ವನ್ಯಜೀವಿ ಮಾರುಕಟ್ಟೆಗಳ ಮೇಲೆ ಜಾಗತಿಕ ನಿಷೇಧ!
Team Udayavani, Apr 7, 2020, 5:10 PM IST
ಸಾಂದರ್ಭಿಕ ಚಿತ್ರ
ಜಿನಿವಾ: ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆ ಗಟ್ಟಲು ವಿಶ್ವಸಂಸ್ಥೆಯ ಜೀವವೈವಿಧ್ಯ ಮುಖ್ಯಸ್ಥರು ವನ್ಯಜೀವಿ ಮಾರುಕಟ್ಟೆಗಳ ಮೇಲೆ ಜಾಗತಿಕ ನಿಷೇಧವನ್ನು ಕೋರಿದ್ದಾರೆ.
ಚೀನದ ವುಹಾನ್‌ನ ಮಾಂಸ ಮಾರುಕಟ್ಟೆ ಕೋವಿಡ್-19 ವೈರಸ್ ಹರಡಲು ಕಾರಣ ಎಂದು ಹೇಳಲಾಗಿದೆ. ಜೀವಂತ ಮತ್ತು ಸತ್ತ ಪ್ರಾಣಿಗಳನ್ನು ಮಾನವ ಬಳಕೆಗಾಗಿ ಮಾರಾಟ ಮಾಡುವ “ವೆಟ್ ಮಾರುಕಟ್ಟೆಗಳನ್ನು” ನಿಷೇಧಿಸಬೇಕು ಎಂದು ಯುಎನ್ ಜೈವಿಕ ವೈವಿಧ್ಯದ ಸಮಾವೇಶದ ಕಾರ್ಯಕಾರಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಲಿಜಬೆತ್ ಮಾರುಮಾ ಮ್ರೆಮಾ ಮನವಿ ಮಾಡಿದ್ದಾರೆ. ಈ ಮೂಲಕ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ದೇಶಗಳು ಮುಂದಾಗಬೇಕು ಎಂದು ಎಂದಿದ್ದಾರೆ.
ಚೀನ ಈಗಾಗಲೇ ವನ್ಯಜೀವಿ ಮಾರುಕಟ್ಟೆಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ. ಆದರೆ ಅಲ್ಲಿ ಸಿವೆಟ್ಸ್, ತೋಳ ಮರಿಗಳು ಮತ್ತು ಪ್ಯಾಂಗೊಲಿನ್ ಗಳಂಥ ಪ್ರಾಣಿ ಗಳನ್ನು ಮಾರಲಾಗುತ್ತಿದೆ. ಈ ಕಾರ ಣಕ್ಕೆ ಅನೇಕ ವಿಜ್ಞಾನಿಗಳು ಈ ಮಾರುಕಟ್ಟೆಯನ್ನು ಶಾಶ್ವತವಾಗಿ ಮುಚ್ಚು ವಂತೆ ಚೀನ ಸರಕಾರವನ್ನು ಒತ್ತಾಯಿಸಿದ್ದಾರೆ.
ಪಶ್ಚಿಮ ಆಫ್ರಿಕಾದಲ್ಲಿನ ಎಬೋಲಾ ಮತ್ತು ಪೂರ್ವ ಏಷ್ಯಾ ದಲ್ಲಿ ತಲೆದೋರಿದ ನಿಫಾ ವೈರಸ್‌ಗಳು ಪ್ರಾಣಿ ಗಳಿಂದ ಬಂದಿವೆ. ಚೀನ ತಾತ್ಕಾಲಿವಾಗಿ ಮಾಡಿದಂತೆ ಮತ್ತು ಕೆಲವು ದೇಶಗಳಲ್ಲಿ ಜೀವಂತ ಪ್ರಾಣಿ ಮಾರುಕಟ್ಟೆಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಇದೇ ಸಂದರ್ಭದಲ್ಲಿ ಆಫ್ರಿಕಾದಲ್ಲಿ ಲಕ್ಷಾಂತರ ಜನರ ಜೀವನ ಪ್ರಾಣಿಗಳ ಮಾರಾಟದ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದೂ ವಿಶ್ವಸಂಸ್ಥೆ ಹೇಳಿದೆ.
ಶೇ. 70 ಕ್ಕಿಂತಲೂ ಹೆಚ್ಚು ಮಾನವ ರೋಗಗಳು ವನ್ಯಜೀವಿಗಳಿಂದ ಬಂದಿವೆ. ಇನ್ನು ಕೆಲವು ಪ್ರಾಣಿಗಳ ಸಂತತಿಗಳು ಅಳಿವಿನಂಚಿನಲ್ಲಿವೆ. ಕೆಲವು ದೇಶಗಳಲ್ಲಿ ಇವು ಗಳನ್ನು ಆಹಾರವಾಗಿ ಸೇವಿಸಲಾಗುತ್ತಿದೆ. ಇವುಗಳೆಲ್ಲವನ್ನೂ ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳ ನಡೆಯುವ ಸಾಧ್ಯತೆ ಇದೆ.
ಚೀನದ ವುಹಾನ್ ನಗರದಲ್ಲಿ ವೆಟ್ ಮಾರುಕಟ್ಟೆಯಿದ್ದು ಅಲ್ಲಿ ಸಜೀವ ಮತ್ತು ಸತ್ತ ಪ್ರಾಣಿಗಳನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ರೂಪುಗೊಳಿಸಿ ಕೊಡಲಾಗುತ್ತದೆ. ಕೊರೊನಾ ವೈರಸ್‌ನ ಮೂಲ ಈ ವೆಟ್ ಮಾರುಕಟ್ಟೆ ಎಂದೇ ಹೇಳ ಲಾ ಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಕೋವಿಡ್-19 ಸೋಂಕು ಹರಡುತ್ತಿದ್ದಂತೆ ಕೂಡಲೇ ಆ ಮಾರು ಕಟ್ಟೆಯನ್ನು ಮುಚ್ಚಿತ್ತು. ಈಗಲೂ ತಾತ್ಕಾಲಿಕ ನಿಷೇಧ ವನ್ನು ಮುಂದುವರಿಸಿದೆ. ಇಂಥ ಮಾರುಕಟ್ಟೆಯನ್ನು ಮುಚು cವು ದರಿಂದ ಭವಿಷ್ಯದಲ್ಲಿ ಸಾಮಾಜಿಕ ಆರೋಗ್ಯದ ಮೇಲೆ ಬೀರ ಬಹುದಾದ ದುಷ್ಪರಿಣಾಮವನ್ನು ತಡೆಯಬಹುದು ಎಂಬುದು ವಿಶ್ವಸಂಸ್ಥೆಯ ಲೆಕ್ಕಾಚಾರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.