Golden Jubilee: ಸಂವಿಧಾನದಿಂದ ನ್ಯಾಯಾಂಗದಲ್ಲಿ ವಿಶ್ವಾಸ: ನ್ಯಾ| ಮುರಳೀಕೃಷ್ಣ

ಎಸ್‌ಡಿಎಂ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ

Team Udayavani, Dec 15, 2024, 3:54 AM IST

SDM-Law

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಂಭ್ರಮ “ಸುವರ್ಣ ಪಥ’ ಕಾರ್ಯಕ್ರಮದ ಉದ್ಘಾಟನೆಯು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶನಿವಾರ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇರಳ ಹೈಕೋರ್ಟ್‌ ನ್ಯಾಯಾಧೀಶ ನ್ಯಾ| ಮುರಳೀಕೃಷ್ಣ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಚೌಕಟ್ಟಿನಿಂದ ನಿಯಂತ್ರಿಸಲ್ಪಟ್ಟಿದೆ. ಸಂವಿಧಾನದಿಂದಾಗಿ ನ್ಯಾಯಾಂಗ ವ್ಯವಸ್ಥೆ ಮೇಲಿನ ಜನರ ವಿಶ್ವಾಸವೂ ದೃಢವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು, ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಆಧುನಿಕ ಸವಾಲುಗಳು ಕಾನೂನಿನ ವ್ಯಾಖ್ಯಾನದಲ್ಲೂ ಹಲವು ಬದಲಾವಣೆಗಳಿಗೆ ಕಾರಣವಾಗಿವೆ ಎಂದರು.

ಶಿಕ್ಷಣದಿಂದ ಸುಭದ್ರ ದೇಶ: ಹೊಳ್ಳ
ಸಂಸ್ಥಾಪನ ದಿನದ ಉಪನ್ಯಾಸ ನೀಡಿದ ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲ ಉದಯ ಹೊಳ್ಳ, ಶಿಕ್ಷಣದಿಂದ ಸುಭದ್ರ ದೇಶ ಕಟ್ಟಲು ಸಾಧ್ಯ. ಶಿಕ್ಷಣ ಸಂಸ್ಥೆಗಳ ಆರಂಭದಲ್ಲಿ ಬಲಿಷ್ಠ ಅಡಿಪಾಯ ಇದ್ದರೆ, ಗಮನಾರ್ಹ ಸಾಧನೆ ಮಾಡಬಹುದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆ ದೇಶಕ್ಕೆ ಸಾಧಿಸಿ ತೋರಿಸಿದೆ ಎಂದರು.
ಭ್ರಷ್ಟಾಚಾರದಿಂದ ಕೂಡಿರುವ ಸಮಾಜದ ಮೌಲ್ಯ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕೆಲಸವನ್ನು ಕಾನೂನು ಪದವೀಧರರು ನಿರ್ವಹಿಸಬೇಕು. ಕಾನೂನು ಸೇವೆಯನ್ನು ಆಧರಿಸಿದ ವೃತ್ತಿ ಎಂದು ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಕಾಲೇಜಿನ ಮ್ಯಾಗಝೀನ್‌ ಅನಾವರಣಗೊಳಿಸ ಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಅವರ “ಲೀಗಲ್‌ ಲಾಂಗ್ವೇಜ್‌ ಆ್ಯಂಡ್‌ ಜನರಲ್‌ ಇಂಗ್ಲಿಷ್‌’ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಸಂಸ್ಥಾಪಕ ಡಾ| ಡಿ. ವೀರೇಂದ್ರ ಹೆಗ್ಗಡೆ, ನ್ಯಾ| ಮುರಳಿ ಕೃಷ್ಣ, ನ್ಯಾಯವಾದಿ ಉದಯ ಹೊಳ್ಳ, ಪ್ರೊ| ಎ. ರಾಜೇಂದ್ರ ಶೆಟ್ಟಿ, ನ್ಯಾಯವಾದಿ ರೋಹಿತ್‌ ರಾವ್‌ ಅವರನ್ನು ಸಮ್ಮಾನಿಸಲಾಯಿತು.

ಪ್ರಮುಖರಾದ ಡಾ| ದೇವರಾಜ್‌ ಕೆ., ಸುಧಾಕರ ಪೈ, ಸತೀಶ್ಚಂದ್ರ, ಪುರುಷೋತ್ತಮ ಭಟ್‌, ಅರಳ ರಾಜೇಂದ್ರ ಶೆಟ್ಟಿ ಮತ್ತಿತರರಿದ್ದರು.
ಪ್ರಾಂಶುಪಾಲ ಡಾ| ತಾರನಾಥ ಸ್ವಾಗತಿಸಿದರು. ಡಾ| ಸುಬ್ಬಲಕ್ಷ್ಮಿ ಪಿ. ಸಮ್ಮಾನಿತರ ಬಗ್ಗೆ ಮಾಹಿತಿ ನೀಡಿದರು. ಡಾ| ಬಾಲಿಕಾ ವಂದಿಸಿದರು.

