Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
ಬೆಳೆ ಕನ್ನಡ ವಿಶೇಷ ಲೇಖನ-೪, ಆರ್ಥಿಕತೆಗೆ, ಉದ್ಯೋಗ ನೀಡಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವ ಪ್ರಕಾಶನ, ಸರಕಾರಿ ಪೂರೈಕೆಗಾಗಿಯೇ ಹುಟ್ಟಿಕೊಂಡಿರುವ ಕೆಲ ಪ್ರಕಾಶಕ, ಲೇಖಕರು
Team Udayavani, Nov 5, 2024, 7:20 AM IST
ಉದಾಹರಣೆಗೆ ಗದುಗಿನ ಪ್ರಕಾಶಕರನ್ನು ಗಮನಿಸಿ. ಬಳಿಕದ ಗಳಗನಾಥರ ಕಾಲ ಮೊದಲ್ಗೊಂಡು ಆರಂಭಗೊಂಡ ಹೊಸ ಪ್ರಾಕಾರದ ಸಾಹಿತ್ಯ ಪ್ರಕಟನೆಯಲ್ಲಿ ಬಹುಪಾಲು ಹಿರಿಯ ಸಾಹಿತಿ ಗಳು ತೊಡಗಿಕೊಂಡದ್ದನ್ನು ಗಮನಿಸಬಹುದು. ಗಳಗನಾಥರೇನೋ ಬರವಣಿಗೆ, ಮುದ್ರಣ, ವಿತರಣೆ ಮುಂತಾದ ಎಲ್ಲ ಕೆಲಸಗಳನ್ನೂ ತಾವೇ ನಿರ್ವಹಿಸಿದ ಸಾಹಸಿಗಳು ಮತ್ತು ಪರಿಶ್ರಮಿಗಳು.
ಅನಂತರದ ಖ್ಯಾತ ನಾಮರೆಲ್ಲ ತಮ್ಮ ಕೃತಿಗಳನ್ನು ತಾವೇ ಪ್ರಕಟಿಸುವವರಾಗಿದ್ದರೂ ಆ ಮೂಲಕ ಆಗುತ್ತಿದ್ದ ವ್ಯಾಪಾರದ ಮೇಲೆಯೇ ತಮ್ಮ ಬದುಕನ್ನು ಅವಲಂಬಿಸದೇ ತಮ್ಮ ಸಂಸಾರ ನಿರ್ವಹಣೆಗೆ ಬೇರೆ ದಾರಿ ಕಂಡುಕೊಂಡಿದ್ದರು. ಉದಾಹ ರಣೆಗೆ ಕುವೆಂಪು, ಮಾಸ್ತಿ, ರಾಜರತ್ನಂ. ಅಂಥವರಲ್ಲಿ ಶಿವರಾಮ ಕಾರಂತರು ನಮಗೆ ಸುಧಾರಿತ ಗಳಗನಾಥರಂತೆನಿಸುತ್ತಾರೆ. ಸ್ವತಃ ಲೇಖಕರೂ ಮುದ್ರಕ ರೂ ಚಿತ್ರಕಲಾಕಾರರೂ ಆಗಿದ್ದವರಾಗಿ ಗಳಗನಾಥರಂತೆ ಊರೂರು ಸುತ್ತಾಡಿ ಮಾರಾಟ ಮಾಡುತ್ತಿರಲಿಲ್ಲವಷ್ಟೆ.
