ಕರಾವಳಿಯಲ್ಲಿ ಗುಡುಗು, ಗಾಳಿ ಸಹಿತ ಮಳೆ
Team Udayavani, Apr 14, 2022, 7:05 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆಯ ಬಳಿಕ ಗುಡುಗು ಮತ್ತು ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಹಲವು ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.ಮಂಗಳೂರು ನಗರದ ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಕಾಣಿಸಿಕೊಂಡಿತ್ತು.ಪುತ್ತೂರು ತಾಲೂಕಿನ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆ ಬಂದಿದೆ.
ಬೆಳ್ತಂಗಡಿ ತಾಲೂಕಿನೆಲ್ಲೆಡೆ ಗುಡುಗು, ಮಿಂಚು ಸಹಿತ ಭಾರೀ ಗಾಳಿ-ಮಳೆಯಾಗಿದೆ. ಮಂಗಳೂರಿನಲ್ಲಿ ಗುಡುಗು ಮಿಂಚು ಹಾಗೂ ಬಿರುಸಾದ ಗಾಳಿಯೊಂದಿಗೆ ಮಳೆ ಬಂದಿದೆ.ಬಜಪೆ, ಕಟೀಲು, ಮೂಡುಬಿದಿರೆ, ಸುರತ್ಕಲ್, ಮೂಲ್ಕಿ ಪರಿಸರದಲ್ಲಿ ಕೂಡ ಉತ್ತಮ ಮಳೆಯಾಗಿದೆ.
ಸಿಡಿಲು ಮತ್ತು ಬಲವಾದ ಗಾಳಿ ಬೀಸಿದ ಪರಿಣಾಮ ಮಂಗಳೂರು ನಗರ ಸಹಿತ ಜಿಲ್ಲೆಯ ವಿವಿಧ ಭಾಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
ಉಡುಪಿ ಜಿಲ್ಲೆ: ಉತ್ತಮ ಮಳೆ
ಉಡುಪಿ ಜಿಲ್ಲೆಯಲ್ಲಿಯೂ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಉಡುಪಿ ಮತ್ತು ಕುಂದಾಪುರ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಯಿತು.
ಪಡುಬಿದ್ರಿ, ಶಿರ್ವ, ಉಚ್ಚಿಲ, ಕಾಪು, ಕಟಪಾಡಿ, ಉಡುಪಿ, ಮಣಿಪಾಲ ಪರಿಸರದಲ್ಲಿ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಒಂದೆರಡು ದಿನ ಗುಡುಗು ಸಹಿತ ಉತ್ತಮ ಮಳೆ ಬರುವ ಸಾಧ್ಯತೆ ಇದೆ.
ವೇಣೂರು: ಹೊತ್ತಿ ಉರಿದ ತೆಂಗಿನ ಮರ
ವೇಣೂರು: ಇಲ್ಲಿನ ಪರಿಸರದಲ್ಲಿ ಸಿಡಿಲು ಸಹಿತ ಉತ್ತಮ ಮಳೆ ಯಾಗಿದೆ. ಅಳದಂಗಡಿಯ ಪಿಲ್ಯ ಗ್ರಾಮದ ಶ್ರೀಧರ ಆಚಾರ್ಯರಿಗೆ ಸೇರಿದ ತೆಂಗಿನಮರಕ್ಕೆ ಬುಧವಾರ ಸಂಜೆ ಸಿಡಿಲು ಬಡಿದಿದ್ದು, ಮರ ಹೊತ್ತಿ ಉರಿದಿದೆ. ಇದರ ವೀಡಿಯೋ ಭಾರೀ ವೈರಲ್ ಆಗಿದೆ.
ವೇಣೂರು: ಇಲ್ಲಿನ ಪರಿಸರದಲ್ಲಿ ಸಿಡಿಲು ಸಹಿತ ಉತ್ತಮ ಮಳೆ ಯಾಗಿದೆ. ಅಳದಂಗಡಿಯ ಪಿಲ್ಯ ಗ್ರಾಮದ ಶ್ರೀಧರ ಆಚಾರ್ಯರಿಗೆ ಸೇರಿದ ತೆಂಗಿನಮರಕ್ಕೆ ಬುಧವಾರ ಸಂಜೆ ಸಿಡಿಲು ಬಡಿದಿದ್ದು, ಮರ ಹೊತ್ತಿ ಉರಿದಿದೆ. ಇದರ ವೀಡಿಯೋ ಭಾರೀ ವೈರಲ್ ಆಗಿದೆ.
ಬಂಟ್ವಾಳ: ಸಿಡಿಲಿನಿಂದ ಮನೆಗಳಿಗೆ ಹಾನಿ
ಬಂಟ್ವಾಳ: ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಸಿಡಿಲಿನ ತೀವ್ರತೆಯ ಪರಿಣಾಮ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.
ಮಾಣಿ ಗ್ರಾಮದ ಶಂಭುಗ ಶೀನ ಮೂಲ್ಯ ಅವರ ವಿದ್ಯುತ್ ಮೀಟರ್‌ಗೆ ಸಿಡಿಲು ಬಡಿದು ಹಾನಿಯಾಗಿದೆ. ಮಂಚಿ ಗ್ರಾಮದ ಕೇಪಳಗುರಿ ಜಯಶ್ರೀ ಆಚಾರಿ ಅವರ ಮನೆಯ ಗೋಡೆ ಹಾಗೂ ಮೇಲ್ಛಾವಣಿಯ ಹಂಚಿಗೆ ಹಾನಿಯಾಗಿದ್ದು, ಮನೆ ಕುಸಿಯುವ ಭೀತಿ ಎದುರಾಗಿದೆ. ಕುಕ್ಕಾಜೆಯಲ್ಲಿ ಆಯಿಷಾ ಅವರ ಮನೆಗೆ ಸಿಡಿಲು ಬಡಿದು ಗೋಡೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ ಎಂದು ತಾಲೂಕು ಕಚೇರಿ ಮಾಹಿತಿ ನೀಡಿದೆ.
ಪುತ್ತೂರಿನಲ್ಲಿ ದಿಢೀರ್ ಗಾಳಿ-ಮಳೆ
ಜಾತ್ರೆ ಗದ್ದೆಯಲ್ಲಿನ ಅಂಗಡಿಗಳಿಗೆ ಹಾನಿ
ಪುತ್ತೂರು: ದಿಢೀರ್ ಆಗಿ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿದ ಪರಿಣಾಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆ ಗದ್ದೆಯಲ್ಲಿನ ಅಂಗಡಿಗಳ ಶೀಟು, ಟರ್ಪಾಲು ಗಾಳಿಗೆ ಹಾರಿ ಹೋದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ದೇವಾಲಯದ ಗೋಪುರಕ್ಕೆ ಅಳ ವಡಿಸಿದ ವಿದ್ಯುತ್ ಪರಿಕರಕ್ಕೂ ಹಾನಿಯಾಗಿದೆ. ಶ್ರೀ ಶಿವಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯ ಬೇಕಿದ್ದ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಮುನ್ನೆಚ್ಚರಿಕೆ ಕ್ರಮ ವಾಗಿ ತಾತ್ಕಾಲಿಕವಾಗಿ ರದ್ದುಪಡಿಸ ಲಾಯಿತು. ಗ್ರೀನ್ ರೂಂನಲ್ಲಿದ್ದ ಕಲಾವಿದರನ್ನು ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು. ಪೇಟೆ ಸವಾರಿಗೂ ಮಳೆಯಿಂದ ಕೊಂಚ ಅಡಚಣೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.