ಕಾನೂನು ಶಿಕ್ಷಣ ಇನ್ನಷ್ಟು ಶಕ್ತಿಯುತವಾಗಲಿ
ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮಸ್ಥಳದಲ್ಲಿ ಚತುರ್‌ ದಾನಗಳಿಗೆ ಸುದೀರ್ಘ‌ ಇತಿಹಾಸವಿದ್ದು, ಇದರಲ್ಲಿ ನ್ಯಾಯದಾನವೂ ಒಂದಾಗಿದೆ. ವೇದ ಹಾಗೂ ಉಪನಿಷತ್‌ಗಳು ಮಾನವತೆ, ಧರ್ಮ, ಕಾನೂನು ಪರಿಪಾಲನೆಯನ್ನು ಪ್ರತಿಪಾದಿಸುತ್ತವೆ. ಕಾನೂನು ಶಿಕ್ಷಣ ಇನ್ನಷ್ಟು ಶಕ್ತಿಯುತವಾಗಬೇಕು. ಈಗಿನ ಯುವ ಪೀಳಿಗೆ ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನವಂತರಾಗಬೇಕು. ಸಮಾಜದಲ್ಲಿ ಸ್ಥಾನ, ಅಂತಸ್ತು ಬದಲಾಗುತ್ತಾ ಇದ್ದರೂ ಕಾನೂನು ಬದಲಾಗದು ಎಂದರು.

ಟಾಪ್ ನ್ಯೂಸ್

1-RAGA

Loksabha; ‘ತಪಸ್ಸಿನ ಉದ್ದೇಶ ಉಷ್ಣ ಉತ್ಪತ್ತಿ’ ಎಂದ ರಾಹುಲ್‌ ಗಾಂಧಿಗೆ ಬಿಜೆಪಿ ಲೇವಡಿ

1-raita

Shambhu border; ದಿಲ್ಲಿ ಚಲೋಗೆ ತಡೆ: ರೈಲು ರೋಕೋಗೆ ರೈತರ ನಿರ್ಧಾರ

Vote 2

Election; ಒಂದು ದೇಶ,ಒಂದು ಚುನಾವಣೆ ಜಾರಿ ಯಾವಾಗ? ಏನೆಲ್ಲ ತಿದ್ದುಪಡಿ ಅಗತ್ಯ?

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

rats

Rajasthan; ಇಲಿ ಕಚ್ಚಿದ್ದಕ್ಕೆ 10 ವರ್ಷದ ಬಾಲಕ ಸಾ*ವು: ಆರೋಪ

1-cong

ED, BJP ಕಿರುಕುಳ ಆರೋಪಿಸಿ ಉದ್ಯಮಿ ದಂಪತಿ ನೇಣಿಗೆ ಶರಣು!

Farmer

RBI; ಅಡಮಾನ ರಹಿತ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alvas-virast14

Alvas Virasat: ಜಯ ಘೋಷ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ

Virasat-stactto

Alvas: ವಿರಾಸತ್‌ನಲ್ಲಿ ಭಿನ್ನವಾದ ಶೈಲಿಯ ಹಾಡುಗಳಿಂದ ಮಿಂಚಿದ ಸ್ಟೆಕೆಟೋ ಬ್ಯಾಂಡ್‌ ತಂಡ

Accident-Logo

Mangaluru: ರಸ್ತೆ ಬದಿ ನಿಲ್ಲಿಸಿದ ವಾಹನಗಳಿಗೆ ದ್ವಿಚಕ್ರ ವಾಹನ ಢಿಕ್ಕಿ; ಇಬ್ಬರಿಗೆ ಗಾಯ

Arrest

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Suside-Boy

Mangaluru: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

1-RAGA

Loksabha; ‘ತಪಸ್ಸಿನ ಉದ್ದೇಶ ಉಷ್ಣ ಉತ್ಪತ್ತಿ’ ಎಂದ ರಾಹುಲ್‌ ಗಾಂಧಿಗೆ ಬಿಜೆಪಿ ಲೇವಡಿ

1-raita

Shambhu border; ದಿಲ್ಲಿ ಚಲೋಗೆ ತಡೆ: ರೈಲು ರೋಕೋಗೆ ರೈತರ ನಿರ್ಧಾರ

Vote 2

Election; ಒಂದು ದೇಶ,ಒಂದು ಚುನಾವಣೆ ಜಾರಿ ಯಾವಾಗ? ಏನೆಲ್ಲ ತಿದ್ದುಪಡಿ ಅಗತ್ಯ?

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

rats

Rajasthan; ಇಲಿ ಕಚ್ಚಿದ್ದಕ್ಕೆ 10 ವರ್ಷದ ಬಾಲಕ ಸಾ*ವು: ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.