ಮೈಸೂರು ಮಹಾರಾಜರ ಆಡಳಿತದಲ್ಲಂತೂ ಕನ್ನಡ ಸಾರಸ್ವತ ಲೋಕಕ್ಕೆ ಅಮೋಘ ನೆರವನ್ನು ನೀಡಿದ್ದಕ್ಕೆ ಅರಮನೆ ಪ್ರಕಟಿಸಿದ ಗ್ರಂಥಗಳೇ ಸಾಕ್ಷಿ. ಮೂಲ ಸಂಸ್ಕೃತ ಪುರಾಣ ಮತ್ತು ಮೂಲ ವೇದಸಾಹಿತ್ಯ ಗಳಿಗೆ ಕನ್ನಡ ಅನುವಾದ – ಭಾಷ್ಯ ಸಹಿತ ಬೃಹತ್ ಸಂಪುಟಗಳು, ಕುಮಾರ ವ್ಯಾಸ ಭಾರತ, ಈ ಮುಂತಾದುವೆಲ್ಲ ಸಾಹಿತ್ಯದ ಅರಿವುಳ್ಳ ಆ ಪ್ರಾಜ್ಞ ಜನಾ ಡಳಿತಗಾರರೇ ಮಾಡಿದ್ದರಿಂದ ಸಾಧ್ಯವಾದಂಥವು. ಮುಂದಿನ ಸರಕಾರಗಳ ಕಾಲದಲ್ಲಿ 3 ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು ಹೊಸ ಹುರುಪಿನಲ್ಲಿ ಪ್ರಾಜ್ಞರ ನಿರ್ದೇಶನದಲ್ಲಿ ಮಾಡಿದ ಸಾಧನೆಗಳು ಅಪೂರ್ವವೆನಿಸಿ ಓದು ಗರ ಆಸಕ್ತಿ ಮತ್ತು ಜ್ಞಾನತೃಷೆಯನ್ನು ತಣಿಸಿದುವು.
ಸರಕಾರದ ಧನಸಹಾಯ ನೆಚ್ಚಿಕೊಂಡಿದ್ದ ಅವುಗಳ ಯೋಜನೆಗಳೂ ಉತ್ಸಾಹಗಳೂ ಕ್ರಮೇಣ ನೆಲಕ ಚ್ಚಿದವು. ಆ ಕೆಲಸಗಳು ಯಾವ ಖಾಸಗಿ ಪ್ರಕಾಶಕ ರಿಂದಲೂ ಸಾಧ್ಯವೆನಿಸದಂಥವಾಗಿದ್ದುದು ನಿಜ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆಗಳು ಕೂಡ, ಹಂಪ ನಾಗರಾಜಯ್ಯನವರ ಕಾಲದವರೆಗೂ ಹಾಗೆಯೇ ಇದ್ದುದು ನಾವು ಕಾಣಬಹುದು. ಅನಂತರ ಜನ್ಮತಾಳಿದ ಸರಕಾರದ ಎಲ್ಲ ಅಕಾಡೆಮಿ, ಎಲ್ಲ ಪ್ರಾಧಿಕಾರಗಳೂ ಪುಸ್ತಕ ಪ್ರಕಾಶನಕ್ಕೂ ತೊಡಗಿ ಕೊಂಡು, ಖಾಸಗಿಯವರು ಮಾಡಬಹುದಾದ ಕೃತಿಗಳ ನ್ನೇ ಪ್ರಕಟಿಸಿ, ಅರ್ಧಬೆಲೆ ಮಾರಾಟಕ್ಕಿಳಿದು, ಪ್ರಕಾಶಕರಿ ಗೂ ಓದುಗರಿಗೂ ಅನ್ಯಾಯದ ದಾರಿ ತೋರಿಸಿದ್ದಲ್ಲದೆ, ಸರಕಾರಕ್ಕೂ ಬಿಳಿಯಾನೆಯಾಗಿರುವುದು ವಾಸ್ತವ.
“ನಾನು ಈ ತನಕಾ ಒಂದೂ ಪುಸ್ತಕ ಓದೇಯಿಲ್ಲ. ನಮ್ಮಪ್ಪ ನಾ ಸಣ್ಣಾವಿದ್ದಾಗ ಪಂಚತಂತ್ರ ಕತಿ ಪುಸ್ತಕ ಓದಲೇ ಅಂತ ತಂದುಕೊಟ್ಟಿದ್ದ. ನಾನು ಓದಲೇಯಿಲ್ಲ. ಇನ್ನಮುಂದ ಸ್ವಲ್ಪ ಸವುಡು ಸಿಕ್ಕಾಗ ಪುಸ್ತಕ ಓದೋ ಪ್ರಯತ್ನ ಮಾಡತೇನಿ’ ಎಂದಿದ್ದರು. ಈ ಇಲಾಖೆಯ ಸ್ಥಿತಿಯನ್ನೇ ಆ ಮಂತ್ರಿಗಳ ಮಾತು ಬಿಂಬಿಸಿದ್ದು ಸುಳ್ಳೇ? ಪ್ರಕಾಶಕರಿಗೆ, ಲೇಖಕರಿಗೆ ಈ ಇಲಾಖೆ ಉತ್ತೇಜನ ನೀಡುತ್ತಿದೆ ಎಂದಾಕ್ಷಣ ಸರಕಾರೀ ಪೂರೈಕೆಗಾಗಿಯೇ ಹುಟ್ಟಿಕೊಂಡ ಪ್ರಕಾಶಕರೂ ಬರೆದುಕೊಡುವ ಲೇಖಕರೂ ಹುಟ್ಟಿಕೊಂಡದ್ದು ನಿಜ.
