Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ
ತಾಯಿ-ಮಕ್ಕಳ ಮಮತೆಯನ್ನು ಬಿಂಬಿಸುವಂತಹ ಒಂದು ಹಬ್ಬವೇ ಗೌರಿ-ಗಣೇಶನ ಹಬ್ಬ
Team Udayavani, Sep 6, 2024, 6:52 AM IST
ದಿವೋದಾಸ ವಚನವೊಂದು ಹೀಗಿದೆ. ಶ್ರಾವಣ ಶುಕ್ಲ ತೃತೀಯಾ ಮಧುಶ್ರವಣಿಕಾ, ಭಾದ್ರಪದ ಕೃಷ್ಣ ತೃತೀಯಾ ಕಜ್ಜಲೀ, ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ ಆಚರೇತ್. ಅಂದರೆ ಇದೆಲ್ಲವೂ ವಿಶೇಷ ವ್ರತ ನಿಯಮಗಳು. ಒಂದು ಇಚ್ಛಿತ ವಸ್ತು, ಸಂತಾನ ಪಡೆಯಲು ಇಂತಹ ವ್ರತಾಚರಣೆಗಳು ಪೂರ್ಣ ಫಲ ನೀಡುತ್ತವೆ ಎಂಬುದು ಸೈದ್ಧಾಂತಿಕ ತತ್ತ್ವ .
ಅಂತಹ ವ್ರತವನ್ನು ಆಚರಣೆ ಮಾಡಿದ ಆ ದಂಪತಿಗಳು ದೈವತ್ವ ಪಡೆದ ಒಂದು ಸ್ತ್ರೀ ಸಂತಾನವನ್ನು ಪಡೆದು ಇಡೀ ಜಗತ್ತಿಗೇ ಮಾತೃ ಸ್ವರೂಪಿಯಾದ ಗೌರೀ ದೇವಿಯನ್ನು ಪಡೆದರು. ಆಚಾರ್ಯತ್ರಯರಾದ ಮಧ್ವ, ಶಂಕರ, ರಾಮಾನುಜರು ಚತುರ್ವೇದಗಳನ್ನೇ ಆಧಾರವಾಗಿಟ್ಟುಕೊಂಡು ಅವರವರ ದೇಶ, ಕಾಲ, ಪಾತ್ರಕ್ಕನುಗುಣವಾದ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲು ಸಂದೇಶ ನೀಡಿದರು.
ಸಂಪ್ರದಾಯ ಬೇರೆ ಬೇರೆ ಇದ್ದರೂ ಮೂಲ ತಣ್ತೀವು ಆಕಾಶಾತ್ ಪತಿತಂ ತೋಯಂ ಯಥಾಗತ್ಛತಿ ಸಾಗರಂ, ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗತ್ಛತಿ ಆಗುತ್ತದೆ. ಹರಿತಾಲಿಕಾ ವ್ರತವನ್ನು ಬೇರೆ ಬೇರೆ ಸಂಪ್ರದಾಯಗಳಲ್ಲಿ ಹೆಚ್ಚಾಗಿ ಮುತ್ತೈದೆಯರು ಆಚರಣೆ ಮಾಡುತ್ತಾರೆ. ವ್ರತಾಚರಣೆಯ ಬಗ್ಗೆ ಎಲ್ಲೂ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಹೇಳಿಲ್ಲ. ಇದೊಂದು ಹಬ್ಬದ ಆಚರಣೆಯೂ ಹೌದು. ಇಂದು ತಾಯಿಯ ಹಬ್ಬ, ನಾಳೆ ಮಗನ ಹಬ್ಬ. ತಾಯಿ-ಮಕ್ಕಳ ಮಮತೆಯನ್ನು ಬಿಂಬಿಸುವಂತಹ ಒಂದು ಹಬ್ಬವೇ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ.
ಗೌರಿಯ ಆರಾಧನೆಯನ್ನು ಗಾಂಧಾರಿ ದೇವಿ ಒಂದು ಕಡೆ, ಇನ್ನೊಂದು ಕಡೆ ಅರಣ್ಯದಲ್ಲಿ ಕುಂತೀ ದೇವಿ ಆಚರಿಸಿದ ಉÇÉೇಖ ಮಹಾಭಾರತದಲ್ಲಿದೆ. ಮಾರ್ಕಂಡೇಯ ಪುರಾಣದ ಸಪ್ತಶತಿಯಲ್ಲಿ ದಾನವರ ವಧೆಗಾಗಿ ಗೌರಿಯು ಯಾವ ರೂಪ ತಾಳಿದಳು ಎಂಬುದನ್ನು ಗೌರೀದೇಹ ಸಮುದ್ಭವಾಂ ತಿಜಗತಾಮಾಧಾರ ಭೂತಾಂ ಮಹಾಪೂರ್ವಮತ್ರ ಸರಸ್ವತಿ ಮನುಭಜೇ ಶುಂಭಾದಿ ದೈತ್ಯಾರ್ಧಿನೀಂ ಎಂದು ದೇವಾದಿ ದೇವತೆಗಳು ಪ್ರಾರ್ಥಿಸಿದ್ದು ಗೌರಿಯನ್ನೆ.
