನ್ ಪರವಾನಿಗಿಗಾಗಿ ಆಗಿನ ಗಾಜಿಪಿರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರ ನಕಲಿ ಸಹಿ ಬಳಸಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲಾಗಿತ್ತು ಎಂದು ವರದಿ ವಿವರಿಸಿದೆ.
1990ರಲ್ಲಿ ಸಿಬಿ-ಸಿಐಡಿ ಅನ್ಸಾರಿಯ ಕಳ್ಳಾಟವನ್ನು ಬಯಲುಗೊಳಿಸಿ, ಪೊಲೀಸರಿಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಮುಖ್ತಾರ್ ಅನ್ಸಾರಿ ಸೇರಿದಂತೆ ಐವರ ವಿರುದ್ಧ ಗಾಜಿಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.