Watch: ವರದಕ್ಷಿಣೆಗೆ ಬೇಡಿಕೆ ಇಟ್ಟ ವರನನ್ನು ಮರಕ್ಕೆ ಕಟ್ಟಿ ಹಾಕಿ ಒತ್ತೆಯಾಳನ್ನಾಗಿಸಿದ್ರು!
ಸಂಧಾನಕ್ಕಾಗಿ ಮಾತುಕತೆ ನಡೆಸಿದ್ದರೂ ಕೂಡಾ ಅದು ವಿಫಲವಾಗಿತ್ತು.
Team Udayavani, Jun 16, 2023, 11:22 AM IST
ಲಕ್ನೋ: ವಿವಾಹ ಮಂಟಪದಲ್ಲಿ ವರ, ವಧುವಿನ ಕೊರಳಿಗೆ ಮಾಲೆಯನ್ನು ಹಾಕುವ ಮೊದಲು ವರದಕ್ಷಿಣಿಗೆ ಬೇಡಿಕೆ ಇಟ್ಟಿದ್ದ, ಇದರಿಂದ ವಧುವಿನ ಪೋಷಕರು ಆಘಾತಕ್ಕೊಳಗಾಗಿದ್ದರು. ಬಳಿಕ ವರನನ್ನು ಮರಕ್ಕೆ ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರತಾಪ್ ಗಢದಲ್ಲಿ ನಡೆದಿದೆ.
ಇದನ್ನೂ ಓದಿ:UCC: ಧರ್ಮಗುರುಗಳು ಮಠದಲ್ಲಿದ್ದು ಪೂಜೆ ನಡೆಸಬೇಕು, ರಾಜಕೀಯವಲ್ಲ; ಚಂದ್ರಶೇಖರ್ ರಾವ್ ಗುಡುಗು
ವರನನ್ನು ಮರಕ್ಕೆ ಕಟ್ಟಿ ಹಾಕಿ, ಒತ್ತೆಯಾಳನ್ನಾಗಿ ಇರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿವಾಹ ಮಂಟಪದಲ್ಲಿ ವಧು-ವರ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲೇ, ವರ ಅಮರ್ ಜಿತ್ ವರ್ಮಾ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ.
ಈ ಸಂದರ್ಭದಲ್ಲಿ ಅಮರ್ ಜಿತ್ ಕುಟುಂಬ ಸದಸ್ಯರು, ಗೆಳೆಯರು ವಧುವಿನ ಸಂಬಂಧಿಕರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದು, ಇದರಿಂದಾಗಿ ಎರಡು ಕುಟುಂಬಗಳ ನಡುವೆ ಹೊಯ್ ಕೈ ನಡೆದಿರುವುದಾಗಿ ವರದಿ ತಿಳಿಸಿದೆ.
ತೀವ್ರ ಆಕ್ರೋಶಗೊಂಡಿದ್ದ ವಧುವಿನ ಸಂಬಂಧಿಕರು ವರನನ್ನು ಹಲವು ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿದ್ದರು. ಎರಡು ಕುಟುಂಬಗಳ ಹಿರಿಯರು ಸಂಧಾನಕ್ಕಾಗಿ ಮಾತುಕತೆ ನಡೆಸಿದ್ದರೂ ಕೂಡಾ ಅದು ವಿಫಲವಾಗಿತ್ತು.
प्रतापगढ की तस्वीरें देखिए
दूल्हे ने किया शादी से इंकार ,दूल्हे को बंधक बनाकर दी गई तालिबानी सज़ा#pratapgarh pic.twitter.com/OtqTdzNj5A
— Rahul Sisodia (@Sisodia19Rahul) June 15, 2023
ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ವರನನ್ನು ಬಂಧಮುಕ್ತಗೊಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಪೊಲೀಸ್ ಠಾಣೆಯಲ್ಲೂ ಸಂಧಾನ ವಿಫಲಗೊಂಡಿರುವುದಾಗಿ ಪೊಲೀಸ್ ಠಾಣಾಧಿಕಾರಿ ಮಂಥಾತಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.