Golden Jubilee: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1ಲಕ್ಷ ರೂ.ಗೆ ಏರಿಕೆ: ಸಚಿವ ತಂಗಡಗಿ
ನ.1ರಂದು ರಾಜ್ಯೋತ್ಸವ ಪ್ರಶಸ್ತಿ ಜತೆಗೆ ಸುವರ್ಣ ಸಂಭ್ರಮ ಪ್ರಶಸ್ತಿಯೂ ಪ್ರದಾನ
Team Udayavani, Oct 31, 2024, 11:55 PM IST
ಬೆಂಗಳೂರು: ಕರ್ನಾಟಕ ಸಂಭ್ರಮ-50ರ ಸುವರ್ಣ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಸುವರ್ಣ ಮಹೋತ್ಸವದ ಪ್ರಶಸ್ತಿ ಮೊತ್ತವನ್ನು ಸರಕಾರ ಇದೀಗ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ಏರಿಕೆ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷದ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊಡಮಾಡುವ ಕರ್ನಾಟಕ ಸುವರ್ಣ ಸಂಭ್ರಮ ಮಹೋತ್ಸವ ಪ್ರಶಸ್ತಿಗೆ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 50 ಮಹಿಳಾ ಸಾಧಕಿಯರಿಗೆ ಮತ್ತು 50 ಪುರುಷ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಈಗಾಗಲೇ ಘೋಷಣೆ ಮಾಡಿದ್ದು ಪ್ರಶಸ್ತಿ ಮೊತ್ತವನ್ನು 50,000 ಎಂದು ತಿಳಿಸಲಾಗಿತ್ತು ಎಂದಿದ್ದಾರೆ. ಈಗ 1 ಲಕ್ಷ ರೂ.ಗೆ ಏರಿಸಲಾಗಿದೆ. ನ. 1ರಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಜತೆಗೆ ಸುವರ್ಣ ಸಂಭ್ರಮ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತಿದೆ.
ವಿಧಾನಸೌಧ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನ.1ರಂದು ಭಾರೀ ಮಳೆ ಸಾಧ್ಯತೆ
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
Guarantee: ಶಕ್ತಿ ಯೋಜನೆ ಸೇರಿ ಯಾವುದೇ ಗ್ಯಾರಂಟಿಗಳನ್ನೂ ನಿಲ್ಲಿಸಲ್ಲ: ಡಿ.ಕೆ.ಶಿವಕುಮಾರ್
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್ಡಿಕೆ
Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
MUST WATCH
ಹೊಸ ಸೇರ್ಪಡೆ
Heavy Rain: ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ; ಬೆಳ್ತಂಗಡಿಯಲ್ಲಿ ಮನೆ ಕುಸಿತ
Golden Jubilee: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1ಲಕ್ಷ ರೂ.ಗೆ ಏರಿಕೆ: ಸಚಿವ ತಂಗಡಗಿ
Rain Alert: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನ.1ರಂದು ಭಾರೀ ಮಳೆ ಸಾಧ್ಯತೆ
Thokottu: ಮೊಹಮ್ಮದ್ ಸೈಫ್ವಾನ್ ಕೊಲೆ ಆರೋಪಿಗಳು ಖುಲಾಸೆ
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.