ಮಕ್ಕಳನ್ನು ಆಕರ್ಷಿಸುವ ಶತಮಾನ ಪೂರೈಸಿದ ಸರ್ಕಾರಿ ಶಾಲೆ
ಗಮನ ಸೆಳೆಯುವ ಉದ್ಯಾನವನದೊಂದಿಗೆ ಉತ್ತಮ ಪರಿಸರ ಇಲ್ಲಿದೆ ; ವಿವಿಧ ಬಗೆಯ ಗಿಡ-ಮರಗಳು ಶಾಲೆಯ ಅಂದ ಇನ್ನಷ್ಟು ಹೆಚ್ಚಿಸಿವೆ
Team Udayavani, Jun 3, 2022, 2:25 PM IST
ಲೋಕಾಪುರ: ಶತಮಾನ ಪೂರೈಸಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಉದ್ಯಾನವನ ಜತೆಗೆ ಉತ್ತಮ ಪರಿಸರ ಹೊಂದುವುದರೊಂದಿಗೆ ಅಂದ ಹೆಚ್ಚಿಸಿಕೊಂಡಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ.
ಶಾಲೆ ಆವರಣದಲ್ಲಿ ಬಾದಾಮ, ರುದ್ರಾಕ್ಷಿ, ಸಂಕೇಶ್ವರ ಗಿಡಗಳು, ಬೇವಿನಮರ, ಟೆಂಗಿನಮರ, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಗಿಡಗಳು ಶಾಲಾ ಆವರಣದ ಅಂದ ಹೆಚ್ಚಿಸಿವೆ.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 500 ಲೀಟರ್ ಸಂಗ್ರಹ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಶಾಲಾ ಆವರಣದಲ್ಲಿ ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ.
ಶಾಲೆಗೆ ದೇಣಿಗೆ: ಹಲವು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತ ಹಲವಾರು ಹಳೆಯ ವಿದ್ಯಾರ್ಥಿಗಳು ದೇಣಿಗೆ ನೀಡಿ ಮುಂದೆ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.
ಇಲ್ಲಿ ಕಲಿಯುತ್ತಿದ್ದಾರೆ 182 ಮಕ್ಕಳು: ಪ್ರಭಾರಿ ಮುಖ್ಯಶಿಕ್ಷಕ ಎಚ್.ಎಫ್. ಖವಾಸ್ತ, ಶಿಕ್ಷಕರಾದ ಎಸ್.ಎಂ. ಗೋಲಶೆಟ್ಟಿ, ಬಿ.ಆರ್. ಮಂಟೂರ, ಜೆ.ಆರ್. ಪಟ್ಟಲಗಿ, ಎಸ್.ಎ. ಪರುಶೆಟ್ಟಿ, ಅತಿಥಿ ಶಿಕ್ಷಕಿ ಶ್ರೀದೇವಿ ಖೋತ ಸೇರಿ ಒಟ್ಟು 6 ಜನ ಶಿಕ್ಷಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 182 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಗ್ರಾಮ ಪಂಚಾಯಿತಿ, ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಈ ಶಾಲೆಗೆ 2016-17ನೇ ಸಾಲಿನಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಲಭಿಸಿದೆ. ಶಾಲೆಯಿಂದ ಪ್ರತಿವರ್ಷ ಮಕ್ಕಳು ಮೊರಾರ್ಜಿ ವಸತಿ, ನವೋದಯ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ರುಚಿಯಾದ ಅಡುಗೆ ತಯಾರಿಸಿ ಮಕ್ಕಳ ನೀಡಲಾಗುತ್ತಿದೆ.
ಶಾಲೆಯಲ್ಲಿ ಶಿಕ್ಷಕರ ಕೊರತೆ: ಕಳೆದ ಒಂದು ವರ್ಷದಿಂದ ಮುಖ್ಯಗುರು, ದೈಹಿಕ ಶಿಕ್ಷಕರ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವುದು ಅಗತ್ಯವಿದೆ.
ಶತಮಾನ ಕಂಡ ಶಾಲೆ: ಕ್ರಿ.ಶ.1874ರಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. ಮುಧೋಳದ ಮರಾಠಾ ಸಂಸ್ಥಾನಿಕ ಕಾಲದಲ್ಲಿ ಈ ಶಾಲೆ ಮರಾಠಿ ಭಾಷೆಯಲ್ಲಿ ಆರಂಭಗೊಂಡು ಕೆಲವು ವರ್ಷಗಳ ನಂತರ ಕನ್ನಡ ಶಾಲೆಯಾಗಿ ಪರಿವರ್ತನೆಗೊಂಡಿತು.
ನಾನು ಈ ಶಾಲೆಯಲ್ಲಿ 1978 ರಿಂದ 1998ವರೆಗೆ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಪಟ್ಟಣದ ಜನತೆ ಈ ಶತಮಾನ ಕಂಡ ಶಾಲೆಯ ಅಭಿವೃದ್ಧಿ ಕಡೆಗೆ ಮುತುವರ್ಜಿ ವಹಿಸಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾಳಜಿ ವಹಿಸಬೇಕು. -ಜಿ.ಬಿ. ಜೋಶಿ, ರಾಜ್ಯ ಪ್ರಶಸ್ತಿ ಪುರಸ್ಕೃತರು, ನಿವೃತ್ತ ಶಿಕ್ಷಕರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2007ರಿಂದ 2014ರವರೆಗೆ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವಾ ಅವ ಧಿಯಲ್ಲಿ ಎಲ್ಲರ ಸಹಕಾರದಿಂದ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆ ನೀಡಿದ್ದಾರೆ. –ಎಂ.ಎಸ್. ನಾಗರೇಶಿ, ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕೂರ
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಇನ್ನಷ್ಟು ಈ ಶಾಲೆಗೆ ತಾಂತ್ರಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಥವಾ ದಾನಿಗಳು ಶಾಲೆ ಅಭಿವೃದ್ಧಿಗೆ ಕೈ ಜೋಡಿಸಬೇಕು. -ಕೆ.ಎಲ್. ಮಾಳೇದ, ಸಿಆರ್‌ಪಿ ಲೋಕಾಪುರ ಕ್ಲಸ್ಟರ್
ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಗ್ರಾಮಸ್ಥರ ಸಹಕಾರ ಮುಖ್ಯ. ಪಟ್ಟಣದ ಜನತೆ ಶತಮಾನ ಕಂಡ ಈ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಇನ್ನಷ್ಟು ಸೌಲಭ್ಯ ಒದಗಿಸಲು ಸಹಾಯ ಸಹಕಾರ ನೀಡಬೇಕು. –ಎಚ್.ಎಫ್. ಖವಾಸ್ತ, ಪ್ರಭಾರಿ ಮುಖ್ಯಶಿಕ್ಷಕ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಲೋಕಾಪುರ
ಸಲೀಮ ಐ. ಕೊಪ್ಪದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸೆಲಿಂಗ್: ಸಚಿವ ತಿಮ್ಮಾಪುರ
ನಿರ್ವಹಣೆಯೇ ಇಲ್ಲದ ಬಸ್ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ
Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ
Mudhol: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಿ: ಪ್ರಮೋದ್ ಮುತಾಲಿಕ್
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
MUST WATCH
ಹೊಸ ಸೇರ್ಪಡೆ
Mangaluru; ಫುಟ್‌ಬಾಲ್ ಕ್ವಾರ್ಟರ್ ಫೈನಲ್ :ಕಸಬ ಬ್ರದರ್ ಮೇಲುಗೈ
BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಆಕ್ಷೇಪ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.