ಸ್ವಾಮಿ, ನಾನು ಗ್ರಂಥಾಲಯಕ್ಕಾ ಗಿಯೇ ಪುಸ್ತಕ ಪ್ರಕಟಿಸುವ ಪ್ರಕಾಶಕನಲ್ಲ, ನಮ್ಮ ಪ್ರಕಾಶನದ ಕೃತಿಗಳು ಕನಿಷ್ಠ ಓದಿಸಿಕೊಳ್ಳುವ, ಕನಿಷ್ಠ ಮಾರಾಟದ-ಹೀಗೆ ಎರಡೂ ಯೋಗ್ಯತೆ ಗಳುಳ್ಳಂಥವು – ಲೇಖಕರ ಶ್ರಮಕ್ಕೂ ಯೋಗ್ಯ ಸಂಭಾವನೆಯನ್ನೂ ಚೊಕ್ಕ ಮುದ್ರಣದತ್ತ ತುಂಬ ಕಾಳಜಿಯನ್ನೂ ಕೊಡುವವ ನಾನು – ಎಂದರೂ ನಮ್ಮ ಪುಸ್ತಕಗಳು ಅವರ ಗ್ರಂಥಾಲಯ ಸೇರುತ್ತಲೇಯಿಲ್ಲ. ಅಲ್ಲಿ ಹೆಚ್ಚಾಗಿ ರದ್ದಿಯೇ ತುಂಬಿದೆಯೆಂದು ಬೇರೆ ಹೇಳಬೇಕಿಲ್ಲ. ಈ ಇಲಾಖೆಯ ಕುರಿತು ಯಾರಲ್ಲಿ ಏನನ್ನು ಮಾತನಾಡಬೇಕು? ಭಾಗ್ಯ ಭರಿಸಲೇ ಒದ್ದಾಡುತ್ತಿರುವ ಸರಕಾರದಿಂದಲಂತೂ ಈ ಇಲಾಖೆಗೆ ಕತ್ತಲೆಯೇ ಗತಿ!
ನಮ್ಮ ಮಕ್ಕಳನ್ನೂ ಕನ್ನಡ ಓದುಬರಹ ಬರುವಂತೆ ಮಾಡಿ, ಈ ವೃತ್ತಿಯ ಸೊಗಸನ್ನೂ ಘನತೆಯನ್ನೂ ತಿಳಿಯುವಂತೆ ಮಾಡಿದರೆ ಆ ವ್ಯವಸಾಯ ಮತ್ತೊಂದು ತಲೆಮಾರು ಮುಂದುವರೆದೀತು, ಕನ್ನಡಕ್ಕೆ ನ್ಯಾಯವೂ ದಕ್ಕೀತು. ನಮ್ಮ ಜನರಲ್ಲೂ ಈಗೀಗ ಶ್ರೀಮಂತಿಕೆ ಎದ್ದುಕಾಣುವಂತಾಗಿದೆ. ಹಿಂದಿನ ಕಾಲದಂತೆ ಕಡ ಪಡೆದು ಓದುವವರೂ ದುಡ್ಡು ಖರ್ಚುಮಾಡಲು ಹಿಂದೇಟುಹಾಕುವವರೂ ಕಡಿಮೆಯಾಗಿದ್ದಾರೆ. ಪುಸ್ತಕ ಓದಿನ ರುಚಿಹತ್ತಿಸುವ ಕಲೆಕೌಶಲಗಳನ್ನು ಪ್ರಕಾಶಕ, ಮಾರಾಟಗಾರ ರೂಢಿಸಿಕೊಳ್ಳಬೇಕು. ಓದುಗರ ಬದಲಾಗುವ ಆದ್ಯತೆ ಅಭಿರುಚಿಗಳ ಕುರಿತು ಅರಿವಿರಬೇಕು. ನೆನಪಿರಲಿ ಇದು ವ್ಯವಸಾಯವೇ ಆಗಿರಲಿ, ಉದ್ಯಮವಾಗುವುದು ಬೇಡ!
– ಎಂ. ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.