ಜೀವನ ಶಿಕ್ಷಣದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ: ಸಂಗೀತ ನಿರ್ದೇಶಕ ವಿ.ಮನೋಹರ್‌

ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ಆಯೋಜನೆ, ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

Team Udayavani, Jan 29, 2025, 3:21 AM IST

SDM-Anche

ಬೆಳ್ತಂಗಡಿ: ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕಾರ, ವಿನಯ, ಕಲಿಕೆಯ ಆಸಕ್ತಿ ಬೆಳೆಸಿ ಧನಾತ್ಮಕ ವಿಚಾರಗಳನ್ನು ಧಾರೆಯೆರೆಯುವ ಶಿಕ್ಷಕರನ್ನು ಸಿದ್ಧಪಡಿಸುವುದು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲಾಗುತ್ತಿರುವುದು ಈ ನಾಡಿನ ಸೌಭಾಗ್ಯ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ್‌ ಅಭಿಪ್ರಾಯಪಟ್ಟರು.

ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌, ಶ್ರೀ ಕ್ಷೇತ್ರ ಧರ್ಮಸ್ಥಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಆಯೋಜಿಸಿದ ಜ್ಞಾನದರ್ಶಿನಿ ಹಾಗೂ ಜ್ಞಾನವರ್ಷಿಣಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ರಾಜ್ಯಮಟ್ಟದ ವಿವಿಧ ಸ್ಪರ್ಧೆ ವಿಜೇತರಿಗೆ ಜ. 28ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಕಷ್ಟದ ಬದುಕಿನ ಜತೆಗೆ ಸಂಸ್ಕಾರಯುತ ಜೀವನ ಶಿಕ್ಷಣ ಮಕ್ಕಳಿಗೆ ಬಾಲ್ಯದಿಂದಲೇ ನೀಡಬೇಕು. ಸಂಸ್ಕಾರ ಮಕ್ಕಳನ್ನು ವಿನಯವಂತರನ್ನಾಗಿಸಿದರೆ, ಅಹಂಕಾರ ಮತ್ತು ಅಸೂಯೆ ವಿನಾಶಕ್ಕೆ ಕಾರಣವಾಗುತ್ತದೆ. ಈ ನಡುವೆ ಧರ್ಮಸ್ಥಳದ ಆದರ್ಶ ಚಿಂತನೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಕೆಯಾಗಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪಂಚತಂತ್ರದೊಂದಿಗೆ ನೈತಿಕ ವಿಚಾರಗಳಿರುವ ಕಥೆಗಳ ಮೂಲಕ ಲೇಖನವನ್ನು ಶಾಲಾ ಮಕ್ಕಳಿಗೆ ಕೊಡಮಾಡುವುದು ಸ್ಪರ್ಧೆಯ ಉದ್ದೇಶವಾಗಿದೆ. ಮಕ್ಕಳು ದುಃಶ್ಚಟದಿಂದ ಜೀವನ ಹಾಳು ಮಾಡದಂತೆ ಸಂಸ್ಕಾರ ರಕ್ಷಿಸುತ್ತದೆ ಎಂದರು.
ಡಾ| ಹೇಮಾವತಿ ವೀ.ಹೆಗ್ಗಡೆ, ಸುಪ್ರಿಯಾ ಹಷೇìಂದ್ರ ಕುಮಾರ್‌ ಉಪಸ್ಥಿತರಿದ್ದರು.

ಮಕ್ಕಳು ಮಾನವ ಸಂಪನ್ಮೂಲಗಳಾಗಬೇಕು: ವೀರೇಶಾನಂದ ಸರಸ್ವತೀ ಸ್ವಾಮೀಜಿ
ತುಮಕೂರು ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಈ ಸಮಾರಂಭವು ಯಾವುದೇ ವಿ.ವಿ. ಘಟಿಕೋತ್ಸವಕ್ಕಿಂತ ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಡಾ| ಹೆಗ್ಗಡೆಯವರ ಉನ್ನತ ಉದಾತ್ತ ಚಿಂತನೆಯ ಪ್ರಯತ್ನದಿಂದ ವಿದ್ಯಾರ್ಥಿ ಸಮಾಜಕ್ಕೆ ಜ್ಞಾನದ ಪರಿಮಳವನ್ನು ಪಸರಿಸುತ್ತಿದ್ದಾರೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳಷ್ಟೇ ಆದರೆ ಸಾಲದು, ಮಾನವ ಸಂಪನ್ಮೂಲಗಳಾಗಬೇಕು. ಇದರ ಸವಾಲು ಪೋಷಕರು, ಶಿಕ್ಷಕರು, ಸಾಮಾಜಿಕ, ಧಾರ್ಮಿಕ ಸಂಸ್ಥೆಗಳ ಮೇಲೆಯಿದೆ. ಪುಟ್ಟ ಮಕ್ಕಳಲ್ಲಿ ಮಾನವೀಯತೆಯ, ಮೌಲ್ಯಯುತ ವಿಚಾರವನ್ನು ತುಂಬಿಸಬೇಕಾದ ಜವಾಬ್ದಾರಿಯಿದೆ ಎಂದು ನುಡಿದರು.