ಕರಾವಳಿ ಬಿಟ್ಟು ಉಳಿದೆಡೆ ಗೌರಿಯ ಪ್ರತಿಮೆ ಇಟ್ಟು ಆಚರಿಸಿ ಕೊನೆಗೆ ವ್ರತ ಮುಗಿದ ಬಳಿಕ ಜಲಸ್ತಂಭನ ಮಾಡುತ್ತಾರೆ. ಕೆಲವೆಡೆ ಕಲಶವಿಟ್ಟು ಕಲೊ³àಕ್ತ ಪೂಜೆ ಮಾಡುತ್ತಾರೆ. ಈಗೀಗ ಕರಾವಳಿ ಜಿಲ್ಲೆಗಳಲ್ಲೂ ಹೀಗೇ ಆಚರಣೆ ಮಾಡುತ್ತಾರೆ. ಇನ್ನು ನೈವೇದ್ಯ ಕ್ರಮಗಳಲ್ಲೂ ಅನೇಕ ಪ್ರಕಾರದ ಕ್ರಮಗಳೂ ಇವೆ. ಇದೆಲ್ಲ ಆಯಾಯ ಊರು ಕ್ಷೇತ್ರಗಳ ಸಂಪ್ರದಾಯ. ಇದನ್ನು ಹಾಗಲ್ಲ ಹೀಗೆ ಎಂದು ಹೇಳುವ ಕ್ರಮವೂ ಸಲ್ಲದು. ಮಾತೆ ಗೌರಿ ಎಂದ ಮೇಲೆ ಭಕ್ತಿ, ಶ್ರದ್ಧೆಗೆ ಲೋಪ ಬಾರದಂತೆ ಆಚರಿಸುವುದು ಉಪಾಸಕರ ಕರ್ತವ್ಯ. ಮಲೆನಾಡು, ಬಯಲು ಸೀಮೆಗಳಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಕರಾವಳಿ, ಮಡಿಕೇರಿ ಕಡೆ ಅಲ್ಲಿನಷ್ಟು ಸಂಭ್ರಮದ ಆಚರಣೆ ಇಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಗೌರಿ ತದಿಗೆ ಆಚರಣೆ ಈ ಭಾಗದಲ್ಲೂ ರೂಢಿಗೆ ಬಂದಿದೆ.
ಶಿವನ ರಾಣಿ ಪಾರ್ವತಿಯ ರೂಪಾಂತರವೇ ಗೌರಿ. ಮೊದಲು ಗೌರಿ, ಅನಂತರ ದುಷ್ಟ ಸಂಹಾರಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಗೌರಿ ಪಾರ್ವತಿಯಾದಳು. ಪಾರ್ವತಿಯ ವರ್ಣ ಕಪ್ಪು. ಶಿವನು ಪಾರ್ವತಿಯನ್ನು ಕಾಳಿ ಎಂದು ಕರೆದನು. ಪಾರ್ವತೀ ದೇವಿ ಭದ್ರಕಾಳಿಯಾಗಿ ಶುಂಭ ನಿಶುಂಭರ ವಧೆಯನ್ನು ಮಾಡಿದಳು. ದಕ್ಷಯಜ್ಞದಲ್ಲಿ ದಕ್ಷನ ಮಗಳಾಗಿ ಜನಿಸಿದ ದಾಕ್ಷಾಯಣಿಯೇ ಗೌರಿ. ಒಮ್ಮೆ ದಕ್ಷನು ಒಂದು ಪುತ್ರಕಾಮೇಷ್ಟಿಯಾಗದಲ್ಲಿ ಶಿವನನ್ನು ಆಹ್ವಾನಿಸದೆ ಅವಮಾನಿಸುತ್ತಾನೆ.
ಆದರೂ ಮಗಳು ದಾಕ್ಷಾಯಣಿಯು ಗಂಡನ ಮಾತನ್ನು ಮೀರಿ ದಕ್ಷ ಯಜ್ಞಕ್ಕೆ ಹೊರಟು ಶಿವನ ಅನುಮತಿಗಾಗಿ ಸ್ತುತಿಸಿದಳು. ಶಿವನು ಮೌನವಾಗಿ ಇರುವುದನ್ನೇ “ಮೌನಂ ಸಮ್ಮತಿ ಲಕ್ಷಣಂ’ ಎಂದುಕೊಂಡು ಯಜ್ಞದಲ್ಲಿ ಪಾಲ್ಗೊಳ್ಳಲು ತವರುಮನೆಗೆ ಬರುತ್ತಾಳೆ. ಅಲ್ಲಿ ತೀವ್ರತರನಾದ ಅವಮಾನವಾಗುತ್ತದೆ. ಇದರಿಂದ ಮನನೊಂದ ಗೌರಿಯು ತನ್ನ ಭ್ರೂಮಧ್ಯದಿಂದ ಅಗ್ನಿಯನ್ನು ದೃಷ್ಟಿಸಿ ತನ್ನನ್ನು ದಹಿಸಿಕೊಂಡಳು. ಈ ವಿಚಾರ ಶಿವನಿಗೆ ನಾರದರು ತಿಳಿಸುತ್ತಾರೆ.
