ಜಗಳ ಮಾಡಿ ಮನೆ ಬಿಟ್ಟು ದಾಂಡೇಲಿಗೆ ಬಂದ ಧಾರವಾಡದ ಅಜ್ಜಿ
ಮರಳಿ ಮನೆಗೆ ಸೇರಿಸುವಲ್ಲಿ ಯಶಸ್ವಿಯಾದ ಪೊಲೀಸರು
Team Udayavani, Sep 30, 2021, 8:26 PM IST
ದಾಂಡೇಲಿ : ಜಗಳ ಮಾಡಿ ಮನೆ ಬಿಟ್ಟು ಬಂದ ಧಾರವಾಡದ ಅಜ್ಜಿಯನ್ನು ಮರಳಿ ಮನೆಗೆ ಸೇರಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.
ಮೂಲತ: ಕದ್ರಾ ನಿವಾಸಿಯಾಗಿದ್ದ, ಹಾಲಿ ಧಾರವಾಡದ ವನಶ್ರೀನಗರ ನಿವಾಸಿಯಾಗಿರುವ ಶಾಂತ ಹೋಳಿ ಬಸವರಾಜ ಅರಗುಂಜಿ (ವ:76) ಎಂಬ ಅಜ್ಜಿ ಅಳಿಯನ ಮನೆಯಲ್ಲಿ ವಾಸವಿದ್ದು, ಅಲ್ಲಿ ಜಗಳ ಮಾಡಿ ಹೇಳದೆ ಕೇಳದೆ ಮನೆ ಬಿಟ್ಟು ದಾಂಡೇಲಿಗೆ ಬಂದಿದ್ದರು. ನಗರಕ್ಕೆ ಬಂದಿದ್ದ ಅಜ್ಜಿ ಹಸಿವಿನಿಂದ ಬಸವಳಿದಿರುವುದನ್ನು ಗಮನಿಸಿದ ನಗರದ ಯುವಕರುಗಳಾದ ಆಂಜನೇಯ, ಕುಮಾರ್, ಸಾಗರ್ ಮತ್ತು ಉಮೇಶ ಸಾವಳಗಿಮಠ ಅವರುಗಳು ಅಜ್ಜಿಗೆ ಉಪಹಾರವನ್ನು ನೀಡಿ ಹಸಿವನ್ನು ನೀಗಿಸಿದರು. ಆನಂತರ ಅಜ್ಜಿಯನ್ನು ವಿಚಾರಿಸಿ ತುರ್ತು ಸೇವಾ ಘಟಕವಾದ 112 ಗೆ ಕರೆ ಮಾಡಿ ಮಾಹಿತಿಯನ್ನು ನೀಡಿದರು.
ತಕ್ಷಣವೆ ಸ್ಥಳಕ್ಕಾಗಮಿಸಿದ 112 ತುರ್ತು ವಾಹನ ಅಜ್ಜಿಯನ್ನು ನಗರ ಠಾಣೆಗೆ ಕರೆದುಕೊಂಡು ಹೋಗಿದೆ. ನಗರ ಠಾಣೆಯಲ್ಲಿ ಪಿಎಸೈ ಯಲ್ಲಪ್ಪ.ಎಸ್ ಅವರ ನೇತೃತ್ವದ ಪೊಲೀಸ್ ತಂಡ ಅಜ್ಜಿಯನ್ನು ವಿಚಾರಿಸಿ, ಅಜ್ಜಿಯ ಅಳಿಯನನ್ನು ನಗರ ಠಾಣೆಗೆ ಕರೆಸಿ, ಇಬ್ಬರಿಗೂ ಬುದ್ದಿ ಮಾತು ಹೇಳಿ ಅಜ್ಜಿಯನ್ನು ಮರಳಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸುಖಾಂತ್ಯ ಕಂಡಿದೆ. ಇತ್ತ ಹಸಿವಿನಿಂದ ಬಸವಳಿದಿದ್ದ ಅಜ್ಜಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿ ಅಜ್ಜಿಯ ಬಗ್ಗೆ ಕಾಳಜಿ ತೋರಿದ ಯುವಕರ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ :ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿದೇಶಿ ಚಿತ್ರತಂಡಗಳ ಆಹ್ವಾನಕ್ಕೆ ಸಿಎಂ ಸಲಹೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.