ವಿಶ್ವ ಸಿನಿಮಾ ವಿಭಾಗ : 50 ಚಿತ್ರಗಳ ದೊಡ್ಡ ಪಟ್ಟಿ !


Team Udayavani, Jan 17, 2021, 4:32 PM IST

ವಿಶ್ವ ಸಿನಿಮಾ ವಿಭಾಗ : 50 ಚಿತ್ರಗಳ ದೊಡ್ಡ ಪಟ್ಟಿ !

ಪಣಜಿ: ಈ ಬಾರಿಯ ಚಿತ್ರೋತ್ಸವದಲ್ಲಿ ವಿಶ್ವ ಸಂತೆಯಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳು ಬರೋಬ್ಬರಿ 50.
ವಿಶ್ವ ಸಿನಿಮಾ ಪನೋರಮಾ ವಿಭಾಗದಲ್ಲಿ ಜರ್ಮನಿಯ ಎಂಟು ಹಾಗೂ ಫ್ರಾನ್ಸ್‌ ನ ಆರು ಚಿತ್ರಗಳು ಪಾರಮ್ಯವನ್ನು ಮೆರೆದಿದ್ದರೆ, ಉಳಿದ ಅಮೆರಿಕ, ಇಟಲಿ, ಗ್ರೀಕ್‌, ನೆದರ್ ಲ್ಯಾಂಡ್ಸ್‌, ಇರಾನ್‌, ಖಜಕಿಸ್ತಾನ್‌. ರೊಮೇನಿಯಾ, ಪೋರ್ಚುಗಲ್‌, ಐರ್‌ ಲ್ಯಾಂಡ್‌, ಬ್ರೆಜಿಲ್‌, ಅರ್ಜೆಂಟೈನಾ ದೇಶದ ಸಿನಿಮಾಗಳೂ ಪ್ರದರ್ಶನಗೊಳ್ಳುತ್ತಿವೆ. ಶ್ರೀಲಂಕಾದ ಪ್ರಸನ್ನ ವಿತಂಗೆಯವರ ಚಿಲ್ಡ್ರನ್‌ ಆಫ್‌ ದಿ ಸನ್‌ ಸಹ ಈ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇಗೋರ್‌ ಇವಾನೊವ್‌ನ ಚಿತ್ರ ಓನ್ಲಿ ಹ್ಯೂಮನ್‌ ಎಂಬ ಚಿತ್ರ ವಿಶಿಷ್ಟವಾದ ಕಥಾ ಹಂದರವನ್ನು ಹೊಂದಿರುವಂಥ ಚಿತ್ರ. ಆರು ವ್ಯಕ್ತಿಗಳ ವ್ಯಕ್ತಿತ್ವಗಳ ಆರು ಸನ್ನಿವೇಶ ಅಥವಾ ಸಂದರ್ಭಗಳನ್ನು ಹೇಳುತ್ತಲೇ ಒಂದರೊಳಗೆ ಒಂದನ್ನು ಬೆಸೆಯುತ್ತಾ ಬದುಕಿನ ಬಹಳ ಮುಖ್ಯವಾದ ಪ್ರೀತಿ ಒಲವು, ಅಸ್ತಿತ್ವ ಹಾಗೂ ಅದಕ್ಕಾಗಿನ ಹೋರಾಟವನ್ನು ಬಿಂಬಿಸುತ್ತದೆ. ಇದು ನೋಡಬಹುದಾದ ಚಿತ್ರ.

ಮತ್ತೊಂದು ಚಿತ್ರ ಬಾಂಗ್ಲಾದೇಶದ್ದು. ತನ್ವಿರ್‌ ಮೊಕ್ಕಮಲ್‌ ಅವರ ಚಿತ್ರ ರುಪ್ಸಾ ನದಿರ್ ಬಂಕೇ ಸಹ ಸ್ಥಳೀಯವಾಗಿ ಒಳ್ಳೆಯ ಅಭಿಪ್ರಾಯವನ್ನು ಪಡೆದ ಚಿತ್ರ. ಸ್ವದೇಶಿ ಚಳವಳಿಯೂ ಸೇರಿದಂತೆ ಹತ್ತಾರು ಸಂಗತಿಗಳನ್ನು ನಾಜೂಕಾಗಿ ಹೆಣೆದು ರೂಪಿಸಿರುವ ಚಿತ್ರ. ತನ್ವಿರ್‌ ಪ್ರಸಿದ್ಧ ಚಿತ್ರ ನಿರ್ದೇಶಕ. ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಚಿತ್ರ ನಿರ್ದೇಶಕ. ಮಾನವೀಯ ಸಂಬಂಧಗಳನ್ನು ಹೆಣೆಯುವುದಕ್ಕೆ ಅವರಿಗೆ ಆಸಕ್ತಿ.

