Godesess Temple: ನೈಸರ್ಗಿಕ ಅನಿಲದಿಂದ ಹೊರಹೊಮ್ಮುವ ಜ್ವಾಲೆಯೇ ಇಲ್ಲಿ ಜ್ವಾಲಾಜೀ ಮಾ!


Team Udayavani, Oct 10, 2024, 6:52 AM IST

Ma-Jwala-Temple

ನಾಡಿನೆಲ್ಲೆಡೆ ಈಗ ನವರಾತ್ರಿಯ ಸಂಭ್ರಮ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಭಕ್ತರು ವಿಶೇಷ ಶ್ರದ್ಧಾಭಕ್ತಿಯಿಂದ ಶಕ್ತಿಮಾತೆಯ ಆರಾಧನೆಯಲ್ಲಿ ತೊಡಗಿದ್ದಾರೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆಯಲ್ಲಿ ಈ ದಿನ ಹಿಮಾಚಲ ಪ್ರದೇಶದ ಮಾ ಜ್ವಾಲಾಜಿ ದೇಗುಲ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾಮುಖೀ ಪಟ್ಟಣದ ಹಿಮಾಲಯ ಶ್ರೇಣಿಯಲ್ಲಿ ಮಾ ಜ್ವಾಲಾ ದೇಗುಲವಿದೆ. ಇದನ್ನು ಜ್ವಾಲಾ ಕಿ ಕಾಂಗಡಾ ಎಂದು ಕರೆಯಲಾಗುತ್ತದೆ. ದೇವಸ್ಥಾನವು ಜ್ವಾಲಾ ಜಿ ಪುಣ್ಯಕ್ಷೇತ್ರಗಳ ಶೈಲಿಯಲ್ಲಿದೆ. ಇದು ಹಿಂದೂಗಳ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ಈ ದೇಗುಲದ ಹಿನ್ನೆಲೆಯ ಬಗೆಗೆ ಹಲವಾರು ಪೌರಾಣಿಕ ಕಥೆಗಳಿವೆ. ಮಹಾಭಾರತದಲ್ಲಿಯೂ ಈ ದೇವಾಲಯದ ಉಲ್ಲೇಖವಿದೆ.

ಒಂದು ಪೌರಾಣಿಕ ಕಥೆಯ ಪ್ರಕಾರ ಪ್ರಜಾಪತಿ ದಕ್ಷನ ಸಾಕು ಮಗಳಾದ ಸತಿಯ ಪತಿಯಾದ ಶಿವನನ್ನು ಆಕೆಯ ತಂದೆ ಅವಮಾನಿಸಿದಾಗ ಆಕೆ ತೀವ್ರವಾಗಿ ನೊಂದುಕೊಂಡು ಆತ್ಮಹತ್ಯೆಗೆ ಶರಣಾದಳು. ಈ ವಿಷಯವನ್ನು ತಿಳಿದು ಉದ್ರಿಕ್ತನಾದ ಶಿವನು, ಸತಿಯ ಮೃತದೇಹವನ್ನು ಹೊತ್ತುಕೊಂಡು ತ್ರಿಲೋಕ ಸಂಚಾರ ಆರಂಭಿಸಿದನು.

ಶಿವನ ಆಕ್ರೋಶನ್ನು ಕಂಡು ಬೆದರಿದ ಇತದ ದೇವರುಗಳು ಭಗವಾನ್‌ ವಿಷ್ಣುವಿನ ಮೊರೆ ಹೋದರು. ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿದಾಗ ಅದು ಸತಿಯ ದೇಹಕ್ಕೆ ಬಡಿದು ಹಲವಾರು ತುಂಡುಗಳಾಗಿ ವಿವಿಧ ಭಾಗಗಳಲ್ಲಿ ಬಿದ್ದವು. ಈ ಪೈಕಿ ಸತಿಯ ನಾಲಗೆಯು ಜ್ವಾಲಾಮುಖೀ ಪ್ರದೇಶದ ಭಾಗದಲ್ಲಿ ಬಂದು ಬಿತ್ತು. ನಾಲಗೆಯ ಜತೆ ಅಗ್ನಿಯ ಜ್ವಾಲೆಯೂ ಬಿದ್ದಿದ್ದು ಅದು ಇಂದಿಗೂ ಆರದೇ ಹಾಗೆಯೇ ಉರಿಯುತ್ತಿದೆ ಎಂಬ ಪ್ರತೀತಿ ಇದೆ.

ಇಲ್ಲಿನ ಸಮೀಪದ ಗುಹೆಯೊಂದರಲ್ಲಿ ಜ್ವಾಲೆಯೊಂದು ಶಾಶ್ವತವಾಗಿ ಉರಿಯುತ್ತಿದೆ. ಇಲ್ಲಿ ಮೂರ್ತಿಯ ಬದಲು ಈ ಜ್ವಾಲೆಯನ್ನೇ ಪೂಜಿಸಲಾಗುತ್ತದೆ. ಮತ್ತೆ ಕೆಲವು ಪುರಾಣಗಳ ಪ್ರಕಾರ ಇದು ಪಾಂಡವರು ನಿರ್ಮಿಸಿದ ಮೊದಲ ದೇವಾಲಯವಾಗಿದೆ. ಬಂಡೆಯ ಬದಿಯಿಂದ ಹೊರಹೊಮ್ಮುವ ನೈಸರ್ಗಿಕ ಅನಿಲವೇ ಈ ದೇವಾಲಯದ ನಿತ್ಯ ನಿರಂತರವಾಗಿ ಬೆಳಗುವ ಜ್ವಾಲೆಗೆ ಇಂಧನ.

ಈ ಶಕ್ತಿಯನ್ನು ಜ್ವಾಲಾಮುಖೀಯ ದ್ಯೋತಕವಾಗಿ ದೇವೀ ಭಕ್ತರು ಪೂಜಿಸುತ್ತಾ ಬಂದಿದ್ದಾರೆ. ಮಹಾಕಾಳಿ, ಅನ್ನಪೂರ್ಣ, ಚಂಡಿ, ಹಿಂಗ್ಲಾಜ್‌, ಬಿಂಧ್ಯಾ, ಬಸ್ನಿ, ಮಹಾಲಕ್ಷ್ಮೀ, ಅಂಬಿಕಾ ಮತ್ತು ಅಂಜಿ ದೇವಿ ಎಂಬ ದೇವತೆಗಳ ಹೆಸರುಳ್ಳ ಒಂಬತ್ತು ಶಾಶ್ವತ ಜ್ವಾಲೆಗಳನ್ನು ಈ ದೇವಾಲಯ ಹೊಂದಿದೆ ಎಂಬ ನಂಬಿಕೆಯೂ ಇದೆ.

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.