Grass: ಹುಲ್ಲು ತೃಣಮಾತ್ರವಲ್ಲ! ಪ್ರಪಂಚದಲ್ಲಿ 12,000 ಜಾತಿಯ ಹುಲ್ಲುಗಳಿವೆ…
ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ.
Team Udayavani, Aug 15, 2023, 4:45 PM IST
ಅದೊ! ಹುಲ್ಲಿನ ಮಕಮಲ್ಲಿನ ಜೊಸಪಚ್ಚೆಯ ಜಮಖಾನೆ ಪಸರಿಸಿ ತಿರೆ ಮೈ ಮುಚ್ಚಿರೆ ಬೇರೆ ಬಣ್ಣವನೆ ಕಾಣೆ! ಕವಿಪುಂಗವ ಕುವೆಂಪು ಹಸಿರ ಹುಲ್ಲನ್ನು ವರ್ಣಿಸಿದ್ದು ಹೀಗೆ. ಜಾರ್ಜ್ ಬರ್ನಾರ್ಡ್ ಷಾ ಹೇಳಿದ್ದು – ಭೂಮಿಯ ಚರ್ಮವೇನಾದರೂ ಇದ್ದರೆ ಅದು ಹುಲ್ಲಂತೆ. ಆಹಾರದಿಂದ ಬಯೋಫ್ಯೂ ಯೆಲ್ ವರೆಗಿನ ಹಿಡಿತ ಹೊಂದಿರುವ ಹುಲ್ಲು ಬರಿಯ ಹುಲ್ಲಾಗಿ ಉಳಿದಿಲ್ಲ.
ಹುಲ್ಲು ಹೂ ಬಿಡುವ ಸಸ್ಯವರ್ಗದ ವೈವಿಧ್ಯಮಯ ಪ್ರಜಾತಿ. ಪ್ರಪಂಚದಲ್ಲಿ ಅಂದಾಜು 12,000 ಜಾತಿಯ ಹುಲ್ಲುಗಳಿವೆ. ಅದೆಷ್ಟು ಬಗೆಯ ಹುಲ್ಲನ್ನು ನೀವು ಗಮನಿಸಿದ್ದೀರಿ? ಮಜ್ಜಿಗೆ ಹುಲ್ಲು, ಲಾವಂಚ, ಗರಿಕೆ, ದರ್ಭೆ, ಚಪ್ಪರಿಕೆ, ಜೊಂಡು, ಚಾಪೆ ಹುಲ್ಲು, ಬಳುಕುವ ಹುಲ್ಲು, ಮುಳಿಹುಲ್ಲು, ಭತ್ತ-ಗೋಧಿ ಹುಲ್ಲು, ಟರ್ಫ್ ಕೆಂಟುಕಿ ಹುಲ್ಲು, ಗಾಲ್ಫ್ ಹಸಿರಿನ ಬರ್ಮುಡಾ ಹುಲ್ಲು, ರೇಶಿಮೆ ಹೂವಿನ ಪಂಪಾಸ್ ಹುಲ್ಲು ಹಾಗೂ ಹೆಸರಿಸಲಾಗದ ಇನ್ನೂ ಸಾವಿರಾರು. ಉದ್ಯಾನವನಗಳಲ್ಲಿ ಬೆಳೆಸುವ ಕಂಬಳಿಯ ನುಣುಪಿನ ಲಾನ್ ಹುಲ್ಲು ಇಂಚುಗಳಷ್ಟೆತ್ತರಕ್ಕೇ ಚಾಚಬಲ್ಲದು. ಚಾಪೆಯ ಹುಲ್ಲು, ಕಬ್ಬಿನ ಹುಲ್ಲು, ಬಿದಿರಿನ ಪ್ರಭೇದಗಳು ಆಕಾಶದೆತ್ತರಕ್ಕೂ ಬೆಳೆಯಬಲ್ಲವು. ಹುಲ್ಲು ಆಹಾರಧಾನ್ಯಗಳನ್ನು ಒದಗಿಸುವ ಪ್ರಮುಖ ಆಕರ. ಇಷ್ಟು ಮಾತ್ರವಲ್ಲದೇ ಅದು ಒದಗಿಸುವ ಜೀವನ ಪಾಠಗಳೂ ಅನೇಕ.
ಕೃಶಕಾಯವಾಗಿದ್ದರೂ ಎಂತಹ ಕಾರ್ಪಣ್ಯಕ್ಕೂ ಹೊಂದಿಕೊಳ್ಳಿ ಎನ್ನುವುದನ್ನು ಹುಲ್ಲು ಕಲಿಸುತ್ತದೆ. ಗಾಳಿಬಂದಾಗ ತೂರಿಕೋ ಎನ್ನುವಂತೆ ಹುಲ್ಲು ಗಾಳಿಯಲ್ಲಿ ಬಾಗುತ್ತದೆ, ಆದರೆ ಅದು ಸೀಳುವುದಿಲ್ಲ. ಜೀವನದಲ್ಲಿ ಹೊಂದಿಕೊಳ್ಳುವುದು ಮುಖ್ಯ ಎಂದು ಇದು ನಮಗೆ ಕಲಿಸುತ್ತದೆ. ಜೀವನದಲ್ಲಿ ಸಂಭವಿಸುವ ಎಲ್ಲ ಘಟನೆಗಳನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಮ್ಮ ಪ್ರತಿಕ್ರಿಯೆಗಳನ್ನು ನಿಯಂತ್ರಿಸಬಹುದು. ನಾವು ತುಂಬಾ ಕಠಿನವಾಗಿದ್ದರೆ, ಜೀವನದ ಸವಾಲುಗಳಿಂದ ನಾವು ಸುಲಭವಾಗಿ ಆಘಾತಗೊಳ್ಳುತ್ತೇವೆ. ಹುಲ್ಲು ನಮ್ಯತೆಯ ಸಂಕೇತ.
