ʻದಿ ಕಪಿಲ್ ಶರ್ಮಾ ಶೋʼದಲ್ಲಿ ಗೋಲ್ಡನ್ ಸ್ಟಾರ್ ಭಾಗಿ
Team Udayavani, Feb 9, 2023, 3:26 PM IST
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಬಾಲಿವುಡ್‌ನ ಖ್ಯಾತ ಕಾಮಿಡಿಯನ್ ʻದಿ ಕಪಿಲ್ ಶರ್ಮಾ ಶೋʼ ಖ್ಯಾತಿಯ ಕಪಿಲ್ ಶರ್ಮಾರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಅವರ ಶೋದಲ್ಲಿ ಭಾಗವಹಿಸಿದ್ದಾರೆ.ಕಪಿಲ್ ಶರ್ಮಾ ಅವರನ್ನು ಭೇಟಿಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಗೋಲ್ಡನ್ ಸ್ಟಾರ್ ಆ ಬಗೆಗಿನ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ನನ್ನ ಅತ್ಯಂತ ಇಷ್ಟವಾದ ಶೋದಲ್ಲಿ ನಾನೂ ಭಾಗಿಯಾಗುತ್ತಿರುವುದು ಸಂತಸ ತಂದಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಕಪಿಲ್ ಶರ್ಮಾ ಅವರಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ.
ಈ ಮೊದಲು ಕಿಚ್ಚ ಸುದೀಪ್ ಕೂಡಾ ಕಪಿಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಿಚ್ಚನ ನಂತರ ಈಗ ಗಣೇಶ್ ಕೂಡಾ ಕಪಿಲ್ ಶೋದಲ್ಲಿ ಭಾಗವಹಿಸಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.
ಫೆ.18 ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಆರಂಭವಾಗಲಿದ್ದು ಮಾ.19 ರಂದು ಫೈನಲ್ ನಡೆಯಲಿದೆ. ಈ ಸಲುವಾಗಿ ಗಣೇಶ್ ಕಪಿಲ್ ಜೊತೆ ವೇದಿಕೆ ಏರುತ್ತಿದ್ಧಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
Happy to be part of my favourite show,Thank you @KapilSharmaK9 sir for your love n warmth🤗,Looking forward 😊 pic.twitter.com/rqli1U1eBH
— Ganesh (@Official_Ganesh) February 8, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.