ಕೃಷ್ಯುತ್ಪನ್ನ ಸಾಗಣೆಗೆ ಹಸುರು ಬಸ್! ಕೆಎಸ್ಸಾರ್ಟಿಸಿ ವಿನೂತನ ಹೆಜ್ಜೆ
Team Udayavani, Jul 17, 2021, 7:10 AM IST
ಮಂಗಳೂರು: ರೈತರ ಕೃಷ್ಯುತ್ಪನ್ನಗಳಾದ ತರಕಾರಿ, ಹಣ್ಣುಗಳನ್ನು ಅಗತ್ಯ ಮಾರುಕಟ್ಟೆಗಳಿಗೆ ಸಾಗಿಸಲು ಅನುಕೂಲವಾಗುವಂತೆ “ಹಸುರು ಬಸ್’ ಸೇವೆಯನ್ನು ಒದಗಿಸಲು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಮುಂದಾಗಿದೆ.
ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೂಂದೆಡೆಗೆ ಸಾಗಿಸಲು ರೈಲ್ವೇಯು ಕಿಸಾನ್ ರೈಲು ಸೇವೆಯನ್ನು ಆರಂಭಿಸಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಹಣ್ಣು, ತರಕಾರಿ ಸರಬರಾಜು ಮಾಡಲು ಹಸುರು ಬಸ್ ಆರಂಭಿಸಿ ಹಂತಹಂತವಾಗಿ ರಾಜ್ಯ ವ್ಯಾಪಿಯಾಗಿ ವಿಸ್ತರಿಸುವ ಯೋಜನೆ ಕೆಎಸ್ಸಾರ್ಟಿಸಿಯದು.
ಸದ್ಯ ತರಕಾರಿ ಸಾಗಾಟಕ್ಕೆ ಹೆಚ್ಚಾಗಿ ಲಾರಿ ಬಳಕೆಯಾಗುತ್ತಿದೆ. ಇದರಿಂದ ಸಾಗಾಟ ವೆಚ್ಚ ಹೆಚ್ಚು. ಆದರೆ “ಗ್ರೀನ್ ಬಸ್’ ಮೂಲಕ ವಿಶೇಷ ರಿಯಾಯಿತಿ ದರದಲ್ಲಿ ಸಾಗಿಸಲು ಕೆಎಸ್ಸಾರ್ಟಿಸಿ ಅವಕಾಶ ಒದಗಿಸಲಿದೆ. ಈಗಾಗಲೇ 10 ಲಕ್ಷ ಕಿ.ಮೀ. ಕ್ರಮಿಸಿದ ಸುರಕ್ಷಿತ ಬಸ್‌ಗಳ ಒಳ ಭಾಗ ವನ್ನು ನವೀಕರಿಸಿಕೊಂಡು ಇದಕ್ಕಾಗಿ ಬಳಸಲಾಗುತ್ತದೆ.
10 ವರ್ಷ ಮೇಲ್ಪಟ್ಟ 565 ಬಸ್‌ಗಳು
ಕೆಎಸ್ಸಾರ್ಟಿಸಿ ಬಳಿ 8,738 ಬಸ್‌ಗಳಿದ್ದು, 10 ವರ್ಷ ಮೇಲ್ಪಟ್ಟ 565 ಬಸ್‌ಗಳಿವೆ. ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ 11, ತುಮಕೂರಿನಲ್ಲಿ 57, ಕೋಲಾರ- 18, ಚಿಕ್ಕಬಳ್ಳಾಪುರ= 32, ಮೈಸೂರು ನಗರ ಸಾರಿಗೆ- 188, ಮೈಸೂರು ಗ್ರಾಮಾಂತರ- 76, ಮಂಡ್ಯ- 36, ಚಾಮರಾಜನಗರ -33, ಹಾಸನ- 312, ಮಂಗಳೂರು- 44, ಪುತ್ತೂರು- 20, ದಾವಣಗೆರೆ -2, ಶಿವಮೊಗ್ಗ- 13, ಚಿತ್ರದುರ್ಗದಲ್ಲಿ 4 ಬಸ್‌ಗಳಿವೆ.
ಕೆಎಸ್ಸಾರ್ಟಿಸಿ ವಿನೂತನ ಹೆಜ್ಜೆ
ಲಾಕ್‌ಡೌನ್, ಸಿಬಂದಿ ಮುಷ್ಕರ ಸಹಿತ ಹಲವು ಕಾರಣಗಳಿಂದ ಕೆಎಸ್ಸಾರ್ಟಿಸಿಯ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಅದನ್ನು ಸರಿ ದೂಗಿಸುವ ನಿಟ್ಟಿನಲ್ಲಿ ಒಂದೊಂದೇ ವಿನೂತನ ಹೆಜ್ಜೆಗಳನ್ನು ಇಡುತ್ತಿದೆ. ಈಗಾಗಲೇ ಹಳೆಯ ಬಸ್‌ಗಳನ್ನು ಉಪಯೋಗಿಸಿಕೊಂಡು ಆಮ್ಲ ಜನಕ ಬಸ್, ಸಂಚಾರಿ ಶೌಚಾಲಯ, ಸಂಚಾರಿ ಗ್ರಂಥಾಲಯ ಸಹಿತ ವಿನೂತನ ಯೋಜನೆ ಗಳನ್ನು ಪರಿಚಯಿಸಿದೆ.
ಒಂದು ಕಡೆಯಿಂದ ಮತ್ತೂಂದು ಕಡೆಗೆ ತರಕಾರಿ ಒಯ್ಯುವುದಕ್ಕಾಗಿ ಈಗಾಗಲೇ ಕಿಸಾನ್ ರೈಲು ಸೇವೆ ಇದ್ದು, ಅದೇ ರೀತಿ ಹಸುರು ಬಸ್ ಪರಿಚಯಿಸಲು ಮುಂದಾಗಿದ್ದೇವೆ. ಸದ್ಯದಲ್ಲೇ ಈ ಯೋಜನೆಯನ್ನು ಆರಂಭಿಸಲಾಗುವುದು.
– ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.