![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 29, 2021, 7:20 AM IST
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆಯು ತಗ್ಗುತ್ತಿರುವಂತೆಯೇ 3ನೇ ಅಲೆಯ ಆತಂಕ ಶುರುವಾಗತೊಡಗಿದೆ. ಈ ಬಾರಿ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡಿದ್ದು, 3ನೇ “ಸಮರ’ವನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಆರಂಭಿಸಿವೆ. ಅದರಲ್ಲೂ ವಿಶೇಷವಾಗಿ, ಮುಂದಿನ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಎಂಬ ವಾದಗಳ ಹಿನ್ನೆಲೆಯಲ್ಲಿ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಸರಕಾರಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾರಂಭಿಸಿವೆ.
ಮಕ್ಕಳ ಕೋವಿಡ್ ಆರೈಕೆ ಕೇಂದ್ರಗಳ ಬೆಡ್ ಗಳ ಹೆಚ್ಚಳದಿಂದ ಹಿಡಿದು 12 ವರ್ಷದೊಳಗಿನ ಮಕ್ಕಳಿರುವವರಿಗೆ ಲಸಿಕೆ ವಿತರಣೆಯಲ್ಲಿ ಆದ್ಯತೆ, ಆಕ್ಸಿಜನ್ ಉತ್ಪಾದನೆಗೆ ಒತ್ತು, ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಳದವರೆಗೆ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿವೆ.
ಉತ್ತರಪ್ರದೇಶ ಸರಕಾರವು ಈಗಾಗಲೇ 12 ವರ್ಷಕ್ಕಿಂತ ಕೆಳಗಿನ ಮಕ್ಕಳಿರುವ ಹೆತ್ತವರಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ. ಗೋವಾ ಸರಕಾರವು 2 ವರ್ಷದೊಳಗಿನ ಮಕ್ಕಳಿರುವ, ಎದೆಹಾಲುಣಿಸುವ ತಾಯಂದಿರಿಗೆ ಲಸಿಕೆಯಲ್ಲಿ ಆದ್ಯತೆ ನೀಡುವುದಾಗಿ ಹೇಳಿದೆ. ಮಹಾರಾಷ್ಟ್ರ ಸರಕಾರವು ಮಕ್ಕಳ ಕೋವಿಡ್ ಬೆಡ್ ಗಳ ಸಂಖ್ಯೆಯನ್ನು ಈಗಿರುವ 600ರಿಂದ 2,300ಕ್ಕೆ ಹೆಚ್ಚಿಸುವತ್ತ ಹೆಜ್ಜೆಯಿಟ್ಟಿದೆ. ಹಲವು ರಾಜ್ಯಗಳು ತಜ್ಞರ ಸಮಿತಿ ಮತ್ತು ಕಾರ್ಯಪಡೆಯನ್ನು ರಚಿಸಿವೆ.
ಹೋರಾಟಕ್ಕೆ ಸಿದ್ಧತೆ
ಕೊರೊನಾ ಸೋಂಕಿನ 3ನೇ ಅಲೆಯ ಸಂಭಾವ್ಯತೆಯನ್ನು ಮನಗಂಡು, ಅದನ್ನು ಎದುರಿಸಲು ರಾಜ್ಯ ಸರಕಾರಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ.
ಮಕ್ಕಳ ಮೇಲೆ ಗಮನ
-ಬಹುತೇಕ ರಾಜ್ಯಗಳಿಂದ “ಮಕ್ಕಳ ಕೋವಿಡ್ ಆರೈಕೆ ಬೆಡ್’ ಗಳ ಸಂಖ್ಯೆ ಹೆಚ್ಚಳ
– ಛತ್ತೀಸ್‌ಗಡ, ಗೋವಾ, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸರಕಾರಗಳಿಂದ “ಮಕ್ಕಳ ಚಿಕಿತ್ಸಾ ನಿಯಮ’ ಸಿದ್ಧತೆ
– ಮಕ್ಕಳಿಗೆ ಸಂಬಂಧಿಸಿದ ಟಾಸ್ಕ್ ಫೋರ್ಸ್ ರಚಿಸಿದ ತ.ನಾಡು, ಪ.ಬಂಗಾಲ ಸರಕಾರ
– ಮಹಾರಾಷ್ಟ್ರ, ಪಂಜಾಬ್ ನಲ್ಲಿ ವೈದ್ಯರು/ ಅರೆವೈದ್ಯಕೀಯ ಸಿಬಂದಿಗೆ ತರಬೇತಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.