ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ತನ್ವಿತ್‌ಗೆ ಬಾಲ್ಯ ದಿಂದಲೂ ಏನಾದರೂ ಸಾಧಿಸಬೇಕೆಂಬ ಛಲ.

Team Udayavani, Oct 2, 2024, 1:40 PM IST

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಬಂಟ್ವಾಳ: ಹುಲಿ ವೇಷದ ತಾಸೆಯ ಪೆಟ್ಟು ಕೇಳಿದರೆ ಸಾಕು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒಂದೆರಡು ಸ್ಟೆಪ್‌ ಹಾಕಬೇಕು ಎಂಬಷ್ಟು ನಮ್ಮಲ್ಲಿ ಹುಚ್ಚು ಹಿಡಿಸುತ್ತದೆ. ನವರಾತ್ರಿ ಸಂದರ್ಭ ಸಾಕಷ್ಟು ಹುಲಿ ತಂಡಗಳು ಪ್ರದರ್ಶನ ನೀಡುತ್ತವೆ. ಇದಕ್ಕೆ ಅನುಭವಿಗಳೇ ಸಾರಥಿಗಳು. ಆದರೆ ಪೊಳಲಿಯಲ್ಲಿ 17 ವರ್ಷದ ಬಾಲಕನೋರ್ವ ಸ್ನೇಹಿತರನ್ನು ಕೂಡಿಕೊಂಡು ಹುಲಿವೇಷ ತಂಡ ಕಟ್ಟಿದ್ದಾನೆ. ಅದರ 2ನೇ ವರ್ಷದ ತಿರುಗಾಟಕ್ಕೆ ಈಗ ವೇದಿಕೆ ಅಣಿಯಾಗಿದೆ!

ಪೊಳಲಿಯ ಗೋಪಾಲ ದೇವಾಡಿಗ ಅವರ ಪುತ್ರ ತನ್ವಿತ್‌ ಅವರು ಗರುಡ ಫ್ರೆಂಡ್ಸ್‌ ಪೊಳಲಿ ಎಂಬ ಹೆಸರಿನಲ್ಲಿ ಹುಲಿ ತಂಡವನ್ನು
ಮುನ್ನಡೆಸುತ್ತಿದ್ದಾನೆ. ಕಳೆದ ವರ್ಷ 2 ದಿನಗಳ ಯಶಸ್ವಿ ಹುಲಿ ಕುಣಿತ ನಡೆದಿದ್ದು, ಈ ಬಾರಿಯೂ ಅ. 10 ಹಾಗೂ 11ರಂದು ತಮ್ಮ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಪೊಳಲಿ ದೇವಾಲಯದಲ್ಲಿ ಪ್ರಾರ್ಥಿಸಿ ಅ. 9ರಂದು ರಾತ್ರಿ ಊದು ಪೂಜೆ ನಡೆದು 11ರ ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದಾರೆ.

ಈ ಬಾರಿ ಡಬಲ್‌ ಹುಲಿಗಳು.!
ಕಳೆದ ವರ್ಷ ಸುಮಾರು 15 ಮಂದಿ ಹುಲಿ ವೇಷ ಹಾಕಿದ್ದು, ತನ್ವಿತ್‌ನ ತಮ್ಮ ಮನ್ವಿತ್‌ ಸೇರಿ ಇಬ್ಬರು ಪಲ್ಟಿ ಹೊಡೆಯುವ ಸಾಹಸಿಗಳಿದ್ದರು. ಆದರೆ ಈ ಬಾರಿ 30 ಮಂದಿ ಹುಲಿ ವೇಷಧಾರಿಗಳಿದ್ದು, 10 ಮಂದಿ ಪಲ್ಟಿ ಹೊಡೆಯುವವರಿದ್ದಾರೆ! ಈಗಾಗಲೇ
ಮೂರು ರವಿವಾರಗಳಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿ ಮುಂದೆ ನವರಾತ್ರಿ ಎರಡು ದಿನಗಳಲ್ಲಿ ಸುಮಾರು 100 ಮನೆಗಳನ್ನು
ಸಂಪರ್ಕಿಸುವ ಟಾರ್ಗೆಟ್‌ ಹೊಂದಿದ್ದಾರೆ.

