Grant Problem: ಅಮೃತ ರೈತ ಉತ್ಪಾದಕ ಯೋಜನೆಗೆ ಅನುದಾನ ಬಾಕಿ; ಸಿಬಂದಿ ವೇತನಕ್ಕೂ ಸಂಕಷ್ಟ
ಅನುದಾನ ಬಿಡುಗಡೆಗೊಳ್ಳದ್ದರಿಂದ ಸದಸ್ಯರಿಗೆ ಯಾವುದೇ ಚಟುವಟಿಕೆ ಸಾಧ್ಯವಾಗುತ್ತಿಲ್ಲ
Team Udayavani, Aug 5, 2024, 7:15 AM IST
ಕೋಟ: ರೈತರು, ಮೀನುಗಾರರು, ತೋಟಗಾರಿಕೆ ಕ್ಷೇತ್ರ, ನೇಕಾರ ವರ್ಗವನ್ನು ಸಂಘಟಿಸಿ ಅವರ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಅಮೃತ ರೈತ ಉತ್ಪಾದಕ ಯೋಜನೆ ಅನುದಾನ ಕೊರತೆಯಿಂದ ಸಂಕಷ್ಟದಲ್ಲಿದೆ.
2021-22ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಮೃತ ರೈತ ಉತ್ಪಾದಕ ಯೋಜನೆ ಜಾರಿಗೆ ರಾಜ್ಯ ಸರಕಾರ ಆದೇಶಿಸಿತ್ತು. ಮೂರು ವರ್ಷಗಳಲ್ಲಿ ರಾಜ್ಯವ್ಯಾಪಿ 750 ಸಂಸ್ಥೆಗಳನ್ನು ರಚಿಸುವುದು, ಯೋಜನೆ ಅಡಿಯಲ್ಲಿ ನೋಂದಣಿಯಾದ ರೈತರಿಂದ ಷೇರುಗಳನ್ನು ಸಂಗ್ರಹಿಸಿ, ಸಂಘದ ಸದಸ್ಯರಿಗೆ ನೇರ ಮಾರುಕಟ್ಟೆ ಬೆಂಬಲ ನೀಡುವುದರ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ರೈತರ ಉತ್ಪನ್ನ ಹಾಗೂ ಮೀನುಗಾರರ ಸಿಗಡಿ, ಮೀನು, ಪಚ್ಚಿಲೆ ಮೊದಲಾದವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು, ಮೀನಿನ ಮೌಲ್ಯವ ರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಸೂಕ್ತ ಬೆಲೆ ದೊರಕಿಸಿಕೊಡುವುದು, ಮಾಹಿತಿ, ಮಾರ್ಗದರ್ಶನಕ್ಕಾಗಿ ತರಬೇತಿ, ಪ್ರಾತ್ಯಕ್ಷಿಕೆಗಳನ್ನು ನಡೆಸುವುದು ಮೊದ ಲಾದ ಕಾರ್ಯಕ್ರಮಗಳನ್ನು ಯೋಜನೆ ಯಡಿ ಅಳವಡಿಸಿಕೊಳ್ಳಲಾಗಿತ್ತು.
ನೇಕಾರರಿಗೂ ಇಲಾಖೆಯಡಿ ಕೆಲವು ಯೋಜನೆಗಳಿದ್ದವು. ಸರಕಾರದ ನಿಯಮದಂತೆ ಈ ಸಂಸ್ಥೆಗಳಿಗೆ ಮೂರು ವರ್ಷಗಳ ಅವಧಿಗೆ ಒಂದೊಂದು ಸಂಘಕ್ಕೆ ತಲಾ 30 ಲ.ರೂ.ಗಳ ಅನುದಾನ ನೀಡುವ ಯೋಜನೆ ಇತ್ತು. ಹೀಗೆ ಯೋಜನೆ ಯಡಿ ರಾಜ್ಯವ್ಯಾಪಿ 486 ಸಂಸ್ಥೆಗಳು ರಚನೆಗೊಂಡಿದ್ದವು. ಉಡುಪಿ, ದ.ಕ. ಜಿಲ್ಲೆಯಲ್ಲಿ ಬೇರೆಬೇರೆ ವಿಭಾಗದ 10 ಸಂಘಗಳು ಸ್ಥಾಪನೆಯಾಗಿದ್ದವು.
