70ರ ಅನಸೂಯಾ ಅವರಿಗೆ ಸಂಸ್ಕೃತದಲ್ಲಿ ಚಿನ್ನ
Team Udayavani, Apr 10, 2021, 11:25 PM IST
ಬೆಂಗಳೂರು: ಮೂರು ದಶಕಗಳಿಗೂ ಅಧಿಕ ಕಾಲ ಭಾರತೀಯ ಸೇನೆಯಲ್ಲಿ ವೈದ್ಯೆಯಾಗಿ ಸೇವೆ, ನಿವೃತ್ತಿ ಬಳಿಕ ವೈದ್ಯಕೀಯ ವೃತ್ತಿಯ ಜತೆಗೆ ಸಂಸ್ಕೃತದಲ್ಲಿ ವಿಶೇಷ ಆಸಕ್ತಿ. ಇದು ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಸ್ವರ್ಣಪದಕ ವಿಜೇತರಾಗಿರುವ 70ರ ಹರೆಯದ ರಾಮಯ್ಯ ಅನಸೂಯಾ ಅವರ ಕಥೆ.
ಶುಕ್ರವಾರ ನಗರದ ಗಾಯನ ಸಮಾಜದಲ್ಲಿ ಜರಗಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ 8ನೇ ಘಟಿಕೋತ್ಸವದಲ್ಲಿ ಶುಕ್ಲ ಯಜುರ್ವೇದ ಕ್ರಮಾಂತ (ಬಿ.ಎ.) ವಿಷಯದಲ್ಲಿ ಮೈಸೂರಿನ ಅನಸೂಯಾ ಅವರು ಪರಮ ಪೂಜ್ಯ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿ ಮಹಾಸ್ವಾಮಿ ಸ್ವರ್ಣ ಪದಕ ಸ್ವೀಕರಿಸಿದ್ದಾರೆ. 36 ವರ್ಷಗಳ ಸುದೀರ್ಘ ಕಾಲ ಸೇನೆಯಲ್ಲಿ ವೈದ್ಯೆಯಾಗಿದ್ದ ಅವರು ನಿವೃತ್ತಿ ಬಳಿಕ ಮೈಸೂರಿನಲ್ಲೇ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಿದರು. ಜತೆಗೆ ಸಂಸ್ಕೃತ ಅಧ್ಯಯನವನ್ನು ಆರಂಭಿಸಿದರು. ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿರುವ ಅವರು ಶುಕ್ಲಯರ್ಜುವೇದ ಕ್ರಮಾಂತ ವಿಷಯದಲ್ಲಿ ಬಿ.ಎ. ಪದವಿಯನ್ನು ಸ್ವರ್ಣ ಪದಕದೊಂದಿಗೆ ಪೂರೈಸಿದ್ದಾರೆ. ಮುಂದೆ ಧನಂತ ವಿಷಯವಾಗಿ ಉನ್ನತಾಧ್ಯಯನ ಮಾಡುವ ಅಭಿಲಾಷೆ ಅವರದ್ದು.
ಇವರು ಎಂ.ಎ., ಪಿಎಚ್.ಡಿ., ಅಪ್ತಮಾಲಜಿಯಲ್ಲಿ ಎಂ.ಎಸ್., ಪ್ರಶುತಿ ವಿಭಾಗದಲ್ಲಿ ಎಂ.ಡಿ. ಹಾಗೂ ಆಕ್ಯೂಪಂಚರ್ ವಿಭಾಗದಲ್ಲಿ ಎಂ.ಡಿ. ಪದವಿ ಪಡೆದು, ಸ್ತ್ರೀರೋಗ ಹಾಗೂ ನೇತ್ರತಜ್ಞೆಯೂ ಆಗಿದ್ದಾರೆ.
ಗೌರವ ಡಿ-ಲಿಟ್
ಸಂಸ್ಕೃತ ವಿದ್ವಾಂಸ ಪಂ| ಮಳಗಿ ಜಯತೀರ್ಥಾಚಾರ್ಯ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಕರ್ನಾಟಕ ಸಂಸ್ಕೃತ ವಿವಿಯ ಗೌರವ ಡಿ-ಲಿಟ್ ಪದವಿ ಪ್ರದಾನಿಸಿದರು.
ಪಂ| ಮಳಗಿ ಅವರು ಕರ್ನಾಟಕ ವಿವಿಯ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದು, ಮಾಟುಂಗದ ಮಾವುಲಿ ವಿದ್ಯಾಪೀಠದಲ್ಲಿ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದ್ದರು. ಸಂಸ್ಕೃತ ಪಂಡಿತ ಎಸ್. ಕಣ್ಣನ್ ಅವರಿಗೆ ಡಿ-ಲಿಟ್ ಪದವಿ ಪ್ರದಾನ ಮಾಡಲಾಯಿತು. 30 ಮಂದಿಗೆ ಪಿಎಚ್.ಡಿ ಪದವಿ ಹಾಗೂ 43 ಮಂದಿಗೆ ಎಂ.ಫಿಲ್. ಪದವಿ ನೀಡಲಾಯಿತು.
ಪಶ್ಚಿಮ ಬಂಗಾಳ ಬೇಲೂರಿನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಸ್ವಾಮಿ ಅತ್ಮಪ್ರಿಯಾನಂದ ಅವರು ಕೋಲ್ಕತಾದಿಂದಲೇ ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.
ಸೇನೆ ಯಲ್ಲಿ ಸೇವೆ ಸಲ್ಲಿಸಿದ್ದರಿಂದ ಉತ್ಸಾಹ ಎಂದೂ ಕುಂದಲಿಲ್ಲ. ಗುಜರಾತ್‌ನಲ್ಲಿದ್ದಾಗ ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಿದ್ದು ಇಂದಿಗೂ ಸ್ಮತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಸಂಸ್ಕೃತದ ಬಗ್ಗೆ ಮೊದಲೇ ಆಸಕ್ತಿ ಇತ್ತು.
– ರಾಮಯ್ಯ ಅನಸೂಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.