Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

ಲ್ಯಾರಿ ಪೆಜ್‌ ಮತ್ತು ಸೆರ್‌ಗೆ ಬ್ರಿನ್‌ಗೆ ಈ ಹೊಸ ಆಲೋಚನೆ ತಲೆಹೊಕ್ಕಿತ್ತು.

Team Udayavani, Sep 28, 2024, 3:37 PM IST

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

ಬದುಕು ನಡೆಸಲು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿತ್ಯಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ, ಪ್ರಶ್ನೆಗಳಿಗೆ ನಿಧಾನವಾದರೂ ಉತ್ತರವನ್ನು ಹುಡುಕಿಕೊಂಡು, ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಮೊದಲೆಲ್ಲ ಜೀವನದ ವಿವಿಧ ಹಂತಗಳಲ್ಲಿ ಎದುರಾಗುವ ಪ್ರಶ್ನೆಗಳಿಗೆ ಹಿರಿಯರಿಂದಲೂ, ಗುರು ಸ್ಥಾನದಲ್ಲಿರುವವರ ಬಳಿಯೋ ಮಾತನಾಡಿ, ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವು. ಆದರೆ ಕಳೆದ ಕೆಲವು ವರ್ಷಗಳಿಂದ ಉತ್ತರ ಕೊಡುವ ಸ್ಥಾನವನ್ನು ಗೂಗಲ್‌ ಎನ್ನುವ 3 (ಇಂಗ್ಲಿಷ್‌ನಲ್ಲಿ 6) ಅಕ್ಷರ ತುಂಬಿಬಿಟ್ಟಿದೆ. ಮಾಹಿತಿ ನೀಡುವ ಸೇವೆಯಾಗಿ ಆರಂಭವಾದ ಗೂಗಲ್‌, ಬೆಳೆಯುತ್ತಿರುವ ಇಂಟರ್‌ನೆಟ್‌ ಯುಗದಲ್ಲಿ ಮನುಷ್ಯನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಇಂದು ಪ್ರತೀ ಪ್ರಶ್ನೆಗೂ ಗೂಗಲ್‌ ಉತ್ತರಿಸುತ್ತದೆ ಎಂಬ ಭಾವ ಬೆಳೆದಿದೆ. ಇಂತಹ ಗೂಗಲ್‌ ನಮ್ಮೆಲ್ಲರ ಜೀವನದಲ್ಲಿ ಬಂದು 25 ವರ್ಷಗಳ ಸಂದಿವೆ. ಈ ನಿಟ್ಟಿನಲ್ಲಿ ಗೂಗಲ್‌ ಒಳಗಿನ ಬದುಕನ್ನು ಇಲ್ಲಿ ಮಾಹಿತಿ ರೂಪದಲ್ಲಿ ನೀಡಲಾಗಿದೆ.

ಕಾಲೇಜಿನಲ್ಲಿ ಸಂಶೋಧನ ಪ್ರಾಜೆಕ್ಟ್ ಗಾಗಿ ಇಬ್ಬರು ಸ್ನೇಹಿತ ವಿದ್ಯಾರ್ಥಿಗಳು BACKRUB ಎನ್ನುವ ಯೋಜನೆಯೊಂದನ್ನು ರೂಪಿಸುತ್ತಾರೆ. ತದನಂತರ ಈ ಯೋಜನೆಯ ದೂರದೃಷ್ಟಿತ್ವದ ಮಹತ್ವವನ್ನು ಅರಿತ ಅವರು ಇನ್ನಷ್ಟು ಕೆಲಸ ಮಾಡಿ ಅದನ್ನು GOOGOL ಎಂದು ಮರುನಾಮಕರಣ ಮಾಡಿದರು. ಅದುವೇ ಇಂದಿನ GOOGLE ಎಂದಾಗಿ ನಮ್ಮ ಕೈಯಲ್ಲಿ ನಿತ್ಯ ಓಡಾಡುತ್ತಿರುವುದು. 1998ರಲ್ಲಿ ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾನಿಲಯದ ಕಂಪ್ಯೂಟರ್‌ ಸೈನ್ಸ್‌ನ ವಿಭಾಗದಲ್ಲಿ ಕಲಿಯುವಾಗ ಲ್ಯಾರಿ ಪೆಜ್‌ ಮತ್ತು ಸೆರ್‌ಗೆ ಬ್ರಿನ್‌ಗೆ ಈ ಹೊಸ ಆಲೋಚನೆ ತಲೆಹೊಕ್ಕಿತ್ತು.

