Govt. Bungalow: ತೇಜಸ್ವಿ ಯಾದವ್ ತೆರವುಗೈದ ಸರಕಾರಿ ಬಂಗಲೆಯಲ್ಲಿ ಸೋಫಾ, ಎಸಿ ನಾಪತ್ತೆ!
ಬಿಹಾರ ಬಿಜೆಪಿ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್ ಗಂಭೀರ ಆರೋಪ, ಬಿಜೆಪಿಯಿಂದ ಸುಳ್ಳು ಆರೋಪವೆಂದ ಆರ್‌ಜೆಡಿ
Team Udayavani, Oct 8, 2024, 12:02 AM IST
ಪಾಟ್ನಾ: ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ವಾಸಿಸುತ್ತಿದ್ದ ಸರಕಾರಿ ಬಂಗಲೆಯ ಇತ್ತೀಚೆಗೆ ಬಿಟ್ಟು ತೆರಳುವಾಗ ದುಬಾರಿ ಬೆಲೆಯ ಪೀಠೋಪಕರಣ, ಸೋಫಾ ಸೆಟ್, ಹಾಸಿಗೆ, ಕೊಳಾಯಿಗಳು ಮತ್ತು ಹವಾನಿಯಂತ್ರಕ (ಎಸಿ) ಸೇರಿ ಇತರ ವಸ್ತುಗಳ ಹೊತ್ತುಕೊಂಡು ಹೋಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಹಾರದ ಬಿಜೆಪಿಯ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್ ಸೋಮವಾರ ಮಾತನಾಡಿ ಪಾಟ್ನಾದ 5ನೇ ದೇಶ್‌ರತ್ನಾ ರಸ್ತೆಯಲ್ಲಿನ ಸರಕಾರಿ ಬಂಗಲೆಯಲ್ಲಿ ವಾಸವಿದ್ದ ತೇಜಸ್ವಿ ಯಾದವ್ ಅಲ್ಲಿಂದ ತೆರಳಿದ ನಂತರ “ಹೈಡ್ರಾಲಿಕ್ ಬೆಡ್‌ಗಳು , ಎಸಿ ಮತ್ತು ದೀಪಗಳು, ಸ್ನಾನದ ಕೊಠಡಿಯಲ್ಲಿನ ನೀರಿನ ಕೊಳಾಯಿಗಳು, ಬ್ಯಾಡ್ಮಿಂಟನ್ ಕೋರ್ಟ್ ಮ್ಯಾಟ್ ,ಫೌಂಟೇನ್ ಲೈಟ್‌ಗಳು ಮತ್ತು ಸೋಫಾಗಳು ವಿವಿಧ ವಸ್ತುಗಳು ಮನೆಯಿಂದ ಕಾಣೆಯಾಗಿವೆ ಎಂದು ಆರೋಪಿಸಿದರು.
“ನಾನು ಅವರ ಮೇಲೆ ಆರೋಪ ಮಾಡುತ್ತಿಲ್ಲ, ಆದರೆ ಅದು ಸಂಪೂರ್ಣ ಸಾಬೀತಾಗಿದೆ. ತೇಜಸ್ವಿ ಯಾದವ್ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ ರೀತಿಯೇ ಸ್ವಭಾವದಿಂದಲೇ ಅವರು ಸರ್ಕಾರದ ಆಸ್ತಿ ಹೇಗೆ ಲೂಟಿ ಮಾಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಸರಕಾರಿ ನಿವಾಸದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ಹಾರ್ಡ್ ಡ್ರೈವ್ ಕೂಡ ಕಾಣೆಯಾಗಿದೆ” ಎಂದು ಇಕ್ಬಾಲ್ ಹೇಳಿದ್ದಾರೆ. ಈ ಸರಕಾರಿ ಬಂಗಲೆಗೆ ನವರಾತ್ರಿ ವೇಳೆಯಲ್ಲಿ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತೆರಳುವ ಬಗ್ಗೆ ನಿರ್ಧರವಾಗಿತ್ತು, ಆದರೆ ಅದಕ್ಕೂ ಮೊದಲೇ ವಿವಾದ ಹುಟ್ಟಿಕೊಂಡಿದೆ.
ತನಿಖೆಗೆ ಆಗ್ರಹಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಸಾರ್ವಜನಿಕ ಸ್ಥಾನದಲ್ಲಿರುವವರು ಇಂತಹ ಅವಹೇಳನಕಾರಿ ಚಟುವಟಿಕೆಗಳ ಮಾಡಬಾರದು. ತೇಜಸ್ವಿ ಯಾದವ್ ಬಂಗಲೆ ನವೀಕರಣಕ್ಕೆ ಎಷ್ಟು ಹಣ ಖರ್ಚಾಗಿದೆ ಎಂದು ವಿಚಾರಿಸಲು ತನಿಖಾ ಸಮಿತಿ ರಚಿಸಿ ಪ್ರಕರಣ ದಾಖಲಿಸಬೇಕು” ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹಿಸಿದ್ದಾರೆ.
ಬಿಜೆಪಿಗೆ ಮಾಧ್ಯಮಗಳ ಹೆಡ್‌ಲೈನ್‌ಗಳ ನಿರ್ವಹಿಸುವುದು ಗೊತ್ತಿದೆ: ಆರ್‌ಜೆಡಿ
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸರುವ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಸರಕಾರಿ ಬಂಗಲೆಗೆ ನೀಡಿರುವ ವಸ್ತುಗಳ ಪಟ್ಟಿಯನ್ನು ತಕ್ಷಣವೇ ಬಿಡುಗಡೆಗೊಳಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಬಿಜೆಪಿ ಸುಳ್ಳು ಆರೋಪಗಳ ಮಾಡುತ್ತಿದೆ ಮತ್ತು ಮಾಧ್ಯಮಗಳ ಹೆಡ್‌ಲೈನ್‌ಗಳ ನಿರ್ವಹಿಸುವುದಕ್ಕಾಗಿ ಬಿಜೆಪಿ ಇಂತಹ ಆರೋಪ ಮಾಡುತ್ತಿದೆ. ಲಂಚ ಪಡೆದಿದ್ದಕ್ಕಾಗಿ ಬಿಹಾರದ ಎನ್‌ಐಎಯ ಡಿಎಸ್‌ಪಿಯೊಬ್ಬರನ್ನು ಸಿಬಿಐ ಬಂಧಿಸಿತ್ತು. ಆ ಡಿಎಸ್ಪಿ ಬಿಜೆಪಿಯ ಮಾಜಿ ಶಾಸಕರೊಬ್ಬರ ಅಳಿಯ. ಆದರೆ ಬಿಹಾರಿ ಮಾಧ್ಯಮಗಳಲ್ಲಿ ಇದು ಎಲ್ಲೂ ಪ್ರಕಟವಾಗಿಲ್ಲ. ಆ ಡಿಎಸ್ಪಿ ಬಿಹಾರದಲ್ಲಿ ನೂರಾರು ಜನರನ್ನು ಸುಲಿಗೆ ಮಾಡಿದ್ದಾನೆ. ಹಣ ಕೊಡಲು ನಿರಾಕರಿಸಿದರೆ ನಕ್ಸಲರ ಜೊತೆ ಸಂಬಂಧವಿದೆ ಎಂದು ಬಂಧಿಸುವ ಎಂದು ಬೆದರಿಕೆ ಹಾಕಿದ್ದಾನೆ…ದೇಶದಲ್ಲಿ ಸರ್ಕಾರ ಹೀಗೆ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.