Grant Relese: ಕುಂದಾಪ್ರ ಕನ್ನಡ ಆಧ್ಯಯನ ಪೀಠ; ಸಮಗ್ರ ಕಾರ್ಯಾರಂಭಕ್ಕೆ ಮುಹೂರ್ತ
50 ಕೋ.ರೂ. ಅನುದಾನ ಬಿಡುಗಡೆ, ಮತ್ತೆ ಗರಿಗೆದರಿದ ನಿರೀಕ್ಷೆಗಳು
Team Udayavani, Jul 29, 2024, 7:20 AM IST
ಕೋಟ: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಕುಂದಾಪ್ರ ಕನ್ನಡದ ಸಮಗ್ರ ದಾಖಲೀಕರಣ, ಅಧ್ಯಯನ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 50 ಲಕ್ಷ ರೂ. ಅನುದಾನ ಘೋಷಿಸಿರುವ ಬೆನ್ನಲ್ಲೇ ಕೊನೆಗೂ ಪೀಠ ಸಮಗ್ರವಾಗಿ ಕಾರ್ಯಾರಂಭ ಮಾಡಲು ಮುಹೂರ್ತ ಕೂಡಿ ಬಂದಿದೆ.
ಕುಂದಾಪ್ರ ಕನ್ನಡ ದಿನಾಚರಣೆ ಆರಂಭವಾದ ದಿನದಿಂದ ಕುಂದ ಗನ್ನಡ ಅಧ್ಯಯನ ಪೀಠಕ್ಕೆ ಬೇಡಿಕೆ ಬಲಗೊಂಡಿತ್ತು. ವಿವಿಧ ಸಂಘಟನೆಗಳು, ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರೂ ಇದಕ್ಕೆ ಧ್ವನಿಗೂಡಿಸಿದ್ದರು. ಸಾಕಷ್ಟು ಹೋರಾಟದ ಬಳಿಕ ಈಗ ಸರಕಾರದ ಅನುದಾನ ಕೈ ಸೇರಿದೆ.
ಸಂಘ ಸಂಸ್ಥೆಗಳಿಗೆ ಬೈಲಾ ರಚಿಸುವಂತೆ ಅಧ್ಯಯನ ಪೀಠದ ಸಂರಚನೆ ಕುರಿತು ನೀತಿ ನಿಯಮಾವಳಿ ನಿರೂಪಣೆ, ಪೀಠದ ಸಂಯೋಜಕರ ನೇಮಕ, ಆಡಳಿತ ಮಂಡಳಿ ರಚನೆ, ಸದಸ್ಯರ ನೇಮಕ ಎಲ್ಲವೂ ಆದ್ಯತೆ ಮೇಲೆ ನೇಮಕವಾಗಬೇಕಿದೆ.
ಬಳಿಕ ಪೀಠದ ಧ್ಯೇಯೋ ದ್ದೇಶಗಳಾದ ಭಾಷೆ ಹಾಗೂ ಪದಗಳ ಅಧ್ಯಯನ, ಕುಂದಗನ್ನಡ ಪ್ರದೇಶದ ಸಂಸ್ಕೃತಿ, ಆಚರಣೆ, ಇತಿಹಾಸದ ದಾಖಲೀಕರಣ, ಭಾಷೆಯ ಬೆಳವಣಿಗೆಗೆ ಪೂರಕ ವಾದ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಿದೆ.
ವಿಸ್ತರಣೆಗೆ ಅವಕಾಶ
ಪೀಠದ ಕಾರ್ಯಚಟುವಟಿಕೆಗಾಗಿ 2 ಕೋಟಿ ರೂ ಅನುದಾನವನ್ನು ಸರಕಾರದಿಂದ ಕೋರಲಾಗಿದ್ದು, 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಎಲ್ಲ ಚಟುವಟಿಕೆ ಕೈಗೊಳ್ಳುವುದು ಕಷ್ಟ ಎಂಬುದು ಕೆಲವರ ಅಭಿಪ್ರಾಯ. ಈ ಮೊತ್ತದಲ್ಲಿ ಒಂದಿಷ್ಟು ರಚನಾತ್ಮಕ ಚಟುವಟಿಕೆ ಹಮ್ಮಿಕೊಂಡರೆ, ಕ್ರಮೇಣ ಸರಕಾರದಿಂದ ಇನ್ನಷ್ಟು ಅನುದಾನ ಪಡೆಯಲು ಸಾಧ್ಯ ಎಂಬುದು ಪರಿಣಿತರ ಅಭಿಪ್ರಾಯ.
ಅಧ್ಯಯನ ಪೀಠ ಘೋಷಣೆ ಯಾಗಿ ಎರಡು ವರ್ಷ ಕಳೆದಿದೆ. ಸರಕಾರಗಳ ಬದಲಾವಣೆ, ಚುನಾ ವಣೆ ಘೋಷಣೆ ಮೊದಲಾದ ಕಾರಣಗಳಿಂದ ಚಟುವಟಿಕೆ ಆರಂಭ ವಿಳಂಬವಾಗಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಪೀಠದ ಚಟುವಟಿಕೆಗಳ ಆರಂಭವಾಗಬೇಕು ಎಂಬುದು ಹಲವರ ಆಗ್ರಹ.
ಹಂತಹಂತವಾಗಿ ಕಾರ್ಯನಿರ್ವಹಣೆ
“ಅಧ್ಯಯನ ಪೀಠಕ್ಕೆ ಪ್ರಸ್ತುತ ಅನುದಾನ ದೊರೆತಿದೆ. ಮುಂದೆ ಪೀಠದ ಸಂರಚನೆ, ಸಂಯೋಜಕರ ನೇಮಕ, ಸದಸ್ಯರ ನೇಮಕ ಪ್ರಕ್ರಿಯೆಗಳೆಲ್ಲವೂ ಸರಕಾರದ ಮಾರ್ಗದರ್ಶನದಂತೆ ನಡೆಯಬೇಕಿದೆ. ಅನಂತರ ಒಂದಷ್ಟು ಕಾರ್ಯ ಚಟುವಟಿಕೆಯನ್ನು ಹಾಕಿಕೊಳ್ಳಲಾಗುವುದು.” – ಕೆ. ರಾಜು ಮೊಗವೀರ, ರಿಜಿಸ್ಟ್ರಾರ್, ಮಂಗಳೂರು ವಿ.ವಿ.
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.