ಕಾರ್ಯಚಟುವಟಿಕೆಗೆ ಹಿನ್ನಡೆ
ಪ್ರಸ್ತುತ ಮೂರು ವರ್ಷದಿಂದ ಕಂಪೆನಿಗಳು ಷೇರುದಾರರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರಕಾರದ ನಿಯಮದಂತೆ ಇವುಗಳಿಗೆ 30 ಲಕ್ಷ ಅನುದಾನ ಸಿಗಬೇಕಿತ್ತು. ಆದರೆ ಇಲ್ಲಿಯ ತನಕ ಕೈ ಸೇರಿರುವುದು ಕೇವಲ 9,71,860 ರೂ. ಮಾತ್ರ. ಹೀಗಾಗಿ 20,28,140 ರೂ ಅನುದಾನ ಬಾಕಿ ಇದೆ.
ರಾಜ್ಯದ 486 ರೈತ ಉತ್ಪಾದಕ ಕಂಪೆನಿಗಳು ಅನುದಾನ ಬಿಡುಗಡೆಗೊಳ್ಳದ ಕಾರಣ ತಮ್ಮ ಸದಸ್ಯರಿಗೆ ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಂಸ್ಥೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಹಲವು ತಿಂಗಳು ಗಳಿಂದ ಸಂಬಳ ಸಿಕ್ಕಿಲ್ಲ. ಸಂಸ್ಥೆಯ ಆದಾಯ ಕುಂಠಿತಗೊಳ್ಳುವುದಲ್ಲದೆ, ಸಂಸ್ಥೆಯನ್ನು ನಂಬಿಕೊಂಡು ಚಟುವಟಿಕೆ ನಡೆಸುತ್ತಿರುವ ರೈತರ ಆದಾಯವೂ ಕುಂಠಿತವಾಗಿರುತ್ತದೆ. ಇದೇ ಕಾರಣದಿಂದ ಕೆಲವು ಸಂಸ್ಥೆಗಳು ಕಾರ್ಯಸ್ಥಗಿತಗೊಳಿಸಿದೆ.
“ಮೀನುಗಾರಿಕೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ಜಲಾನಯನ ಇಲಾಖೆ ಮೂಲಕ ಅನುದಾನ ಬಿಡುಗಡೆಗೊಂಡು ನಮ್ಮ ಇಲಾಖೆಯಿಂದ ಜಮೆಯಾಗುತ್ತದೆ. ಸರಕಾರದಿಂದ ಅನುದಾನ ಬಿಡುಗಡೆಯಾಗಲು ಬಾಕಿ ಇದ್ದು, ಸಮಸ್ಯೆ ಬಗ್ಗೆ ಈಗಾಗಲೇ ಹಲವು ಸಂಸ್ಥೆಗಳು ಮನವಿ ಮಾಡಿದೆ.” – ದಿನೇಶ್ ಕುಮಾರ್, ಮೀನುಗಾರಿಕೆ ಇಲಾಖೆ ನಿರ್ದೇಶಕರು
ಕೇಂದ್ರ ಸಂಯೋಜಿತ ಸಂಸ್ಥೆಗಳಿಗೆ ಸಮಸ್ಯೆ ಇಲ್ಲ
ರಾಜ್ಯ ಹಾಗೂ ಕೇಂದ್ರ ಸರಕಾರ ಗಳಲ್ಲಿ ಇಂಥ ಯೋಜನೆಗಳಿವೆ. ಕೇಂದ್ರ ಸರಕಾರ ಸಂಯೋಜಿತ ಸಂಸ್ಥೆಗಳಿಗೆ ಕಾಲಕಾಲಕ್ಕೆ ಅನುದಾನ ತಲುಪುತ್ತಿದೆ. ರಾಜ್ಯದಲ್ಲಿ ಮಾತ್ರ ಸಮಸ್ಯೆ ಇದೆ.
–ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.