Dengue ನಿಯಂತ್ರಣಕ್ಕೆ ಸರಕಾರದ ಬಳಿ ದುಡ್ಡಿಲ್ಲ: ಅಶೋಕ್
ಸರಕಾರ ಐಸಿಯುನಲ್ಲಿದೆ; ಬಹಳ ದಿನ ಉಳಿಯದು: ವಿರೋಧ ಪಕ್ಷ ನಾಯಕ
Team Udayavani, Jul 8, 2024, 7:34 AM IST
ಬೆಂಗಳೂರು: ಬೆಲೆ ಏರಿಕೆ ಮಾಡಿ ಲೂಟಿ ಹೊಡೆಯುತ್ತಿರುವ ಸರಕಾರದ ಬಳಿ ಡೆಂಗ್ಯೂ ನಿಯಂತ್ರಣ, ಸ್ವತ್ಛತೆ ಕಾಪಾಡಲು ದುಡ್ಡಿಲ್ಲ. ಹಗರಣಗಳು ಸರಕಾರಕ್ಕೆ ಕಂಟಕವಾಗಿವೆ. ಈ ಸರಕಾರ ಐಸಿಯುನಲ್ಲಿದೆ. ಬಹಳ ದಿನ ಉಳಿಯುವುದಿಲ್ಲ. ಸರಕಾರ ಬೇಗ ತೊಲಗಲಿ ಎಂದು ಜನ ಕಾಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ರವಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡೆಂಗ್ಯೂ ಜ್ವರ ಬಂದು ಪ್ರತಿನಿತ್ಯ ಜನ ಸಾಯುತ್ತಿದ್ದಾರೆ. ತುಮಕೂರಿನಲ್ಲಿ ಕಾಲರಾದಿಂದ ಮೃತಪಟ್ಟಿದ್ದಾರೆ. ಹಲವಾರು ಕಾಯಿಲೆಗಳು ಜನರ ಪ್ರಾಣ ತೆಗೆದುಕೊಳ್ಳುತ್ತಿದೆ. ಬೆಲೆ ಏರಿಕೆ ಮಾಡಲು ಇವರ ಬಳಿ ಐಡಿಯಾಗಳಿವೆ. ರಕ್ತ ಪರೀಕ್ಷೆ ಮಾಡಲು 600-800 ರೂ. ಆಗುತ್ತದೆ. ಅದನ್ನು ಕೊಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಡೆಂಗ್ಯೂ ನಿಯಂತ್ರಣಕ್ಕೆ ಕಾರ್ಯಪಡೆ ಮಾಡಿಲ್ಲ, ವಿಶೇಷ ವಾರ್ಡ್ ಇಲ್ಲ, ಸ್ವತ್ಛತೆಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಉಚಿತ ಪರೀಕ್ಷೆ, ಚಿಕಿತ್ಸೆ, ಔಷಧ ಇಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯ ಸರಕಾರ ಐಸಿಯುನಲ್ಲಿದೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಸರಕಾರಕ್ಕೆ ಕಂಟಕವಾಗಿವೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.
ಪ್ರಯಾಣ ದರವನ್ನೂ ಏರಿಸುತ್ತಾರೆ
ರಾಜ್ಯದಲ್ಲಿ ದಿನನಿತ್ಯ ಬೆಲೆ ಏರಿಕೆಯಿಂದ ಬಡವರು ಬದುಕುವಂತಹ ಸ್ಥಿತಿಯಲ್ಲೇ ಇಲ್ಲ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ತರಕಾರಿಯಿಂದ ಹಿಡಿದು ಪ್ರತಿಯೊಂದರ ದರ ಏರಿಕೆ ಆಗಿದೆ. ಹಾಲಿನ ದರವನ್ನೂ ಜಾಸ್ತಿ ಮಾಡಿದ್ದಾರೆ. ಸದ್ಯದಲ್ಲೇ ಅಬಕಾರಿ ದರ ಮತ್ತು ಬಸ್ ಪ್ರಯಾಣ ದರ ಹೆಚ್ಚಿಸುವುದಕ್ಕೂ ಯೋಜನೆ ಸಿದ್ಧ ಮಾಡಿಕೊಟ್ಟುಕೊಂಡಿದ್ದಾರೆ ಎಂದು ಅಶೋಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.