ಸ್ಪರ್ಧಾ ವಿಜೇತ ವಿರ್ದಾರ್ಥಿಗಳ ಪುರಸ್ಕಾರ ಪಟ್ಟಿಯನ್ನು ಯೋಗ ಸಂಘಟಕ ಅಶೋಕ ಪೂಜಾರಿ ವಾಚಿಸಿದರು. ಯೋಗ ನಿರ್ದೇಶಕ ಡಾ| ಶಶಿಕಾಂತ್‌ ಜೈನ್‌ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್‌ ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ ವಂದಿಸಿದರು. ಪಡುಬಿದ್ರೆ ಶಿಕ್ಷಕ ರಾಘವೇಂದ್ರ ರಾವ್‌ ನಿರೂಪಿಸಿದರು.

ಟಾಪ್ ನ್ಯೂಸ್

1-weewqe

1ರಿಂದ 5ನೇ ತರಗತಿ ಮಕ್ಕಳ ಕಲಿಕೆ ಬಲವರ್ಧನೆಗೆ ‘ಹಬ್ಬ’

K-Sudhakar

Chikkaballapura: ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್‌

R.Ashok1

ರಾಜ್ಯದಲ್ಲಿ ದಿನಕ್ಕೊಂದು ಮಾನಭಂಗ, ಅತ್ಯಾಚಾರ ಕೇಸ್‌: ಆರ್‌.ಅಶೋಕ್‌

DK-Suresh

Union Budget: ಬಜೆಟ್‌ನಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ: ಮಾಜಿ ಸಂಸದ ಡಿ.ಕೆ.ಸುರೇಶ್‌

Girl-harras

Mandya: ಬಾಲಕಿ ಮೇಲೆ ಮೂವರು ದುರುಳರಿಂದ ಸಾಮೂಹಿಕ ದೌರ್ಜನ್ಯ!

Yuvanidhi-meet

Mangaluru: ಯುವನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ: ಜಿ.ಪಂ.ಸಿಇಒ ಡಾ.ಆನಂದ್‌

Kantabare-Kambla

Kinnigoli: ಜಾನಪದ, ಧಾರ್ಮಿಕ ಐತಿಹ್ಯದ ಐಕಳ ಕಂಬಳದಿಂದ ಊರಿಗೇ ಹಬ್ಬ: ಡಾ.ರಾಜೇಂದ್ರ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DH-mastakabhisheka

Dharmasthala: ದಯೆ ಇದ್ದರಷ್ಟೇ ಧರ್ಮಕ್ಕೆ ಅರ್ಥ: ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು

6(4

Bantwal: ಸರಪಾಡಿ; ರಬ್ಬರ್ ತೋಟಕ್ಕೆ ಬೆಂಕಿ

Kanyadi

1008 ಮಹಾಮಂಡಲೇಶ್ವರ ಪಟ್ಟಾಭಿಶಿಕ್ತರಾದ ಕನ್ಯಾಡಿ ಬ್ರಹ್ಮಾನಂದ ಶ್ರೀಗಳಿಗೆ ಭವ್ಯ ಸ್ವಾಗತ

1

You Tube ನೋಡಿ ಯೋಗ ಕಲಿತು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಸೇರಿದ ತಾಯಿ, ಮಕ್ಕಳು

Kadaba: ನಕಲಿ ಫೋನ್‌ ಪೇ ಬಳಸಿ ವರ್ತಕರ ವಂಚಿಸಿದ ಕಳ್ಳ ಪೋಲಿಸ್‌ ವಶಕ್ಕೆ

Kadaba: ನಕಲಿ ಫೋನ್‌ ಪೇ ಬಳಸಿ ವರ್ತಕರ ವಂಚಿಸಿದ ಕಳ್ಳ ಪೋಲಿಸ್‌ ವಶಕ್ಕೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

1-weewqe

1ರಿಂದ 5ನೇ ತರಗತಿ ಮಕ್ಕಳ ಕಲಿಕೆ ಬಲವರ್ಧನೆಗೆ ‘ಹಬ್ಬ’

1-ling

ಲಿಂಗನಮಕ್ಕಿ ಪವರ್‌ಹೌಸ್‌: 40 ವರ್ಷದ ಟರ್ಬೈನ್‌ ರನ್ನರ್‌ ಸ್ಥಗಿತ

school

Students; ಮಕ್ಕಳಲ್ಲಿ ನೈತಿಕತೆಯ ನೆಲೆಗಟ್ಟನ್ನು ಗಟ್ಟಿಗೊಳಿಸೋಣ

K-Sudhakar

Chikkaballapura: ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್‌

R.Ashok1

ರಾಜ್ಯದಲ್ಲಿ ದಿನಕ್ಕೊಂದು ಮಾನಭಂಗ, ಅತ್ಯಾಚಾರ ಕೇಸ್‌: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.