ಹುಲಿಗಳ ತಲೆ ತಯಾರಿಸುವ ತನ್ವಿತ್‌
ಸಾಮಾನ್ಯವಾಗಿ ಹುಲಿ ತಂಡದವರು ಹುಲಿಯ ತಲೆಯನ್ನು ಬಾಡಿಗೆಗೆ ಪಡೆದು ಪ್ರದರ್ಶನ ನೀಡುತ್ತಾರೆ. ಇದಕ್ಕೆ 15 ಸಾವಿರದಷ್ಟು
ಬಾಡಿಗೆ ಇರುತ್ತದೆ. ಈ ಮಕ್ಕಳ ಟೀಮ್‌ನಲ್ಲಿ ಅಷ್ಟು ಹಣವಿಲ್ಲದೆ ಇರುವುದರಿಂದ ತನ್ವಿತ್‌ ತಾನೇ ತಲೆಗಳನ್ನು ತಯಾರಿಸಿದ್ದಾನೆ. ಒಂದು ತಲೆ ಸಿದ್ಧಗೊಳ್ಳಬೇಕಾದರೆ ಮೂರ್ನಾಲ್ಕು ದಿನಗಳ ಕೆಲಸವಿದೆ.ಈಗಾಗಲೇ ಬೇಕಾದಷ್ಟು ಹುಲಿಗಳ ತಲೆಗಳು ಸಿದ್ಧಗೊಂಡಿವೆ!

ಜಾತ್ರೆಯ ಸಂತೆ ಆದಾಯ ಹುಲಿ ವೇಷ ಕುಣಿತಕ್ಕೆ ಬಳಕೆ
ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ತನ್ವಿತ್‌ಗೆ ಬಾಲ್ಯ ದಿಂದಲೂ ಏನಾದರೂ ಸಾಧಿಸಬೇಕೆಂಬ ಛಲ. ಹಲವು ವರ್ಷಗಳಿಂದ ಪೊಳಲಿ ಜಾತ್ರೆಯ ಸಂದರ್ಭ ಅಂಗಡಿ ಹಾಕಿ ಒಂದಷ್ಟು ಹಣ ಸಂಪಾದಿಸುತ್ತಿದ್ದ. ಜತೆಗೆ ಕೃಷಿಕ ರಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಈ ಸಂಪಾದನೆಯ ಹಣವನ್ನು ಹುಲಿ ಕುಣಿತಕ್ಕೆ ಬಳಸಿದ್ದಾನೆ. 2022ರಲ್ಲಿ ಕರಡಿ ತಂಡ ಕಟ್ಟಿದ್ದ ತನ್ವಿತ್‌. ಕಳೆದ ಪೊಳಲಿ ಜಾತ್ರೆಯಲ್ಲಿ ಅಂಗಡಿ ಹಾಕಿ ಅದರಲ್ಲಿ ಬಂದ ಸುಮಾರು 20 ಸಾವಿರ ರೂ. ಆದಾಯವನ್ನು ಬಳಸಿಕೊಂಡು ಮೊದಲ ವರ್ಷ ಹುಲಿ ತಂಡದ ಪ್ರದರ್ಶನ ನೀಡಿದ್ದ. ಕಳೆದ ವರ್ಷ ಒಟ್ಟು 1.50 ಲಕ್ಷ ರೂ. ನಷ್ಟು ಖರ್ಚಾಗಿದ್ದು, ಸಂಪಾದನೆ ಬರೀ 1.40 ಲಕ್ಷ ರೂ. ಅಂದರೆ ಸುಮಾರು 10 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿತ್ತು. ಆದರೂ ಈ ಬಾರಿ ಮತ್ತೆ ಸಾಹಸಕ್ಕೆ ಕೈ ಹಾಕಿದ್ದಾರೆ.

ಈ ಬಾರಿಸುಮಾರು 100 ಮನೆಗೆ ಹೋಗುತ್ತೇವೆ
ಸುಮಾರು 30 ಮಂದಿ ಹುಲಿ ವೇಷಧಾರಿಗಳ ತಂಡ ಈ ಬಾರಿ 2 ದಿನಗಳ ಹುಲಿ ಕುಣಿತ ಪ್ರದರ್ಶನ ನೀಡಲಿದ್ದು, ಈಗಾಗಲೇ ಪ್ರಾಕ್ಟಿಸ್‌ ಪೂರ್ತಿಗೊಳಿಸಿದ್ದೇವೆ. ಪೊಳಲಿ ಸುತ್ತಮುತ್ತಲ ಸುಮಾರು 100 ಮನೆಗಳಿಗೆ ಭೇಟಿ ನೀಡಿ ಅ. 11ರಂದು ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದೇವೆ. ಇದು 2ನೇ ವರ್ಷದ ಹುಲಿ ಹುಣಿತವಾಗಿದ್ದು, 2022ರಲ್ಲಿ ಕರಡಿ ವೇಷದ ತಂಡವನ್ನು ಇಳಿಸಿದ್ದೆ.
* ತನ್ವಿತ್‌, ಗರುಡ ಫ್ರೆಂಡ್ಸ್‌ ಹುಲಿ ತಂಡದ ಮುಖ್ಯಸ್ಥ

*ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.