Government Order: ಪೊಲೀಸರಿಗೆ ಅರ್ಧ ಕೋಟಿ ರೂ. ಜೀವವಿಮೆ! ವಿಮಾ ಮೊತ್ತ ಇಲಾಖೆಯಿಂದಲೇ ಪಾವತಿ

20 ಲಕ್ಷ ದಿಂದ 50 ಲಕ್ಷರೂ.ಗೆ ವಿಮಾ ಮೊತ್ತ ಏರಿಸಿದ ರಾಜ್ಯ ಸರಕಾರ, ಇಲಾಖೆಯ 93,449 ಅಧಿಕಾರಿ, ಸಿಬಂದಿಗೆ ಅನುಕೂಲ

Team Udayavani, Sep 26, 2024, 7:10 AM IST

Police

 

ಚಿಕ್ಕಬಳ್ಳಾಪುರ: ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಆಕಸ್ಮಿಕವಾಗಿ ಅಪಘಾತಕ್ಕೀಡಾದ ಅಥವಾ ಮೃತಪಡುವ ಆರಕ್ಷಕ ಅಧಿಕಾರಿ, ಸಿಬಂದಿಯ ಕುಟುಂಬಸ್ಥರಿಗೆ ರಾಜ್ಯ ಸರಕಾರ ಜೀವ ವಿಮಾ ಮೊತ್ತವನ್ನು 20 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಏರಿಸುವ ಮಹತ್ವದ ಆದೇಶವನ್ನು ಹೊರಡಿಸಿದೆ.

ಫಾಲೋಯರ್‌ ಹುದ್ದೆಯಿಂದ ಮಹಾ ನಿರ್ದೇಶಕರ ಹಾಗೂ ಆರಕ್ಷಕ ನಿರೀಕ್ಷಕರ ಹುದ್ದೆವರೆಗೂ ಈ ಜೀವ ವಿಮಾ ಸೌಲಭ್ಯ ಅನ್ವಯ ಆಗಲಿದೆ. ರಾಜ್ಯದಲ್ಲಿ ಒಟ್ಟು 93,449 ಅಧಿಕಾರಿ, ಸಿಬಂದಿಗೆ ಅನ್ವಯವಾಗಲಿದೆ. ಸರಕಾರದ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎನ್‌. ವನಜಾ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇದರ ಮತ್ತೊಂದು ವಿಶೇಷವೆಂದರೆ, ಈ ಯೋಜನೆಯನ್ನು ವಿಮಾ ಕಂಪೆನಿಗೆ ವಹಿಸದೆ ಆಕಸ್ಮಿಕ ಅಥವಾ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಪೊಲೀಸ್‌ ಇಲಾಖೆ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಪಾವತಿಸಲು ಸರಕಾರ ಸೂಚಿಸಿದೆ.

ಮನೋಸ್ಥೆರ್ಯ ಹೆಚ್ಚಿಸಲು ಈ ಕ್ರಮ
ಪೊಲೀಸ್‌ ಅಧಿಕಾರಿ, ಸಿಬಂದಿ ತಮ್ಮ ಪ್ರಾಣದ ಹಂಗು ತೊರೆದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಹಾಗೂ ಕರ್ತವ್ಯ ನಿರತ ಸಿಬಂದಿ/ಅಧಿಕಾರಿಗಳ ಮತ್ತು ಅವರ ಕುಟುಂಬವರ ಏಳಿಗೆಗೆ ಇಲಾಖೆಯು ಮೊದಲ ಆದ್ಯತೆ ನೀಡಬೇಕಿದೆ. ಸಿಬಂದಿ, ಅಧಿಕಾರಿಗಳ ಮತ್ತು ಅವರ ಕುಟುಂಬದವರ ಮನೋಸ್ಥೈರ್ಯವನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕರ್ತವ್ಯ ನಿರೀಕ್ಷಿಸಬಹುದೆಂದು ಹೇಳಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. 2023ರ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಗುಂಪು ವಿಮಾ ಮೊತ್ತವನ್ನು ಏರಿಸುವುದಾಗಿ ಘೋಷಿಸಿದ್ದರು.

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

1-ttt

Karnataka; ರಾಜ್ಯ ಟೆನಿಸ್‌ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

1-team

Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್‌  ಇಂದಿನಿಂದ

MONEY (2)

Minimum wages; ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ

online

400 crores ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ ವಂಚನೆ ಪತ್ತೆ

robbers

Leopard cage; ಚಿರತೆ ಬೋನಿನಲ್ಲಿಟ್ಟಿದ್ದ ಮೇಕೆ ಕದ್ದೊಯ್ದ ಖದೀಮರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY-Vijayendra

CM: ಸಿದ್ದುಗೆ ಮಾದರಿ ಕೇಜ್ರಿವಾಲೋ, ರಾಮಕೃಷ್ಣ ಹೆಗಡೆಯೋ?: ಬಿ.ವೈ.ವಿಜಯೇಂದ್ರ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

CID

Corruption Allegation: ಭೋವಿ ನಿಗಮ ಅಕ್ರಮ: ಲಂಚ ಪಡೆದ ತನಿಖಾಧಿಕಾರಿ ಅಮಾನತು

R.Ashok

MUDA Scam: ಸಿದ್ದರಾಮಯ್ಯಗೆ ಈಗ ಕಳ್ಳನ ಮನಸ್ಸು: ವಿಪಕ್ಷ ನಾಯಕ ಆರ್‌.ಅಶೋಕ್‌

Rain

Rain Alert: ಉಡುಪಿ, ಉತ್ತರ ಕನ್ನಡ ಸೇರಿ 6 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

1-ttt

Karnataka; ರಾಜ್ಯ ಟೆನಿಸ್‌ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

1-team

Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್‌  ಇಂದಿನಿಂದ

MONEY (2)

Minimum wages; ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.