ಚಿನ್ನಾಭರಣದ ಮೇಲೆ 2021ರಿಂದ ಹಾಲ್‌ಮಾರ್ಕ್ ಮುದ್ರೆ ಕಡ್ಡಾಯ
Team Udayavani, Nov 30, 2019, 12:15 AM IST
ಹೊಸದಿಲ್ಲಿ: ಭಾರತೀಯ ಚಿನ್ನ ವರ್ತಕರಿಗೆ ಕೇಂದ್ರ ಸರಕಾರ ಆಘಾತಕಾರಿ ಸಂದೇಶವೊಂದನ್ನು ನೀಡಿದೆ. 2021, ಜ. 15ರಿಂದ ಚಿನ್ನಾಭರಣದಂಗಡಿ ಮಾಲೀಕರು ಕೇಂದ್ರ ಸರಕಾರದ ಹಾಲ್‌ಮಾರ್ಕ್ ಲಗತ್ತಿ ಸುವುದು ಕಡ್ಡಾಯ. ಈ ಬಗ್ಗೆ ಮುಂದಿನ ವರ್ಷ ಜ. 15ರಂದೇ ಸರಕಾರ ಅಧಿಸೂಚನೆ ಹೊರಡಿಸಲಿದೆ. ಆದರೆ ವ್ಯಾಪಾರಿಗಳಿಗೆ ತಮ್ಮ ಹಳೆಯ ಸಂಗ್ರಹವನ್ನು ಮುಗಿಸಿ ಕೊಳ್ಳಲು 1 ವರ್ಷ ಅವಕಾಶ ನೀಡಲಾ ಗುವುದು ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಹಾಲ್‌ಮಾರ್ಕ್ ಎಂದರೇನು?: ಕೇಂದ್ರ ಸರಕಾರದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಎಲ್ಲ ಆಭರಣಗಳನ್ನು, ಭಾರತೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಿ ಒಂದು ಮುದ್ರೆ ಹಾಕುತ್ತದೆ. ಅದೇ ಹಾಲ್‌ಮಾರ್ಕ್. ಚಿನ್ನಾಭರಣಗಳ ಗುಣಮಟ್ಟ ಕಾಪಾಡಲು, ವಂಚನೆ ತಡೆಯಲು ಇದು ನೆರವಾಗಲಿದೆ. ಇದರನ್ವಯ ಆಭರಣಗಳನ್ನು ಹಾಲ್‌ಮಾರ್ಕ್ ಶಾಖೆಗಳಿಗೆ ಒಯ್ದು ಪರಿಶೀಲಿಸುವುದು ಕಡ್ಡಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.