ಗಿರೀಶ್ ಕಾರ್ನಾಡ್ ಇನ್ನಿಲ್ಲ : ವಿಧಿವಿಧಾನ ಇಲ್ಲದೆ ಸರಳ ಅಂತ್ಯಕ್ರಿಯೆ
Team Udayavani, Jun 11, 2019, 6:00 AM IST
ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ, ಮೇರು ರಂಗಕರ್ಮಿ, ಚಿತ್ರ ನಿರ್ದೇಶಕ ಗಿರೀಶ್ ಕಾರ್ನಾಡ್ (81) ಅವರನ್ನು ನಾಡು ಕಳಕೊಂಡಿದೆ. ಬಹುದಿನಗಳ ಅನಾರೋಗ್ಯವು ಸೋಮವಾರ ಬೆಳಗ್ಗೆ 8 ಗಂಟೆಗೆ ಅವರ ಉಸಿರನ್ನು ಸ್ತಬ್ಧವಾಗಿಸಿತು.
ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸುತ್ತಾ, ಕನ್ನಡದ ಕಲಾಶಕ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹಬ್ಬಿಸಿದ್ದ ಕಾರ್ನಾಡ್, ಸಿನೆಮಾ ರಂಗದಲ್ಲೂ ವಿಶೇಷ ಛಾಪು ಮೂಡಿಸಿದ್ದರು. ಪತ್ನಿ ಡಾ| ಸರಸ್ವತಿ ಗಣಪತಿ, ಪುತ್ರಿ ಶಾಲ್ಮಲೀ ಮತ್ತು ಪುತ್ರ ರಘು ಕಾರ್ನಾಡ್ ಸಹಿತ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಕಾರ್ನಾಡ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನ ಲ್ಯಾವೆಲ್ಲೇ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಜನರು, ಗಣ್ಯರು ದೌಡಾಯಿಸಿದರು.
ಆದರೆ ಕಾರ್ನಾಡ್ ನಿವಾಸದಲ್ಲಿ ಆಯ್ದ ಆಪ್ತರಿಗೆ ಮತ್ತು ಸಾಹಿತ್ಯ ಲೋಕದ ಹಿರಿಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಕವಿ ಕೆ.ಎಸ್. ನಿಸಾರ್ ಅಹಮದ್, ವಿಮರ್ಶಕ ರಾಮಚಂದ್ರ ಗುಹಾ, ಕವಿ ಮತ್ತು ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ ಸಹಿತ ಕೆಲವು ಗಣ್ಯರು ಅಂತಿಮ ದರ್ಶನ ಪಡೆದರು.
ಅಪರಾಹ್ನ ಬೈಯಪ್ಪನಹಳ್ಳಿ ಸಮೀಪದ ಕಲ್ಪಹಳ್ಳಿಯ ಚಿತಾಗಾರದಲ್ಲಿ ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ, ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ಹಿರಿಯ ಚಿತ್ರ ಕಲಾವಿದ ಸುರೇಶ್ ಹೆಬ್ಳೀಕರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಅಪರಾಹ್ನ 2.30ರ ವೇಳೆ ಸರಳ ರೀತಿಯಲ್ಲಿ, ವಿದ್ಯುತ್ ಚಿತಾಗಾರದಲ್ಲಿ ಕಾರ್ನಾಡ್ ಅವರ ಪಾರ್ಥಿವ ಶರೀರದ ವಿಲೀನವಾಯಿತು.
ಕಾರ್ನಾಡ್ ಮನವಿಗೆ ಸ್ಪಂದಿಸಿದ ಕುಟುಂಬ
ಅನಾರೋಗ್ಯದಿಂದ ಬಳಲುತ್ತಿದ್ದಾಗಲೇ ಗಿರೀಶ್ ಕಾರ್ನಾಡ್ ತಾನು ಸಾವಿಗೀಡಾದ ಬಳಿಕ ಯಾವುದೇ ಧರ್ಮದ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಮಾಡ ದಂತೆ, ಪಾರ್ಥಿವ ಶರೀರಕ್ಕೆ ಹೂಗುತ್ಛ ಹಾಕದಂತೆ ಮತ್ತು ಪಾರ್ಥಿವ ಶರೀರದ ಮೆರವಣಿಗೆ ಮಾಡದಂತೆ ಕುಟುಂಬದವರಲ್ಲಿ ಮನವಿ ಮಾಡಿದ್ದರು.