ಅಂದು ಸಣ್ಣ ಕಾರ್‌ ಗ್ಯಾರೇಜ್‌ನಲ್ಲಿ ಪ್ರಾರಂಭವಾದ ಗೂಗಲ್‌ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಆರಂಭದಲ್ಲಿ ಗೂಗಲ್‌ ಇಷ್ಟರ ಮಟ್ಟಿಗೆ ಸಾರ್ವಭೌಮತ್ವ ಸಾಧಿಸುತ್ತದೆ ಎಂದು ಅವರಿಬ್ಬರು ಊಹಿಸಿರಲಿಕ್ಕಿಲ್ಲ. ಇಂದು ಗೂಗಲ್‌ ಕ್ಯಾಲಿಫೋರ್ನಿಯಾದ ಮೌಂಟ್‌ವಿವ್‌ನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ.

ನಿರಂತರ ಪ್ರಗತಿ
ಜೆಫ್ ಬೆಜೊಸ್‌ ಅವರಂತಹ ಉದ್ಯಮಿಗಳಿಂದ ಹೇರಳವಾದ ಹೂಡಿಕೆಗಳು ಬರುತ್ತಿರುವುದನ್ನು ಗಮನಿಸಿದ ಗೂಗಲ್‌ ಸಂಸ್ಥೆ , ಹಂತ ಹಂತವಾಗಿ ತಂತ್ರಜ್ಞಾನದಲ್ಲಿ ಬದಲಾವಣೆಗಳನ್ನು ರೂಪಿಸತೊಡಗಿತು. ಆಂತರಿಕ ಸಂವಹನದ ಉಪಯೋಗಕ್ಕೆ ಇಮೇಲ್‌ ಮೂಲಕ ಸಂಸ್ಥೆಯು ನಿಧಾನಗತಿಯಲ್ಲಿ ಪ್ರಾರಂಭವಾಯಿತು. ಅನಂತರ 2005ರಲ್ಲಿ ಗೂಗಲ್‌ ಮ್ಯಾಪ್‌ ಪ್ರಾರಂಭ, 1.65 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಯುಟ್ಯೂಬ್‌ ಖರೀದಿಯಾಯಿತು. ಹಂತ ಹಂತವಾಗಿ ಆಂಡ್ರ್ಯಾಯ್ಡ್ ತಂತ್ರಜ್ಞಾನ ಮತ್ತು ನಿರ್ದಿಷ್ಟ ಜಾಹೀರಾತು ಬಳಕೆದಾರರರಿಗೆ ನೀಡಬೇಕೆಂಬ ಉದ್ದೇಶದಿಂದ ಗೂಗಲ್‌ ಡಬಲ್‌ ಕ್ಲಿಕ್‌ ಸಾಫ್ಟ್ ವೇರ್ ಖರೀದಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುವ ಸರ್ಚ್‌ ಎಂಜಿನ್‌ “ಕ್ರೋಮ್‌’ ಸಾಫ್ಟ್ ವೇರ್ ಜಾರಿಗೆ ಬಂದಿತು. ‌

ಕೇವಲ ಸಾಫ್ಟ್ ವೇರ್ ಗಳಿಗೆ ಮಹತ್ವ ನೀಡದೆ ಮಾರುಕಟ್ಟೆಗೆ ಗೂಗಲ್‌ ಪಿಕ್ಸಲ್‌ ಮೊಬೈಲ್‌ ಮತ್ತು ಎಐ ಕಾರುಗಳನ್ನು ಸಹ ಬಿಡುಗಡೆ ಮಾಡಿತು. ಬಳಕೆದಾರನಿಗೆ ತನ್ನ ಧ್ವನಿಯಿಂದ ಮಾಹಿತಿ ತಿಳಿಯಲು ಗೂಗಲ್‌ ಅಸಿಸ್ಟಂಟ್‌ ಸಾಫ್ಟ್ ವೇರ್ ಸೇರಿದಂತೆ ಹಲವು ಬದಲಾವಣೆಗಳನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸುತ್ತಾ ಬಂದಿದೆ. ‌