ಆಗ ಶಿವನು ವೀರಭದ್ರನಾಗಿ ದಕ್ಷನ ಯಜ್ಞಶಾಲೆಗೆ ಬಂದು ದಕ್ಷನ ಶಿರಛೇದನ ಮಾಡಿ, ಅರೆಬೆಂದ ಗೌರಿಯನ್ನು ಹೆಗಲಿನಲ್ಲಿ ಇರಿಸಿಕೊಂಡು ಬರುತ್ತಾನೆ. ಪ್ರಾಗ್ಜೋತಿಷ ಪುರಕ್ಕೆ (ಈಗಿನ ಅಸ್ಸಾಂ ರಾಜ್ಯ) ಬಂದು ಕಾಮಾಕ್ಯಕ್ಕೆ ತಲುಪುವಾಗ ಗೌರಿಯ ದೇಹ ಪೂರ್ಣ ಸುಟ್ಟಿದ್ದನ್ನು ನೋಡಿ ಅಲ್ಲೇ ಎಸೆದು, ವೈರಾಗ್ಯಮೂರ್ತಿಯಾಗಿ ಉಮಾನಂದ ಎಂಬಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಮುಂದೆ ತಾರಕಾಸುರನ ಸಂಹಾರಕ್ಕಾಗಿ ಕಾರ್ತಿಕೇಯನ ಅವತಾರಕ್ಕಾಗಿ ದೇವತೆಗಳು ಪ್ರಾರ್ಥಿಸುತ್ತಾರೆ.
ಆಗ ಶಿವನ ಅನುಗ್ರಹವಾಗಿ ಪಾರ್ವತಿಯ ಸ್ವಯಂವರವೂ ಆಗಿ ಕಾರ್ತಿಕೇಯನ ಅವತಾರವೂ ಆಗುತ್ತದೆ. ಕಾರ್ತಿಕೇಯನೇ ಸುಬ್ರಹ್ಮಣ್ಯ. ಸ್ಕಂದನೆಂದೂ ಹೆಸರಿದೆ. ಈ ಸುಬ್ರಹ್ಮಣ್ಯನಿಂದ ತಾರಕಾಸುರನ ಸಂಹಾರವಾಗಿ ಲೋಕ ಸುಭಿಕ್ಷವೂ ಆಗುತ್ತದೆ. ಅಂತಹ ದೇವರಿಗೆ ಜನ್ಮ ಕೊಟ್ಟವಳೇ ಪಾರ್ವತಿ.
ದಾಕ್ಷಾಯಣಿಯು ಗೌರಿಯಾಗಿ, ಅನಂತರ ಪಾರ್ವತೀ ದೇವಿಯಾಗಿ ಜಗತ್ತನ್ನು ರಕ್ಷಿಸಿದ ಮಹಾ ಮಾತೆ. ಅವಳನ್ನೇ ಗೌರೀದೇವಿಯಾಗಿ ಹರಿತಾಲಿಕಾ ವ್ರತ, ಹಬ್ಬದ ಮೂಲಕ ಭಕ್ತರು ಆರಾಧಿಸಿ ಕೃತಾರ್ಥರಾದರು. ಅದು ಮನ್ವಂತರದಿಂದ ಮನ್ವಂತರದ ವರೆಗೂ ನಡೆಯುತ್ತಾ ಬಂದಿದೆ.
ಇಂದಿಗೂ ಹರಿತಾಲಿಕಾ ವ್ರತವು ಗೌರೀ ಹಬ್ಬವಾಗಿ ಮನೆ ಮನೆಯಲ್ಲಿ ಮಾತೆಯ ಆರಾಧನೆ ನಡೆಯುತ್ತದೆ. ಪೂಜಾಂತ್ಯದಲ್ಲಿ ಗೌರಿಯನ್ನು ಸರ್ವಬಾಧಾಪ್ರಶಮನಂ ತ್ರೆçಲೋಕ್ಯಾಖೀಲೇಶ್ವರೀ ಏವ ಮೇವ ತ್ವಯಾ ಕಾರ್ಯಮಸ್ಮಧೈರಿ ವಿನಾಶನಂ ಎಂದು ಪ್ರಾರ್ಥನೆ ಮಾಡಿದರೆ ಸಕಲ ಪೀಡೆಗಳೂ ಪರಿಹಾರವಾಗುತ್ತವೆ. ನಾವೆಲ್ಲರೂ ಆ ಮಹಾತಾಯಿಯ ಅನುಗ್ರಹ ಪಡೆಯೋಣ.
– ಪ್ರಕಾಶ್ ಅಮ್ಮಣ್ಣಾಯ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.