ಮನವೊಲಿಸಲು ಮುಂದಾದ ಸಚಿವರು
ಕಲ್ಪಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾರ್ನಾಡ್‌ರಿಗೆ ಸರಕಾರದ ವತಿಯಿಂದ ಸಕಲ ಗೌರವ ನೀಡುವ ಸಂಬಂಧ ಕುಟುಂಬಸ್ಥರ ಮನವೊಲಿಕೆಗೆ ಮುಂದಾದರು. ಆದರೆ ಅವರ ಕುಟುಂಬದವರು ಇದಕ್ಕೆ ನಿರಾಕರಿಸಿದರು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ “ಉದಯವಾಣಿ’ಗೆ ತಿಳಿಸಿದರು.
ನುಡಿದಂತೆ ನಡೆದ ವ್ಯಕ್ತಿ
ಗಿರೀಶ್ ಕಾರ್ನಾಡ್‌ರ ನಿವಾಸದ ಮುಂದೆ ಮತ್ತು ಕಲ್ಪಹಳ್ಳಿ ಚಿತಾಗಾರದಲ್ಲಿ ಅವರ ನಾಟಕ ಸಾಹಿತ್ಯದ ಗುಣಗಾನ ನಡೆದಿತ್ತು. ತಮಗೆ ತಪ್ಪು ಎಂದು ಅನಿಸಿದ್ದನ್ನು ನೇರವಾಗಿ ಪ್ರತಿಭಟಿಸುವ ಗುಣ ಅವರದ್ದಾಗಿತ್ತು. ಹಲವಾರು ರೀತಿಯ ವಿರೋಧದ ನಡುವೆಯೂ ಕಾರ್ನಾಡ್‌ರು ನುಡಿದಂತೆ ನಡೆದರು ಎಂದು ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಕಾರ್ನಾಡ್‌ರ ವ್ಯಕ್ತಿತ್ವವನ್ನು ಸ್ಮರಿಸಿದರು.
ಲೇಖಕ, ನಟ ಹಾಗೂ ಭಾರತೀಯ ರಂಗಕಲೆಯ ಮೇರು ವ್ಯಕ್ತಿತ್ವ ಗಿರೀಶ್ ಕಾರ್ನಾಡ್ ನಿಧನದ ಸುದ್ದಿ ಕೇಳಿ ದುಃಖವಾಯಿತು. ಇವರ ಅಗಲಿಕೆಯಿಂದ ನಮ್ಮ ಸಾಂಸ್ಕೃತಿಕ ಲೋಕ ಬಡವಾಗಿದೆ. ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.
– ರಾಮನಾಥ ಕೋವಿಂದ್, ರಾಷ್ಟ್ರಪತಿ
ಗಿರೀಶ್ ಕಾರ್ನಾಡ್ ತಮ್ಮ ನಟನೆಯಿಂದ ಜನಮಾನಸದಲ್ಲಿ ಎಂದಿಗೂ ನೆಲೆಸಿರುತ್ತಾರೆ. ಅವರು ಕೆಲವು ವಿಚಾರಗಳ ಬಗ್ಗೆ ಅತ್ಯಂತ ಆಸ್ಥೆಯಿಂದ ಮಾತನಾಡುತ್ತಿದ್ದರು. ಅವರ ಕೃತಿಗಳು ಎಂದಿಗೂ ಜನರಿಗೆ ನೆನಪಿನಲ್ಲಿರುತ್ತವೆ. ಅವರ ನಿಧನ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. -ನರೇಂದ್ರ ಮೋದಿ, ಪ್ರಧಾನಿ
ಸರಕಾರಿ ಗೌರವ, ಮಂತ್ರ -ಅಂತಿಮ ವಿಧಿವಿಧಾನವಿಲ್ಲದೇ ದಹನ ಕ್ರಿಯೆ ನಡೆಯಬೇಕು ಎಂಬುದು ಗಿರೀಶ್ ಕಾರ್ನಾಡ್ ಅವರ ಇಚ್ಛೆಯಾಗಿತ್ತಂತೆ. ಗಿರೀಶ್ ಕಾರ್ನಾಡ್ ಅವರಲ್ಲಿ ನಾನು ಮೆಚ್ಚುತ್ತಿದ್ದ ಗುಣವೆಂದರೆ ಅವರಲ್ಲಿ ಹಿಪೋಕ್ರಸಿ ಇರಲಿಲ್ಲ, ಈ ಗುಣವನ್ನು ಮೆಚ್ಚಲೇಬೇಕು. ಅವರದ್ದು ದೊಡ್ಡ ವ್ಯಕ್ತಿತ್ವ. -ಎಸ್.ಎಲ್. ಭೈರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.