ಇದನ್ನೂ ಓದಿ:ಪಣಜಿ: ತೆರೆದುಕೊಂಡ ಚಿತ್ರ ಜಗತ್ತು ; ಎರಡನೇ ದಿನ ಪರವಾಗಿಲ್ಲ

ದಿ ಆಡಿಷನ್‌ ಇನಾ ವೆಸ್ಸಿ ರೂಪಿಸಿದ ಜರ್ಮನ್‌ ಚಿತ್ರ. ಮಾನವೀಯ ಸಂಬಂಧದ ಆರ್ದ್ರತೆಯನ್ನು ಹುಡುಕುತ್ತಾ ಹೋಗುವ ನಾಯಕಿ, ತನ್ನಅಂತರಂಗಕ್ಕೆ ಬೇಕಾದುದನ್ನು ಎಲ್ಲದರ ನಡುವೆಯೂ ಗುರುತಿಸಿಕೊಳ್ಳುತ್ತಾಳೆ.

ಇರಾನಿನ ಮತ್ತೊಂದು ಚಿತ್ರ ಪೊಯಾ ಪರ್ಸಮಮ್ ನಿರ್ದೇಶಿಸಿರುವ ಗೆಸ್ಚರ್‌. ಇರಾನಿನ ಅತ್ಯಾಧುನಿಕ ಸಮಾಜದಲ್ಲಿ ಕುಟುಂಬದ ಸಂಬಂಧಗಳು ಮತ್ತು ಅದರ ಸಂಕೀರ್ಣತೆ ಹೆಚ್ಚಾಗಿ ಚರ್ಚೆಯಾಗುತ್ತಲೇ ಇದೆ. ಈ ಚಿತ್ರವೂ ಒಂದು ನೆಲೆಯಲ್ಲಿ ಅದಕ್ಕೆ ಪೂರಕವಾದದ್ದೇ. ತನ್ನ ಮಗನಲ್ಲಿನ ವಿಚಿತ್ರವಾದ ಕಾಯಿಲೆಯನ್ನು ಅರಿಯುವ ಅಪ್ಪ, ಅದನ್ನು ಬಹಿರಂಗಪಡಿಸಿದರೆ ಉಂಟಾಗಬಹುದಾದ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಾನೆ. ಆ ಮೂಲಕ ಅವನು ವಿಚಿತ್ರ ವ್ಯಕ್ತಿಯಂತೆ ವರ್ತಿಸತೊಡಗುತ್ತಾನೆ. ಇದೂ ಸ್ವಲ್ಪ ಚರ್ಚೆಯಾದ ಚಿತ್ರ. ಅದರಲ್ಲೂ ಮಾನವೀಯ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ಕಟ್ಟಿಕೊಡುವುದರಲ್ಲಿ ಇರಾನಿನ ನಿರ್ದೇಶಕರು ಹೆಚ್ಚು ಪ್ರಸಿದ್ಧರು. ಈ ಚಿತ್ರ ನೋಡಿದರೆ ಮೋಸವಿಲ್ಲ.

ಜಾನ್‌ ಪ್ಯಾಬ್ಲೊಣ ಕರ್ನವಲ್ ಬಹಳ ವಿಶಿಷ್ಟವಾದ ಕಥಾವಸ್ತುವಿನ ಚಿತ್ರವಲ್ಲ. ಆದರೆ ಅರ್ಜೈಂಟೇನಾ ಸೇರಿದಂತೆ ಹಲವು ದಕ್ಷಿಣ ಅಮೆರಿಕಾ ಖಂಡದ ದೇಶಗಳಲ್ಲಿನ ತಂದೆ ಮತ್ತು ಮಕ್ಕಳ ಸಂಬಂಧಗಳಲ್ಲಿನ ಏರಿಳಿತಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿಯೂ ಒಬ್ಬ ಯುವ ನೃತ್ಯಪಟು ತನ್ನ ಬದುಕಿನ ದೊಡ್ಡ ನೃತ್ಯ ಪರೀಕ್ಷೆಗೆ ಉತ್ಸಾಹದಿಂದ ಸಿದ್ಧವಾಗುತ್ತಾನೆ. ಆದರೆ ಆ ಹೊತ್ತಿಗೆ ತನ್ನ ಹಿಂದಿನ ತಂದೆಯ ಮರು ಪ್ರವೇಶ ಹತ್ತಾರು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಈ ಬಾರಿಯ ವಿಶ್ವ ಸಿನಿಮಾ ಭಾಗದಲ್ಲಿ ನೋಡಲಿಕ್ಕೆ ಒಂದಿಷ್ಟು ಚಿತ್ರಗಳಿವೆ.

ಟಾಪ್ ನ್ಯೂಸ್

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-tudar

Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.