ಗೂಗಲ್‌ ಕಾರ್ಯವೈಖರಿ
ಜಗತ್ತಿನಲ್ಲಿ ನಡೆಯುವ ಇಂಚಿಂಚು ಮಾಹಿತಿಯನ್ನು ಒಂದೇ ಸೂರಿನಡಿ ಬಳಕೆದಾರನಿಗೆ ತಲುಪಿಸುವ ನಿಟ್ಟಿನಲ್ಲಿ ಗೂಗಲ್‌ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಗೂಗಲ್‌ ಸಂಸ್ಥೆಯಲ್ಲಿ ವಿಶ್ವದಾದ್ಯಂತ 1,82,502 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಶೇ.240ರಷ್ಟು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯು ಹೇಳುತ್ತದೆ. ಕನಿಷ್ಟ 10 ಸಾವಿರದಿಂದ ಗರಿಷ್ಟ 50 ಸಾವಿರ ಭಾರತೀಯ ಉದ್ಯೋಗಿಗಳು ಸದ್ಯ ಗೂಗಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಶೇ.30ರಷ್ಟು ಭಾರತೀಯರ ಉದ್ಯೋಗ ಪಾಲುದಾರಿಕೆಯಿದೆ. ಪ್ರತೀ ವರ್ಷ 400ರಿಂದ 500 ವಿದ್ಯಾರ್ಥಿಗಳನ್ನು ಭಾರತದಿಂದ ಗೂಗಲ್‌ ಸಂಸ್ಥೆಯು ಆಯ್ಕೆ ಮಾಡಿಕೊಳ್ಳುತ್ತಿದೆ, ಸರಾಸರಿ 40 ರಿಂದ 50 ಮಂದಿ ಪ್ರತೀ ತಿಂಗಳು ಆಯ್ಕೆಯಾಗುತ್ತಾರೆ.

ಭಾರತದವರನ್ನೇ ಹೆಚ್ಚು ಹೊಂದಿರುವ ಗೂಗಲ್‌ನ ಈಗಿನ ಮುಖ್ಯಸ್ಥ ಸುಂದರ್‌ ಪಿಚೈ ಸಹ ಭಾರತದವರೇ ಎಂಬುದು ದೇಶಕ್ಕೆ ಹೆಮ್ಮೆ. ಮೂಲತಃ ತಮಿಳುನಾಡಿನ ಮಧುರೈ ಮೂಲದವರಾದ ಸುಂದರ್‌ ಪಿಚೈ ಅವರು 2015ರಿಂದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಐಟಿ ಖರಗ್‌ಪುರ್‌ನಲ್ಲಿ ತಮ್ಮ ಎಂಜಿನಿಯರಿಂಗ್‌ ಶಿಕ್ಷಣದ ಅನಂತರ ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್‌ ವಿ.ವಿ ತೆರಳಿ ಅನಂತರ 2005ರಲ್ಲಿ ಗೂಗಲ್‌ ಸಂಸ್ಥೆಯಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದರು.

ಗೂಗಲ್‌ ಸೇವೆಗಳು
ಗೂಗಲ್‌ ಸರ್ಚ್‌ ಎಂಜಿನ್‌ ಕೇವಲ ಮಾಹಿತಿ ಪೂರೈಸುವ ವಿಧಾನಕ್ಕೆ ಸೀಮಿತವಾಗದೆ, ಯ್ಯೂಟೂಬ್‌, ಇಮೇಲ್‌, ಸ್ಥಳ ಹಾಗೂ ದಾರಿ ಮಾಹಿತಿಯನ್ನು ತಿಳಿಯಲು ಗೂಗಲ್‌ ಮ್ಯಾಪ್‌, ಬ್ಯಾಂಕಿಂಗ್‌ ವ್ಯವಹಾರಕ್ಕೆ ಜೀಪೇ, ದಾಖಲೆಗಳನ್ನು ಸಂಗ್ರಹಿಸಲು ಗೂಗಲ್‌ ಡ್ರೈವ್‌, ಗೂಗಲ್‌ ಕ್ಲಾಸ್‌ರೂಮ್‌, ಗೂಗಲ್‌ ಪ್ಲೇಸ್ಟೋರ್‌ ಸೇರಿದಂತೆ ಒಟ್ಟು 271 ಸೇವೆಗಳನ್ನು ಸದ್ಯ ಗೂಗಲ್‌ ಒದಗಿಸುತ್ತಿದೆ.

ಗೂಗಲ್‌ ಡೂಡಲ್‌
ನಿರಂತರವಾಗಿ ಪ್ರತೀ ಹಂತದಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಬೆಳೆದು ಬಳಕೆದಾರರಿಗೆ ಸುಲಭ ವಿಧಾನದಿಂದ ಹತ್ತಿರವಾದ ಗೂಗಲ್‌ ತನ್ನ ಇನ್ನೊಂದು ಕಲಾತ್ಮಕ ವೈಶಿಷ್ಟ್ಯವನ್ನು ಹೊರತಂದಿತ್ತು ಡೂಡಲ್‌ ಮೂಲಕ. ಯಾವುದೇ ದೇಶದ ಮಿತಿಯಿಲ್ಲದೇ, ಜಗತ್ತಿನಾದ್ಯಂತ ಶಿಕ್ಷಣ, ವಿಜ್ಞಾನ ತಂತ್ರಜ್ಞಾನ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರನ್ನು ಅವರ ಜನ್ಮದಿನವನ್ನು ಗೌರವಿಸುವ ಉದ್ದೇಶದಿಂದ, ಅವರ ವ್ಯಕ್ತಿತ್ವದ ಕುರಿತು ಜಗತ್ತಿಗೆ ತಿಳಿಸುವುದು ಹಾಗೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಗಳನ್ನು  ಆಚರಿಸುವ ವಿಶೇಷ ದಿನ ಮತ್ತು ಹಬ್ಬಗಳನ್ನು ಸೂಚಿಸುವ ಬಣ್ಣದ, ಚಿತ್ರಗಳ ಕಲಾತ್ಮಕತೆಯನ್ನು ತನ್ನ “ಗೂಗಲ್‌’ ಹೆಸರಿನೊಂದಿಗೆ ಸೇರಿಗೆ ಸರ್ಚ್‌ ಎಂಜಿನ್‌ನಲ್ಲಿ ಪ್ರಸ್ತುತ ಪಡಿಸುವ ಯೋಜನೆಯನ್ನು “ಗೂಗಲ್‌ ಡೂಡಲ್‌’ ಆಗಿ ಪರಿಚಯಿಸಿ ಜನರ ಆಕರ್ಷಣೆಗೆ ಕಾರಣವಾಯಿತು.

