Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ

ಎನ್‌ಡಿಎ ಅವಧಿಯಲ್ಲಿಯೇ ರಾಜ್ಯಕ್ಕೆ ಅನುದಾನ ಹೆಚ್ಚು: ಕೇಂದ್ರ ಆಹಾರ ಸಚಿವ

Team Udayavani, Oct 12, 2024, 11:37 PM IST

Joshi

ಹುಬ್ಬಳ್ಳಿ: ರಾಜ್ಯ ಸರಕಾರ ಸರಿಯಾಗಿ ಹಣಕಾಸು ನಿರ್ವಹಣೆ ಮಾಡದೇ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯಗಳಿಗೆ ಅನುದಾನ ನಿಗದಿಪಡಿಸುವುದು ಕೇಂದ್ರ ಸರಕಾರವಲ್ಲ, ಹಣಕಾಸು ಆಯೋಗ. ಆಯೋಗಕ್ಕೆ ಸಮರ್ಪಕ ದಾಖಲೆ ನೀಡದೇ ನಿರ್ಲಕ್ಷ್ಯ ತೋರಿ ಬಳಿಕ ಕಡಿಮೆ ಹಣ ನೀಡಿದೆ ಎಂದು ಕೇಂದ್ರವನ್ನು ದೂರುವುದು ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಚಾಳಿಯಾಗಿದೆ. ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿಯೇ ರಾಜ್ಯಕ್ಕೆ ಅನುದಾನ ಹೆಚ್ಚು ಬಂದಿದೆ.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 49,000 ಕೋಟಿ ರೂ. ಗ್ರ್ಯಾಂಟ್‌ ಇನ್‌ ಏಡ್‌ ಅನುದಾನ ಬಂದಿದ್ದರೆ, ಎನ್‌ಡಿಎ ಸರಕಾರದಲ್ಲಿ 3 ಲಕ್ಷ ಕೋಟಿ ರೂ. ಬಂದಿದೆ. ತೆರಿಗೆ ಬಾಬ್ತಿನಲ್ಲಿ ಯುಪಿಎ ಅವಧಿಯಲ್ಲಿ 63,000 ಕೋಟಿ ರೂ. ಬಂದಿದ್ದರೆ, ಎನ್‌ಡಿಎ ಅವಧಿಯಲ್ಲಿ 3.25 ಲಕ್ಷ ಕೋಟಿ ರೂ. ಬಂದಿದೆ ಎಂದರು. 2016-17ರಲ್ಲಿ ಹಣಕಾಸು ಆಯೋಗ ಅನುದಾನ ನಿಗದಿಪಡಿಸಿತ್ತು. ಆಗ ರಾಜ್ಯದಲ್ಲಿ ಇದೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಇತ್ತು. ಆಗ ಏಕೆ ಪ್ರಶ್ನಿಸಲಿಲ್ಲ ಎಂದು ಜೋಶಿ ಟೀಕಿಸಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಷ್ಟು ಕೊಟ್ಟಿತ್ತು: ಎಂಎಲ್‌ಸಿ ರವಿಕುಮಾರ್‌ ಪ್ರಶ್ನೆ
ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಷ್ಟು ಹಣವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದರು ಎಂಬ ಅಂಕಿಅಂಶ ಬಿಡುಗಡೆ ಮಾಡಿ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ತಿರುಗೇಟು ನೀಡಿದ್ದಾರೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಹಣವನ್ನು ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿದ್ದೀರೆಂದು ಅಂಕಿಅಂಶ ಕೊಡಬೇಕು. ಮೋದಿ ನೇತೃತ್ವದ ನಮ್ಮ ಕೇಂದ್ರ ಸರಕಾರ ಎಷ್ಟು ಹಣಕಾಸು ನೀಡಿದೆ ಎಂಬುದನ್ನು ನಾವೂ ಬಿಡುಗಡೆಗೊಳಿಸಲು ಸಿದ್ಧ ಎಂದು ಸವಾಲು ಹಾಕಿದರು.

ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಾಂಗ್ರೆಸ್‌ ಅವಧಿಗಿಂತ ಹೆಚ್ಚು ಹಣವನ್ನು ಎನ್‌ಡಿಎ ನೀಡಿದೆ. ಯಾವುದೇ ಅನ್ಯಾಯ ಆಗಿಲ್ಲ. ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ಕೊಡುವ ಹಣವನ್ನು ಹೋಲಿಸಿ ಡಿ.ಕೆ. ಸುರೇಶ್‌ ಅವರು ಪ್ರತ್ಯೇಕ ರಾಜ್ಯ ಕೇಳುವ ಮಾತನಾಡಿದ್ದಾರೆ. ಡಿ.ಕೆ. ಸುರೇಶ್‌ ಮಾಡುವ ಆರೋಪ ಸರಿಯಲ್ಲ. ಇದು ಖಂಡನೀಯ ಎಂದರು.

ಟಾಪ್ ನ್ಯೂಸ್

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

1-saasds

Mysore Dasara;ದೀಪಾಲಂಕಾರ 12 ದಿನ ವಿಸ್ತರಣೆ: ಡಿ.ಕೆ.ಶಿವಕುಮಾರ್‌

Bhatakal

Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್

1-ewss

T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು

Joshi

Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್‌ ಸರಕಾರದ ಚಾಳಿ: ಪ್ರಹ್ಲಾದ್‌ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

HDK (4)

H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?

1-a-shobha

Shobha Karandlaje; ದುಷ್ಟ ಶಕ್ತಿಗಳು ಯಾರೆಂಬುದನ್ನು ಜನರೇ ತೀರ್ಮಾನಿಸುತ್ತಾರೆ

1-saasds

Mysore Dasara;ದೀಪಾಲಂಕಾರ 12 ದಿನ ವಿಸ್ತರಣೆ: ಡಿ.ಕೆ.ಶಿವಕುಮಾರ್‌

Jamboo1

Mysuru Dasara: ವಿಶ್ವವಿಖ್ಯಾತ ಜಂಬೂಸವಾರಿ ಸಂಪನ್ನ; 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

HDK (4)

H.D. Kumaraswamy; ಹತ್ತು ವರ್ಷಗಳ ಹಿಂದಿನ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ?

Krishna-Mutt

Udupi: ಶ್ರೀಕೃಷ್ಣ ಮಠದಲ್ಲಿ ಕದಿರುಹಬ್ಬ, ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.