ಎಂತಹ ಪ್ರತಿಕೂಲ ಪ್ರರಿಸ್ಥಿತಿಯಲ್ಲಿಯೂ ಸ್ಥಿತಿಸ್ಥಾಪಕರಾಗಿರಿ ಎನ್ನುವುದು ಹುಲ್ಲು ಹೇಳುವ ಇನ್ನೊಂದು ಪಾಠ. ಶೀತೋಷ್ಣಗಳನ್ನು ಸಹಿಸಿ ಕಠಿನ ಪರಿಸ್ಥಿತಿಗಳಲ್ಲಿಯೂ ಹುಲ್ಲು ಬದುಕಬಲ್ಲದು. ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥಿತಿಸ್ಥಾಪಕರಾಗಿ ಸ್ಥಿತಪ್ರಜ್ಞನಂತೆ ಸವಾಲುಗಳನ್ನು ಬೆನ್ನತ್ತಿ ಜಯಿಸುವ ಮಾರ್ಗವನ್ನು ಹುಲ್ಲು ಹೇಳುತ್ತದೆ. ಹುಲ್ಲು ತೆನೆಯುವುದು ಬದಲಾವಣೆಗೆ ತೆರೆದು ಮತ್ತೆ ಮೊಳೆಯುವ ಸಂಕೇತ. ಸತತ ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ. ಹುಲ್ಲಾ ಗು ಬೆಟ್ಟದಡಿ ಎನ್ನುವಂತೆ ತನ್ನತನಕ್ಕೆ ಸಂತುಷ್ಟರಾಗಿರುವ ಇನ್ನೊಂದು ವಿಷಯಕ್ಕೂ ಹುಲ್ಲು ಉದಾಹರಣೆ. ಹುಲ್ಲು ಹುಲ್ಲಿನಂತೆ ತೃಪ್ತ, ಸಂಪೂರ್ಣ. ನಮ್ಮಲ್ಲಿರುವುದರಿಂದ ನಾವು ತೃಪ್ತರಾಗಿರಬೇಕು ಎಂದು ಇದು ನಮಗೆ ಕಲಿಸುತ್ತದೆ. ಸಂತೋಷವಾಗಿರಲು ಪ್ರತಿಯೊಬ್ಬರೂ ಹೊಂದಿರುವ ಎಲ್ಲವನ್ನೂ ನಾವು ಹೊಂದಬೇಕಾಗಿಲ್ಲ.
ಸಾಮರಸ್ಯತೆ ಹುಲ್ಲು ಕಲಿಸುವ ಅಮೂಲ್ಯ ಮೌಲ್ಯ. ಹುಲ್ಲು ಒಂದು ದೊಡ್ಡ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಇದು ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತದೆ, ಮಣ್ಣನ್ನು ಹಿಡಿದಿಡುತ್ತದೆ. ಪರಸ್ಪರ ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ಸಂಪರ್ಕ ಹೊಂದಿರುವ ಹುಲ್ಲು ಮೇವಿನಿಂದ ಛಾವಣಿಯವರೆಗೂ ಹೊಂದಾಣಿಕೆಯ ತಣ್ತೀವನ್ನೇ ಹೇಳುತ್ತದೆ.
ಹುಲ್ಲು ಪರಿಸರ ವ್ಯವಸ್ಥೆಗೆ ವ್ಯಾಪಕವಾದ ಪ್ರಯೋಜನಗಳನ್ನು ಹೊಂದಿರುವ ಹಾಗೂ ಗಡುಸಾದ ಸಸ್ಯಗಳಾಗಿವೆ. ಪರಿಸರ ವ್ಯವಸ್ಥೆಯಲ್ಲಿ ಮಣ್ಣಿನ ಸ್ಥಿರೀಕರಣ, ಇಂಗಾಲದ ಸೀಕ್ವೆಸ್ಟ್ರೇಶನ್, ಆವಾಸಸ್ಥಾನ ಸೃಷ್ಟಿ, ಮಣ್ಣಿನ ಸವೆತ ನಿಯಂತ್ರಣ ಮತ್ತು ಜಾನುವಾರು ಆಹಾರದಲ್ಲಿ ಹುಲ್ಲು ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗಾಗಿ ತೃಣ ಮಾತ್ರವಲ್ಲ, ಅಸಾಮಾನ್ಯ.
*ವಿಶ್ವನಾಥ ಭಟ್ , ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.