ಬಿಲಿಯನ್‌ ಬಳಕೆದಾರರು
ಸರ್ಚ್‌ ಎಂಜಿನ್‌ ಮಾರ್ಕೆಟಿಂಗ್‌ ಸೂಚ್ಯಂಕ 2024ರ ಪ್ರಕಾರ ವಿಶ್ವದಾದ್ಯಂತ ಪ್ರತೀ ದಿನ 8.5 ಬಿಲಿಯನ್‌ನಷ್ಟು ಬಳಕೆದಾರರು ಗೂಗಲ್‌ ಸರ್ಚ್‌ ಎಂಜಿನ್‌ ಬಳಸಿದರೆ, 1 ಬಿಲಿಯನ್‌ನಷ್ಟು ಯ್ಯೂಟೂಬ್‌, ಇಮೇಲ್‌ ಮತ್ತು ಗೂಗಲ್‌ ಮ್ಯಾಪ್‌ ಬಳಸುತ್ತಾರೆ. ಪ್ರತೀ ಸೆಕೆಂಡ್‌ಗೆ 99 ಸಾವಿರದಷ್ಟು ಜನರು ಮಾಹಿತಿಗಾಗಿ ಗೂಗಲ್‌ ಬಳಸುತ್ತಿದ್ದಾರೆ. ಪ್ರತೀ ವ್ಯಕ್ತಿಯೂ ದಿನಕ್ಕೆ ಕನಿಷ್ಟ 4 ರಿಂದ 5 ಬಾರಿ ಮಾಹಿತಿಗಾಗಿ ಗೂಗಲ್‌ ಬಳಕೆ ಮಾಡುತ್ತಾನೆ ಎಂದು ವರದಿ ತಿಳಿಸುತ್ತದೆ.

ಗೂಗಲ್‌ ಬಳಕೆದಾರರ ಟಾಪ್‌ 5 ದೇಶಗಳು (2023ರ ಪ್ರಕಾರ)
ದೇಶ ಬಳಕೆದಾರರು (ಬಿಲಿಯನ್‌ಗಳಲ್ಲಿ )
ಅಮೆರಿಕ 18
ಭಾರತ 12
ಜಪಾನ್‌ 6
ಇಂಡೋನೆಷ್ಯಾ 5
ಬ್ರೆಜಿಲ್‌ 3

ಗೂಗಲ್‌ ಇಂದು ಆಧುನಿಕ ಗುರು ಆಗಿ ನಮ್ಮ ಮುಂದಿದೆ. ದಿನಕಳೆದಂತೆ ಇದರ ಬಳಕೆದಾರರ ಸಂಖ್ಯೆಯು ಏರಿಕೆ ಕಾಣುತ್ತಿದೆ. ಪ್ರತಿಯೊಬ್ಬನು ನಿತ್ಯ ಗೂಗಲ್‌ನ ಮೇಲೆ ಅವಲಂಬಿತರಾಗಿದ್ದೇವೆ. ಗೂಗಲ್‌ ತನ್ನ ವಿಸ್ತಾರವನ್ನು ದೊಡ್ಡದಾಗಿಸಿಕೊಳ್ಳುತ್ತಿದೆ. ಮನುಷ್ಯ ತನ್ನ ವೈಯಕ್ತಿಕ ಜ್ಞಾನವನ್ನು ಹೆಚ್ಚಿಸಿಕೊಂಡು, ಗೂಗಲ್‌ನ ಜ್ಞಾನವನ್ನು ಬೆಳೆಸುವಂತಾಗಲಿ.

ಮಾಹಿತಿ: ವಿಜಯಕುಮಾರ್‌ ಹಿರೇಮಠ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.